Tuesday, Jan 21 2020 | Time 00:17 Hrs(IST)
National Share

ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್
ಮೋದಿಯನ್ನು ಶಿವಾಜಿಗೆ ಹೋಲಿಕೆ; ವಿವಾದ ಅಂತ್ಯಗೊಳಿಸಿ-ಜಾವಡೇಕರ್

ನವದೆಹಲಿ, ಜ 14 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿಗೆ ಹೋಲಿಸಿದ ಪುಸ್ತಕ ಬಿಜೆಪಿಗೆ ಸಂಬಂಧಿಸಿದಲ್ಲವಾದ್ದರಿಂದ ಈ ಕುರಿತು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚಿಗೆ ಬಿಡುಗಡೆಗೊಂಡಿರುವ ಪುಸ್ತಕಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಈಗಾಗಲೇ ಲೇಖಕರು ಕ್ಷಮೆಯಾಚಿಸಿದ್ದು, ಪುಸ್ತಕವನ್ನೂ ಹಿಂಪಡೆದಿದ್ದಾರೆ. ಆದ್ದರಿಂದ ಈಗ ವಿವಾದವನ್ನು ಸ್ಥಗಿತಗೊಳಿಸಬೇಕು ಎಂದಿದ್ದಾರೆ.

ಶಿವಾಜಿ ಮಹಾರಾಜ್ ಓರ್ವ ಶ್ರೇಷ್ಠ ಆಡಳಿತಗಾರ ಮತ್ತು ದಂತಕತೆಯ ರಾಜನಾಗಿದ್ದರು. ಅವರು ಸದಾ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದರು. ಅವರು ಶತಮಾನಗಳ ನಂತರವೂ ಇತರರಿಗೆ ಸ್ಫೂರ್ತಿಯಾಗಿದ್ದು, ಅವರನ್ನು ಇತರರಿಗೆ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ನಡುವೆ, ಶಿವಸೇನೆಯ ಮುಖವಾಣಿ 'ಸಾಮ್ನಾ' ತನ್ನ ಸಂಪಾದಕೀಯದಲ್ಲಿ ಮೋದಿಯನ್ನು ಶಿವಾಜಿಗೆ ಹೋಲಿಸಿರುವುದು ಭಟ್ಟಂಗಿತನದ ಸಂಕೇತವಾಗಿದ್ದು, ದೇಶ, ದೇವರು ಮತ್ತು ಧರ್ಮಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದೆ.

ಶಿವಾಜಿಯ ಭಕ್ತರಾದ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸಂಬಾಜಿ ರಾಜೇ ಕೂಡ ಈ ಪುಸ್ತಕವನ್ನು ನಿಷೇಧಿಸುವಂತೆ ಬೇಡಿಕೆಯಿಟ್ಟಿದ್ದಾರೆ.

ಬಿಜೆಪಿ ಕೂಡ ಪುಸ್ತಕದಲ್ಲಿನ ಅಂಶಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕ ಜೈ ಭಗವಾನ್ ಗೋಯಲ್ ಅವರು ತಮ್ಮ ಪುಸ್ತಕದಲ್ಲಿ ಮೋದಿಯನ್ನು ಶಿವಾಜಿಗೆ ಹೋಲಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕ್ಷಮೆಯಾಚಿಸಿರುವ ಗೋಯಲ್, ಆ ಅಧ್ಯಾಯವನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಯುಎನ್ಐ ಎಸ್ಎಚ್ 1221

More News

ವಿಪಕ್ಷಗಳ ನಡೆ ಕುರಿತು ಮೋದಿ ವಾಗ್ದಾಳಿ

20 Jan 2020 | 10:54 PM

 Sharesee more..
‘ಚಲೋ ಅಸೆಂಬ್ಲಿ’: ಅಮರಾವತಿಯಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ

‘ಚಲೋ ಅಸೆಂಬ್ಲಿ’: ಅಮರಾವತಿಯಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ

20 Jan 2020 | 7:59 PM

ಅಮರಾವತಿ, ಜ 20(ಯುಎನ್‍ಐ)- ಅಮರಾವತಿ ಪರಿರಕ್ಷಣಾ ಸಮಿತಿಯ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಸೋಮವಾರ ಕರೆ ನೀಡಿದ್ದ ‘ಚಲೋ ಅಸೆಂಬ್ಲಿ’ ಹಿನ್ನೆಲೆಯಲ್ಲಿ ವಿಧಾನಸಭಾ ಕಟ್ಟಡದತ್ತ ಧಾವಿಸುವುದನ್ನು ತಡೆಯಲು ಪೊಲೀಸರು ಭಾರಿ ಸಂಖ್ಯೆಯ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

 Sharesee more..
ತಂಜಾವೂರು ವಾಯು ಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

ತಂಜಾವೂರು ವಾಯು ಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

20 Jan 2020 | 7:45 PM

ತಂಜಾವೂರು, ಜ 20(ಯುಎನ್‍ಐ)- ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೋಮವಾರ ಸೇರ್ಪಡೆಗೊಳಿಸಲಾಗಿದೆ.

 Sharesee more..