SpecialPosted at: Feb 28 2021 10:01PM Shareಮೋದಿ ಈಗಲೂ ಹೆಮ್ಮೆಯ ಚಾಯ್ ವಾಲ, ಹಾಡಿ ಹೊಗಳಿದ ಗುಲಾಮ್ ನಬಿ ಆಜಾದ್..!ಶ್ರೀನಗರ, ಫೆ 28 (ಯುಎನ್ಐ ) ಪ್ರಧಾನಿ ನರೇಂದ್ರ ಮೋದಿ ಉನ್ನತ ಸ್ಥಾನಕ್ಕೇರಿದರರೂ ತಮ್ಮ ಮೂಲ ಬೇರನ್ನು ಮರೆತಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಹಾಡಿ ಹೊಗಳಿದ್ದಾರೆ. ಸದಾ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುವ ಕಾಂಗ್ರೆಸ್ ನಾಯಕರ ಪೈಕಿ ಅಪವಾದ ಎಂಬಂತೆ ಪ್ರಧಾನಿ ಕಾರ್ಯ ಶೈಲಿಯನ್ನು ಮನಸಾರೆ ಹೊಗಳಿ ಎಲ್ಲರನ್ನೂ ಚಕಿತಗೊಳಿಸಿದರು. ಭಾನುವಾರ ಶ್ರೀನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾಕಷ್ಟು ನಾಯಕರ ಕೆಲ ಒಳ್ಳೆಯ ಗುಣಗಳನ್ನು ಮೆಚ್ಚಿಕೊಳ್ಳುತ್ತೇನೆ. ನಾನು ಸಹ ಹಳ್ಳಿಯಿಂದ ಬಂದಿದ್ದು ಮತ್ತು ನನಗೆ ಅದರ ಬಗ್ಗೆ ಹೆಮ್ಮೆಯಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಹ ಹಳ್ಳಿಯಿಂದಲೇ ಬಂದಿದ್ದು ಮೇಲಾಗಿ ಟೀ ಮಾರಿಕೊಂಡು ಜೀವನ ನಡೆಸಿದರೂ ಮೂಲ ಬೇರು ಮರೆಯದೇ ಇರುವುದು ಎಲ್ಲರಿಗೂ ಮೆಚ್ಚಿಗೆಯಾಗುವ ಗುಣ ಎಂದು ಹೇಳಿದರು. ನಾವು ಪರಸ್ಪರ ರಾಜಕೀಯವಾಗಿ ವಿರೋಧಿಗಳಿರಬಹುದು ಆದರೆ ಅವರು ತಮ್ಮ ಮೂಲ ಬೇರನ್ನು ಇಂದಿಗೂ ಮರೆಯದಿರುವುದು ನಿಜಕ್ಕೂ ಮೆಚ್ಚಲೇಬೇಕಾದ ವಿಷಯ, ಪಿಎಂ ಮೋದಿ ಈಗಲೂ ಹೆಮ್ಮೆಯ ಚಾಯ್ ವಾಲ ಎನಿಸಿಕೊಂಡಿದ್ದಾರೆ ಎಂದು ಪ್ರತಿ ಹಂತದಲ್ಲೂ ಕಾಂಗ್ರೆಸ್ ನಾಯಕ ಆಜಾದ್ ಮೋದಿ ಗುಣಗಾನ ಮಾಡಿದರು.ಯುಎನ್ಐ ಕೆಎಸ್ಆರ್ 2201