Monday, Nov 30 2020 | Time 10:16 Hrs(IST)
  • ವಾಯುಭಾರ ಕುಸಿತ: ಇನ್ನೂ ಕೆಲ ದಿನ ಕಾಡಲಿದೆ ಮಳೆ ಕಾಟ !!
  • ವಾರಾಣಸಿಗೆ ಇಂದು ಪ್ರಧಾನಿ ಭೇಟಿ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ
  • ನೈಜೀರಿಯಾದಲ್ಲಿ ನರಮೇಧ: ಕನಿಷ್ಠ 110 ನಾಗರಿಕರು ಬಲಿ
  • ಎಫ್ ಬಿ ಐ ವಿರುದ್ದ ಡೊನಾಲ್ಡ್ ಟ್ರಂಪ್ ಆಕ್ರೋಶ
  • ನಾಯಿಯೊಂದಿಗೆ ಆಟ- ಬೈಡೆನ್ ಕಾಲಿನ ಮೂಳೆ ಮುರಿತ !!
  • ಸಾಕು ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ ಜೋ ಬೈಡನ್
  • ಶಿವಸೇನೆಗೆ ಉರ್ಮಿಳಾ ಮಾತೋಂಡ್ಕರ್ ?
  • ನ್ಯೂಯಾರ್ಕ್ ನಲ್ಲಿ ಡಿಸೆಂಬರ್ 7ರಿಂದ ಶಾಲೆಗಳು ಪುನರಾರಂಭ
  • ಇಂದು ವಾರಣಾಸಿಗೆ ಪ್ರಧಾನಿ ಮೋದಿ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ
National Share

ಮೇವು ಹಗರಣ: ಚೈಬಾಸ ಖಜಾನೆ ಪ್ರಕರಣದಲ್ಲಿ ಲಾಲು ಯಾದವ್ ಗೆ ಜಾಮೀನು, ಜೈಲಿನಿಂದ ಸಿಗದ ಮುಕ್ತಿ

ಮೇವು ಹಗರಣ: ಚೈಬಾಸ ಖಜಾನೆ ಪ್ರಕರಣದಲ್ಲಿ ಲಾಲು ಯಾದವ್ ಗೆ ಜಾಮೀನು, ಜೈಲಿನಿಂದ ಸಿಗದ ಮುಕ್ತಿ
ಮೇವು ಹಗರಣ: ಚೈಬಾಸ ಖಜಾನೆ ಪ್ರಕರಣದಲ್ಲಿ ಲಾಲು ಯಾದವ್ ಗೆ ಜಾಮೀನು, ಜೈಲಿನಿಂದ ಸಿಗದ ಮುಕ್ತಿ

ರಾಂಚಿ, ಅ 9 (ಯುಎನ್‌ಐ) 90 ರ ದಶಕದ ಬಹುಕೋಟಿ ಮೇವು ಹಗರಣದ ಚೈಬಾಸ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಶುಕ್ರವಾರ ಜಾಮೀನು ನೀಡಲಾಗಿದೆ.ನ್ಯಾಯಾಧೀಶ ಅಪ್ರೇಶ್ ಕುಮಾರ್ ಅವರು ಲಾಲು ಯಾದವ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಕೆಳ ನ್ಯಾಯಾಲಯದಲ್ಲಿ 2 ಲಕ್ಷ ರೂ. ಬಾಂಡ್ ಸಲ್ಲಿಸುವಂತೆ ಅವರ ಪರ ವಕೀಲರಿಗೆ ಸೂಚಿಸಿದ್ದಾರೆ.ಆದರೂ, ಮೇವು ಹಗರಣದ ಅನೇಕ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲು ಯಾದವ್ ಲಾಲು ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಇಲ್ಲಿಯವರೆಗೆ ಅವರು ಎರಡು ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಜೈಲಿನಿಂದ ಹೊರಬರಲು ಅವರು ಮತ್ತೊಂದು ಪ್ರಕರಣದಲ್ಲಿ ಜಾಮೀನು ಪಡೆಯಬೇಕಾಗಿದೆ.ಲಾಲು ಯಾದವ್ ಅವರಿಗೆ ದಿಯೋಘರ್ ಮತ್ತು ಚೈಬಾಸ ಖಜಾನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ ಆದರೆ ಡುಮ್ಕಾ ಖಜಾನೆ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿಲ್ಲ.2017ರ ಡಿಸೆಂಬರ್ 23ರಂದು ಲಾಲು ಯಾದವ್ ಅವರಿಗೆ ಮೊದಲ ಬಾರಿಗೆ ಮೇವು ಹಗರಣಕ್ಕೆ ಸಂಬಂಧಿಸಿ ಡಿಯೋಘರ್ ಖಜಾನೆ ಪ್ರಕರಣದಲ್ಲಿ 84.53 ಕೋಟಿ ರೂ. ಅಕ್ರಮವಾಗಿ ಪಡೆದ ಆರೋಪದ ಮೇಲೆ 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 24, 2018 ರಂದು ಡುಮ್ಕಾ ಖಜಾನೆಯಿಂದ 3.13 ಕೋಟಿ ರೂ.ಅಕ್ರಮವಾಗಿ ಪಡೆದ ಆರೋಪದ ಮೇಲೆ ಎರಡು ಪ್ರತ್ಯೇಕ ಸೆಕ್ಷನ್ ಗಳಡಿ 7-7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.ಚೈಬಾಸ ಖಜಾನೆಯಿಂದ 37.7 ಕೋಟಿ ರೂ. ಮತ್ತು 33.67 ಕೋಟಿ ರೂ. ಮೊತ್ತವನ್ನು ಅಕ್ರಮವಾಗಿ ಪಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಾಲು ಅವರಿಗೆ ತಲಾ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಮೂರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಏಕಕಾಲದಲ್ಲಿ ನಡೆಯುತ್ತಿದೆ.ಜುಲೈ 2019 ರಲ್ಲಿ ಅವರಿಗೆ ದಿಯೋಘರ್ ಖಜಾನೆ ಪ್ರಕರಣದಲ್ಲಿ ಲಾಲು ಅವರಿಗೆ ಜಾಮೀನು ನೀಡಲಾಗಿತ್ತು. ಮೂರು ಸಂದರ್ಭಗಳಲ್ಲಿ ಡುಮ್ಕಾ ಖಜಾನೆ ಪ್ರಕರಣದಲ್ಲಿ ಅವರ ಜಾಮೀನು ರದ್ದುಗೊಂಡಿದೆ.ಲಾಲು ಯಾದವ್ ಅವರು ಡಿಸೆಂಬರ್ 2017 ರಿಂದ ಡಿಯೋಘರ್ ಖಜಾನೆ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಿದ ನಂತರ ಜೈಲಿನಲ್ಲಿದ್ದಾರೆ. ಸದ್ಯ, ಅವರನ್ನು ರಿಮ್ಸ್ ನಿರ್ದೇಶಕರ ಬಂಗಲೆಯಲ್ಲಿ ಇರಿಸಲಾಗಿದೆ. ಅಲ್ಲಿ ಆರೋಗ್ಯ ಸಂಬಂಧಿತ ವಿವಿಧ ತೊಂದರೆಗಳಿಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಿಮ್ಸ್ ಆಡಳಿತ ಮಂಡಳಿ ಲಾಲು ಅವರನ್ನು ವಾರ್ಡ್‌ನಿಂದ ಹೆಚ್ಚು ಜನದಟ್ಟಣೆ ಇರದ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು.ಯುಎನ್ಐ ಎಸ್ಎಲ್ಎಸ್ 1529

More News
ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ಘರ್ಷಣೆ: 30 ತಾಲಿಬಾನ್ ಉಗ್ರರು ಹತ

29 Nov 2020 | 8:35 PM

ಕಾಬೂಲ್, ನ 29 (ಯುಎನ್‍ಐ)- ಆಫ್ಥಾನಿಸ್ತಾನದ ಪೂರ್ವ ಪ್ರಾಂತ್ಯವಾದ ಲಾಗ್ಮಾನ್‌ನಲ್ಲಿ ಆಫ್ಘನ್‍ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಆರು ಕಮಾಂಡರ್‌ಗಳು ಸೇರಿದಂತೆ 30 ತಾಲಿಬಾನ್ ಉಗ್ರರು ಹತರಾಗಿದ್ದು, ಇತರ 17 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಸೇನೆಯ ಪೂರ್ವ ವಿಭಾಗ ಭಾನುವಾರ ತಿಳಿಸಿದೆ.

 Sharesee more..