Saturday, Feb 29 2020 | Time 15:18 Hrs(IST)
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
National Share

ಮಾದಕವಸ್ತು ಕಳ್ಳಸಾಗಣೆ ಹಾವಳಿ ತಡೆ: ಪರಸ್ಪರ ಸಹಕಾರಕ್ಕೆ ಷಾ ಮನವಿ

ಮಾದಕವಸ್ತು ಕಳ್ಳಸಾಗಣೆ ಹಾವಳಿ ತಡೆ: ಪರಸ್ಪರ ಸಹಕಾರಕ್ಕೆ ಷಾ ಮನವಿ
ಮಾದಕವಸ್ತು ಕಳ್ಳಸಾಗಣೆ ಹಾವಳಿ ತಡೆ: ಪರಸ್ಪರ ಸಹಕಾರಕ್ಕೆ ಷಾ ಮನವಿ

ನವದೆಹಲಿ, ಫೆಬ್ರವರಿ 13(ಯುಎನ್ಐ) ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತಡೆಗೆ ಬಿಮ್ಸ್ಟೆಕ್ ದೇಶಗಳ ನಡುವೆ ಪರಸ್ಪರ ಸಹಕಾರ ಬಹಳ ಅಗತ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಒತ್ತಿ ಹೇಳಿದ್ದಾರೆ.

ಬಿಮ್‌ಸ್ಟೆಕ್ ದೇಶಗಳಿಗೆ ಮಾದಕವಸ್ತು ಕಳ್ಳಸಾಗಣೆ ನಿಯಂತ್ರಿಸುವ ಕುರಿತ ಎರಡು ದಿನಗಳ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಅವರು, ಈ ಹಾವಳಿಯನ್ನು ತಡೆಗಟ್ಟಲು ಭಾರತವು ಬಲವಾದ ನೀತಿ ಸಿದ್ಧಪಡಿಸಿದೆ ಎಂದರು.

ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಏಜೆನ್ಸಿಗಳ ನಡುವೆ ಕಾನೂನು ಕ್ರಮ ಮತ್ತು ಸಮನ್ವಯದ ನೀತಿಗಳನ್ನೂ ಪರಿಶೀಲಿಸಿದೆ ಎಂದೂ ಅವರು ಹೇಳಿದರು.

ಭಾಗವಹಿಸುವ ದೇಶಗಳಿಗೆ (ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ನೇಪಾಳ ಮತ್ತು ಭೂತಾನ್) ಭರವಸೆ ನೀಡಿ, ಯಾವುದೇ ಭಾರತವು ವಿಶ್ವದ ಯಾವುದೇ ಭಾಗದಿಂದ ಮಾದಕ ದ್ರವ್ಯ ಪ್ರವೇಶಕ್ಕೆ ಅನುಮತಿ ಕೊಡುವುದಿಲ್ಲ ಮೇಲಾಗಿ ರಫ್ತಿಗೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾಗವಹಿಸುವ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವುದರ ಜೊತೆಗೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಹಂಚಿಕೊಳ್ಳಲಿದೆ ಮತ್ತು ಬಂಗಾಳಕೊಲ್ಲಿನ ರಾಷ್ಟ್ರಗಳು ಈ ಹಾವಳಿ ತಡೆಗೆ ಬಹಳ ನಿಕಟತೆ, ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ ಎಂದು ಒತ್ತಿ ಹೇಳಿದರು.

ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯವನ್ನು ಹೊಂದಲು ವಿಶ್ವಸಂಸ್ಥೆ (ಯುಎನ್) ಮತ್ತು ಇಂಟರ್‌ಪೋಲ್‌ನೊಂದಿಗೆ ಭಾರತ ಪ್ರಮುಖ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ತನಿಖಾ ಸಂಸ್ಥೆಗಳ ನಡುವೆ ಉತ್ತಮ ಸಹಕಾರಕ್ಕಾಗಿ ರಾಷ್ಟ್ರೀಯ ಸಮನ್ವಯ ಘಟಕ ಸ್ಥಾಪನೆ, ಮಾದಕ ವಸ್ತುಗಳ ತಪಾಸಣೆ ಗುರುತಿಸುವಿಕೆಗಾಗಿ ಜಂಟಿ ಸಮಿತಿ,ರಚನೆ ಬಗ್ಗೆಯೂ ಕ್ರಮ ಕೈಗೊಂಡಿದೆ ಎಂದರು.

ಜಾರಿ ತನಿಖಾ ಸಂಸ್ಥೆಗಳು ವಿದೇಶಿಯರು ಸೇರಿದಂತೆ ಎರಡು ಲಕ್ಷ ಜನರನ್ನು ಬಂಧಿಸಿವೆ ಎಂದು ಸಚಿವರು ಹೇಳಿದರು.

ಯುಎನ್ಐ ಕೆಎಸ್ಆರ್