Tuesday, Aug 11 2020 | Time 19:21 Hrs(IST)
 • ಸಚಿನ್‌ ವೃತ್ತಿಬದುಕಿನ ಅತ್ಯಂತ ಅದೃಷ್ಟಶಾಲಿ ಇನಿಂಗ್ಸ್‌ ಬಗ್ಗೆ ಮಾತನಾಡಿದ ನೆಹ್ರಾ
 • ಪ್ರಣಬ್‌ ಮುಖರ್ಜಿ ಆರೋಗ್ಯ ವಿಚಾರಿಸಿದ ನಾಯ್ಡು
 • ದೇಶದಲ್ಲಿ ರೈಲುಗಳ ಸಂಚಾರ ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ
 • 50 ಓವರ್ ಗಳ ಸ್ಪರ್ಧೆಗೆ 'ರಚೇಲ್ ಹೆಹೋ ಫ್ಲಿಂಟ್ ಟ್ರೋಫಿ' ಹೆಸರು
 • ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ : ಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯಿಂದ ಕಾರ್ಯಾರಂಭ
 • ಸುಶಾಂತ್‌ ಪ್ರಕರಣ; ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
 • ಕೆ ಎಲ್‌ ರಾಹುಲ್‌ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದ ಶೆಲ್ಡನ್‌ ಕಾಟ್ರೆಲ್
 • ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಶೇಷ ಚೇತನ ಮೇಘನಾರನ್ನು ಅಭಿನಂದಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್
 • ಅಶೋಕ್ ಗೆಹ್ಲೋಟ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ !: ಸಚಿನ್ ಪೈಲೆಟ್
 • ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ 80 ರಷ್ಟು ಸೋಂಕು: ಪ್ರಧಾನಿ ಮೋದಿ
 • ಕೋವಿಡ್‌; 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
Entertainment Share

ಮೃಣಾಲ್ ಸೇನ್, ಗಿರೀಶ್ ಕರ್ನಾಡ್ ಗೆ ಐಎಫ್‌ಎಫ್‌ಕೆ ಗೌರವ

ತಿರುವನಂತಪುರಂ, ಡಿ ೯ (ಯುಎನ್‌ಐ) ಕೇರಳದ ೨೪ ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಖ್ಯಾತ ಚಲನಚಿತ್ರ ನಿರ್ಮಾಪಕರಾದ ಮೃಣಾಲ್ ಸೇನ್ ಮತ್ತು ಗಿರೀಶ್ ಕರ್ನಾಡ್ ಅವರಿಗೆ ಗೌರವ ಸಲ್ಲಿಸಿತು.
ಮೃಣಾಲ್ ಸೇನ್ ಅವರ ಚಿತ್ರ ’ಸಂದರ್ಶನ’ ಮತ್ತು ಕರ್ನಾಡ್ ಚಿತ್ರ ’ಸಂಸ್ಕಾರ’ ಸೋಮವಾರ ಹೋಮೇಜ್ ವಿಭಾಗದಲ್ಲಿ ಐಎಫ್‌ಎಫ್‌ಕೆ ಯಲ್ಲಿ ಪ್ರದರ್ಶನಗೊಂಡಿದೆ.
ಚಲನಚಿತ್ರ ವಿಮರ್ಶಕ ಪ್ರದೀಪ್ ಬಿಸ್ವಾಸ್ ಮೃಣಾಲ್ ಸೇನ್ ಅವರ ನೆನಪುಗಳನ್ನು ಹಂಚಿಕೊಂಡರು. ಅವರು ತಮ್ಮ ೨೮ ಚಲನಚಿತ್ರಗಳು ಮತ್ತು ಎರಡು ಸಾಕ್ಷ್ಯಚಿತ್ರಗಳಲ್ಲಿ ಸೇನ್ ಅವರ ಜೀವನ ಮತ್ತು ರಾಜಕೀಯದ ಬಗ್ಗೆ ಮಾತನಾಡಿದರು.
ಗಿರೀಶ್ ಕರ್ನಾಡ್ ಅವರ ಹಲವಾರು ವೈವಿಧ್ಯಮಯ ಚಿತ್ರಗಳ ಕುರಿತುನಿರ್ಮಾಪಕ ಬಿಸ್ವಾಸ್ ಮಾತನಾಡಿದರು.
೧೯೯೧ ರಲ್ಲಿ ಸೇನ್ ಅವರ ಸ್ನೇಹಿತ ಮತ್ತು ಛಾಯಾಗ್ರಾಹಕ ಕೆ. ಕೆ ಮಹಾಜನ್ ಅವರಿಗೆ ಬರೆದ ಪತ್ರವನ್ನು ಮಹಾಜನ್ ಅವರ ಪತ್ನಿ ಪ್ರಭಾ ಮಹಾಜನ್ ಓದಿದರು. ಚಲನಚಿತ್ರ ವಿಮರ್ಶಕ ಐ ಷಣ್ಮುಖದಾಸ್ ಗಿರೀಶ್ ಕರ್ನಾಡ್ ಅವರ ಜೀವನ ಮತ್ತು ಕೃತಿಗಳ ಬಗ್ಗೆ ವಿವರಿಸಿದರು.
ಅವರು ನಟನೆ, ನಾಟಕ ಮತ್ತು ಚಲನಚಿತ್ರ ನಿರ್ಮಾಣದ ಪಾಂಡಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ಗಿರೀಶ್ ಕರ್ನಾಡ್ ಕುರಿತ ಮಧುಜಾ ಜನಾರ್ಧನನ್ ಅವರ ಪುಸ್ತಕವನ್ನು ಪ್ರದೀಪ್ ಬಿಸ್ವಾಸ್ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಚಲಚಿತ್ರ ಅಕಾಡೆಮಿ ಅಧ್ಯಕ್ಷ ಕಮಲ್, ಉಪಾಧ್ಯಕ್ಷೆ ಬೀನಾ ಪಾಲ್ ಮತ್ತು ಉಪನಿರ್ದೇಶಕ ಎಚ್.ಶಾಜಿ ಉಪಸ್ಥಿತರಿದ್ದರು.
ಯುಎನ್‌ಐ ಎಸ್‌ಎ ವಿಎನ್ ೨೨೧೬
More News

"ಕಂಡ್ಹಿಡಿ ನೋಡೋಣ"

11 Aug 2020 | 4:30 PM

 Sharesee more..
‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

10 Aug 2020 | 7:03 PM

ಬೆಂಗಳೂರು, ಆ 10 (ಯುಎನ್‍ಐ) ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

 Sharesee more..
ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

10 Aug 2020 | 6:58 PM

ಬೆಂಗಳೂರು, ಆ 10 (ಯುಎನ್‍ಐ) ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

 Sharesee more..