InternationalPosted at: Jan 21 2021 2:28PM Shareಮಧ್ಯ ಬಾಗ್ದಾದ್ನಲ್ಲಿ ಆತ್ಮಾಹುತಿ ದಾಳಿ: ಎಂಟು ಮಂದಿ ಸಾವುಬಾಗ್ದಾದ್, ಜ 21 (ಯುಎನ್ಐ) ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಇತರ 15 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಾಗ್ದಾದ್ನ ಕೇಂದ್ರ ವಲಯದ ಬಾಬ್ ಅಲ್ ಶಾರ್ಕಿಯಲ್ಲಿ ನಡೆದಿದೆ ಎಂದು ಭದ್ರತಾ ಮೂಲವನ್ನು ಉಲ್ಲೇಖಿಸಿ ಅಲ್ ಸುಮರಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಮೊದಲು, ರಾಜಧಾನಿಯ ಬಾಬ್ ಅಲ್-ಶೇಖ್ ಪ್ರದೇಶ ಮತ್ತು ತೈರನ್ ಚೌಕದಲ್ಲಿ ಸ್ಫೋಟದ ಶಬ್ದ ಕೇಳಿಸಿದೆ ಸುದ್ದಿಸಂಸ್ಥೆ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇರಾಕ್ ನಲ್ಲಿ ಅದರಲ್ಲೂ ರಾಜಧಾನಿ ಬಾಗ್ದಾದ್ ನಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿ ನಡೆದಿಲ್ಲ. ಆದರೆ, ಗುರುವಾರದ ಆತ್ಮಾಹುತಿ ದಾಳಿ ಘಟನೆ ಅಲ್ಲಿ ಆತಂಕವನ್ನು ಹೆಚ್ಚಿಸಿದೆ. ಯುಎನ್ಐ ಎಸ್ಎಲ್ಎಸ್ 1429