Friday, Jan 22 2021 | Time 12:17 Hrs(IST)
  • ಶಿವಮೊಗ್ಗ ದುರಂತ; ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ
  • ಶಿವಮೊಗ್ಗ ಹುಣಸೋಡು ಸ್ಫೋಟ; ಮೂವರ ಬಂಧನ; ನಾಳೆ ಮುಖ್ಯಮಂತ್ರಿ ಭೇಟಿ
  • ಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪ
  • ಇಬ್ಬರು ಅಂತಾರಾಜ್ಯ ಕನ್ನಕಳವು ಆರೋಪಿಗಳ ಬಂಧನ; 75 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ
  • ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ
  • ಸರ್ಕಾರದ ಪ್ರಸ್ತಾಪ ತಿರಸ್ಕರಿದ ರೈತರು, ಇಂದು 11 ನೇ ಸುತ್ತಿನ ಸಂಧಾನ ಸಭೆ
  • ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ; ಮುಖ್ಯಮಂತ್ರಿ
  • ಶಿವಮೊಗ್ಗ ದುರಂತ; ಪ್ರಧಾನಿ ಮೋದಿ ಸಂತಾಪ
  • ಶಿವಮೊಗ್ಗ ದುರಂತ; ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಆದೇಶ
  • ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೈಟ್, ಜಿಲೆಟಿನ್ ಸ್ಫೋಟ; 8ಕ್ಕೂ ಅಧಿಕ ಮಂದಿ ಸಾವು
National Share

ಮತ್ತೆ ಪೆಟ್ರೋಲ್, ಡೀಸಲ್ ದರ ಹೆಚ್ಚಳ

ಮತ್ತೆ ಪೆಟ್ರೋಲ್, ಡೀಸಲ್ ದರ ಹೆಚ್ಚಳ
ಮತ್ತೆ ಪೆಟ್ರೋಲ್, ಡೀಸಲ್ ದರ ಹೆಚ್ಚಳ

ನವದೆಹಲಿ, ಜ 13 (ಯುಎನ್‍ಐ) ಪೆಟ್ರೋಲ್, ಡೀಸಲ್ ದರ ಮತ್ತೆ ಹೆಚ್ಚಳವಾಗಿದೆ.ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಐದು ದಿನಗಳ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದು, ವಾಣಿಜ್ಯ ನಗರಿ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91 ರೂಗಳನ್ನು ದಾಟಿದ್ದು, 91.07 ರೂಗಳನ್ನು ತಲುಪಿದೆ.

ಇದು 2018 ರ ಅಕ್ಟೋಬರ್ 4 ರಂದು ದಾಖಲೆಯ ಬೆಲೆ 91.34 ರೂ.ಗಿಂತ ಕೇವಲ 27 ಪೈಸೆ ಕಡಿಮೆಯಾಗಿದೆ. 29 ದಿನಗಳವರೆಗೆ ಬೆಲೆಗಳು ಸ್ಥಿರವಾಗಿದ್ದ ನಂತರ ತೈಲ ಕಂಪನಿಗಳು ಜನವರಿ 06 ಮತ್ತು 07 ರಂದು ಎರಡೂ ಇಂಧನಗಳ ಬೆಲೆಯನ್ನು ಹೆಚ್ಚಿಸಿದ್ದವು. ಜನವರಿ 6 ಮತ್ತು 7 ರಂದು ಪೆಟ್ರೋಲ್ ಬೆಲೆ 49 ಪೈಸೆ ಆಗಿದ್ದರೆ, ಡೀಸೆಲ್ ಬೆಲೆಯನ್ನು 51 ಪೈಸೆ ಹೆಚ್ಚಿಸಿದೆ. ಬುಧವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಿದ್ದು, ಪೆಟ್ರೋಲ್ ಹೊಸ ದಾಖಲೆಯ ಮಟ್ಟವನ್ನು 84.45 ರೂ.ಗೆ ತಲುಪಿದೆ. ಡೀಸೆಲ್ ಲೀಟರ್‌ಗೆ 74.63 ರೂ.ಗೆ ಏರಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಹೊಸ ವರ್ಷದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಲವಾದ ಪ್ರವೃತ್ತಿ ಕಂಡುಬಂದಿದೆ. ತೈಲ ರಫ್ತು ದೇಶಗಳ ಸಂಸ್ಥೆ ಒಪೆಕ್ ಮಾರ್ಚ್‌ನಲ್ಲೂ ಉತ್ಪಾದನಾ ಕಡಿತವನ್ನು ಮುಂದುವರಿಸಲು ಒಪ್ಪಿಕೊಂಡಿದ್ದು, ಇದು ಬೆಲೆಗಳನ್ನು ಹೆಚ್ಚಿಸಿದೆ.

ಬುಧವಾರ ದೆಹಲಿಯಲ್ಲಿ ಪೆಟ್ರೋಲ್ 84.45 ರೂ ಮತ್ತು ಡೀಸೆಲ್ ಲೀಟರ್‌ಗೆ 74.63 ರೂ ಮತ್ತು ಮುಂಬೈಯಲ್ಲಿ ಪೆಟ್ರೋಲ್ 91.07 ಲೀಟರ್ ಮತ್ತು ಡೀಸೆಲ್ 81.34 ರೂ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ 85.92 ಮತ್ತು ಡೀಸೆಲ್ 78.22 ರೂ ಮತ್ತು ಚೆನ್ನೈನಲ್ಲಿ ಪೆಟ್ರೋಲ್ 87.18 ಮತ್ತು ಡೀಸೆಲ್ 79.95 ರೂ.ಗಳಷ್ಟಿದೆ.

ಯುಎನ್‍ಐ ಎಸ್‍ಎ 1125

More News

ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದ

22 Jan 2021 | 10:13 AM

 Sharesee more..
ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

21 Jan 2021 | 7:22 PM

ನವದೆಹಲಿ, ಜ 21 (ಯುಎನ್ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗಾಪುರದ ರಕ್ಷಣಾ ಸಚಿವ ಡಾ.ಎನ್.ಜಿ. ಎಂಗ್ ಹೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

 Sharesee more..