ನವದೆಹಲಿ, ಫೆ 22 (ಯುಎನ್ಐ) ಮಹದಾಯಿ ನದಿ ನೀರು ಹಂಚಿಕೆಯ ಮೇಲುಸ್ತುವಾರಿಗೆ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಸರ್ಕಾರ ಮಲಪ್ರಭಾದ ನೀರಿನ ಹರಿವನ್ನು ತಿರುಗಿಸುತ್ತಿದೆ ಎಂದು ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಈ ಸಂಬಂಧ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಿದೆ.
ಆದರೆ, ಮಹದಾಯಿ ನೀರಿನ ಹರಿವನ್ನು ತಿರುಗಿಸುತ್ತಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ.
ಗೋವಾ ಪರ ವಾದಿಸಿದ ಹಿರಿಯ ವಕೀಲ ನರಸಿಂಹನ್, ಪರಿಸರ ಸಮ್ಮತಿ ಸಿಗದೆ ರಾಜ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಮಹದಾಯಿ ನೀರನ್ನು ಮಲಪ್ರಭಾಕ್ಕೆ ತಿರುಗಿಸುತ್ತಿದೆ ಎಂದು ಆರೋಪಿಸಿದ್ದರು.
ಯುಎನ್ಐ ಎಸ್ಎಚ್ 1834