Monday, Feb 24 2020 | Time 16:25 Hrs(IST)
 • ಮಹದಾಯಿ ತೀರ್ಪು: ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಒತ್ತಾಯ
 • ಟ್ರಂಪ್ ಭೇಟಿ ಹಿನ್ನೆಲೆ-ಕಾಶ್ಮೀರದಾದ್ಯಂತ ಭದ್ರತಾಪಡೆ ಹದ್ದಿನ ಕಣ್ಣು
 • ಕೆ2 ಸಮಸ್ಯೆಯಿಂದ ಶಿಕ್ಷಕರ ವೇತನ ವಿಳಂಬ: ರಮೇಶ್ ಬಾಬು ಆರೋಪ
 • ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ
 • ಗೌತಮ್ ಸ್ಪಿನ್ ಮೋಡಿ : ಸತತ ಮೂರನೇ ಬಾರಿ ಸೆಮಿಫೈನಲ್ ತಲುಪಿದ ಕರ್ನಾಟಕ
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
 • ಕಾರನ್ನು ವಿದ್ಯುತ್ ಕಂಬಕ್ಕೆ ಗುದ್ದಿ, ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾದ ಶಾಸಕರ ಮೊಮ್ಮಗ
 • ರಸ್ತೆ ಅಪಘಾತ: ಇಬ್ಬರು ಸಾವು
 • ವಿಚಾರಣೆಗೆ ಹಾಜರಾಗುವಂತೆ ವಾರಿಸ್ ಪಠಾಣ್ ಗೆ ನೋಟಿಸ್
 • ಟ್ರಂಪ್ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ: ಸಿದ್ದರಾಮಯ್ಯ
Karnataka Share

ಮಾ.2ಕ್ಕೆ ರೈತ ಸಂಘದಿಂದ ವಿಧಾನಸೌಧ ಮುತ್ತಿಗೆ

ಬೆಂಗಳೂರು, ಜ 21 [ಯುಎನ್ಐ] ಸರ್ಕಾರಗಳು ರೈತರ ಪರವಾಗಿ ನಿಲ್ಲಬೇಕೆಂದು ಒತ್ತಾಯಿಸಿ ಮಾ.2 ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಪುಟ್ಟಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಸಿರು ಶಾಲು ಹಾಕಿಕೊಂಡು ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ರೈತರ ಮನೆ ಜಮೀನು ಜಪ್ತಿ ಮಾಡಲು ಆದೇಶ ನೀಡಿದೆ. ಈ ಆದೇಶವನ್ನು ಹಿಂಪಡೆಯಬೇಕೆಂದು ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರ ಹುಟ್ಟಿದ ದಿನವಾದ ಫೆ.13ರಂದು ಫ್ರೀಡಂಪಾರ್ಕ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿ ಆಗ್ರಹಿಸಲಿದ್ದೇವೆ ಎಂದು ಹೇಳಿದರು.
ಒಂದು ವೇಳೆ ಸರ್ಕಾರ ರೈತರ ಮನೆ ಜಮೀನು ಜಪ್ತಿ ಆದೇಶ ಕೈಬಿಡದಿದ್ದರೆ ಹಾಗೂ ರೈತರ ಪರ ಬಜೆಟ್‌ಗೆ ಮುಂದಾಗದಿದ್ದರೆ ಮಾ.2 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಲಕ್ಷಾಂತರ ರೈತರು ಬೆಂಗಳೂರು ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಬೃಹತ್ ಮೆರವಣಿಗೆ ನಡೆಸಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ. ಪ್ರತಿ ಹಳ್ಳಿಗಳಲ್ಲೂ ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು. ಹಳ್ಳಿಗಳಿಗೆ ಯಾವುದೇ ಬಿಜೆಪಿ ಪಕ್ಷದ ನಾಯಕರನ್ನು ಸೇರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರೈತರಪರ ಎಂದು ಹೇಳಿ ಅಧಿಕಾರ ಪಡೆದ ಎಲ್ಲಾ ಪಕ್ಷಗಳು ರೈತರ ಬೆನ್ನಿಗೆ ಚೂರಿ ಹಾಕುತ್ತಿವೆ. ರೈತರು ಅತೀವೃಷ್ಠಿ ಅನಾವೃಷ್ಠಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಫಲವತ್ತಾದ ಭೂಮಿ ಬಂಜರು ಭೂಮಿಯಾಗುತ್ತಿದೆ. ರೈತರು ಬೆಳೆ ಬೆಳೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಈ ಆದೇಶದಿಂದ ರೈತರಿಗೆ ತೊಂದರೆಯಾದರೆ ಅದಕ್ಕೆ ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯುಎನ್ಐ ಡಿಸಿ ವಿಎನ್ 1917