Tuesday, Oct 20 2020 | Time 14:32 Hrs(IST)
  • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
  • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
  • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
  • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
  • ನಾಳೆ ಕೇಂದ್ರ ಸಂಪುಟ ಸಭೆ
  • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
  • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
  • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
  • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
  • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
  • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
  • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
  • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
  • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
Sports Share

ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ

ದುಬೈ, ಸೆ. 18 (ಯುಎನ್ಐ)
ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯು ಸೆಪ್ಟೆಂಬರ್‌ 19ರಂದು ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಕಳೆದ ಬಾರಿಯ ರನ್ನರ್ಸ್‌ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಣ ಉದ್ಘಾಟನಾ ಪಂದ್ಯದೊಂದಿಗೆ ಶುರುವಾಗಲಿದೆ.
ಈ ಬಗ್ಗೆ ಮಾತಿಗಿಳಿದಿರುವ ನಾಲ್ಕು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಮಹೇಲಾ ಜಯವರ್ಧನೆ, ಉದ್ಘಾಟನಾ ಪಂದ್ಯಕ್ಕೂ ಮೊದಲೇ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಯಾರೆಂದು ಬಹಿರಂಗ ಪಡಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಐಪಿಎಲ್‌ 2020 ಟೂರ್ನಿ ಸಲುವಾಗಿ ನಡೆದ ಆಟಗಾರರ ಹರಾಜಿನಲ್ಲಿ 2 ಕೋಟಿ ರೂ. ಖರ್ಚು ಮಾಡಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಟಿ20 ಸ್ಪೆಷಲಿಸ್ಟ್‌ ಕ್ರಿಸ್‌ ಲಿನ್‌ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿ ಮಾಡಿತ್ತು. ಆದರೂ ಕೂಡ ಈ ಬಾರಿ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮತ್ತು ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ'ಕಾಕ್‌ ಅವರನ್ನೇ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಡಿಸುವುದಾಗಿ ತಂಡದ ಮುಖ್ಯ ಕೋಚ್‌ ಜಯವರ್ಧನೆ ಹೇಳಿದ್ದಾರೆ. 2019ರ ಆವೃತ್ತಿಯಲ್ಲೂ ರೋಹಿತ್ ಮತ್ತು ಡಿ'ಕಾಕ್‌ ಜೋಡಿ ಆರಂಭಿಕರಾಗಿ ಆಡಿ ಟೂರ್ನಿಯಲ್ಲಿ ಧೂಳೆಬ್ಬಿಸಿತ್ತು.
"ತಂಡದಲ್ಲಿ ಹೆಚ್ಚುವರಿ ಆಯ್ಕೆಗಳು ಇರುವುದು ಅತ್ಯುತ್ತಮ ಸಂಗತಿ. ಕ್ರಿಸ್‌ ಲಿನ್‌ ತಂಡಕ್ಕೆ ಅತ್ಯಂತ ಮಹತ್ವದ ಸೇರ್ಪಡೆ. ಆದರೆ, ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಕ್ವಿಂಟನ್‌ ಡಿ'ಕಾಕ್‌ ಅವರ ಜೋಡಿ ಅಮೋಘವಾಗಿದೆ. ಅವರಿಬ್ಬರ ನಡುವೆ ಹೊಂದಾಣಿಕೆಯೂ ಅತ್ಯುತ್ತಮವಾಗಿದೆ," ಎಂದು ಶುಕ್ರವಾರ ನಡೆದ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಮಹೇಲಾ ಹೇಳಿದ್ದಾರೆ.
"ಇಬ್ಬರೂ ಕೂಡ ಅನುಭವಿ ಬ್ಯಾಟ್ಸ್‌ಮನ್‌ಗಳು ಹಾಗೂ ಅಷ್ಟೇ ಉತ್ತಮ ನಾಯಕರು ಕೂಡ. ಈ ಜೋಡಿಯಲ್ಲಿ ಯಾವುದೇ ಉಳುಕು ಇಲ್ಲದೇ ಇರುವಾಗ ಅದನ್ನು ಬದಲಾಯಿಸುವ ಕೆಲಸ ಏಕೆ ಮಾಡಬೇಕು. ಲಿನ್‌ ಹೆಚ್ಚುವರಿ ಆಯ್ಕೆಯಾಗಿ ತಂಡದಲ್ಲಿ ಇರುವುದು ನಮಗೆ ಅಗತ್ಯದ ಹೊಂದಾಣಿಕೆ ತಂದುಕೊಳ್ಳುವ ಅವಕಾಶ ನೀಡಿದೆ. ಹಲವು ವರ್ಷಗಳಿಂದ ನಮ್ಮ ತಂಡ ಹೆಚ್ಚುವರಿ ಆಯ್ಕೆಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ತಂಡದ ರಣತಂತ್ರವನ್ನು ಎದುರಾಳಿಗಳು ಅಂದಾಜಿಸಲು ಸಾಧ್ಯವಾಗದೇ ಇರುವಂತೆ ನೋಡಿಕೊಳ್ಳುತ್ತೇವೆ," ಎಂದು ಶ್ರೀಲಂಕಾದ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟ್ಸ್‌ಮನ್‌ 43 ವರ್ಷದ ಮಹೇಲಾ ವಿವರಿಸಿದ್ದಾರೆ.
ಕಳೆದ ಬಾರಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಕೇವಲ 1 ರನ್‌ ಅಂತರದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದು ದಾಖಲೆಯ ನಾಲ್ಕನೇ ಟ್ರೋಫಿ ಎತ್ತಿ ಹಿಡಿದಿತ್ತು. ಹೀಗಾಗಿ ಉದ್ಘಾಟನಾ ಪಂದ್ಯದಲ್ಲಿ ಈ ಎರಡು ಮದಗಜಗಳ ನಡುವಣ ಸೆಣೆಸಾಟ ಸಾಕಷ್ಟು ರೋಚಕವಾಗಿಯೇ ಇರಲಿದೆ ಎಂದು ಅಭಿಮಾನಿಗಳು ಬಹಳ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಯುಎನ್ಐಆರ್ ಕೆ 1445