Thursday, Oct 22 2020 | Time 20:04 Hrs(IST)
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ : ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
Special Share

ಯುದ್ಧಕ್ಕೆ ಭಾರತೀಯ ಸೇನೆ ಸದಾ ಸಿದ್ಧ: ಚೈನಾ ಅಧ್ಯಕ್ಷ ಜಿನ್ ಪಿಂಗ್ ಗೆ ಅಮಿತ್ ಶಾ ತಿರುಗೇಟು

ಯುದ್ಧಕ್ಕೆ ಭಾರತೀಯ ಸೇನೆ ಸದಾ ಸಿದ್ಧ: ಚೈನಾ ಅಧ್ಯಕ್ಷ ಜಿನ್ ಪಿಂಗ್ ಗೆ ಅಮಿತ್ ಶಾ ತಿರುಗೇಟು
ಯುದ್ಧಕ್ಕೆ ಭಾರತೀಯ ಸೇನೆ ಸದಾ ಸಿದ್ಧ: ಚೈನಾ ಅಧ್ಯಕ್ಷ ಜಿನ್ ಪಿಂಗ್ ಗೆ ಅಮಿತ್ ಶಾ ತಿರುಗೇಟು

ನವದೆಹಲಿ, ಅ 17(ಯುಎನ್ಐ) - ಭಾರತೀಯ ಸೇನೆ ಸಮರಕ್ಕೆ ಸದಾ ಸರ್ವ ಸನ್ನದ್ಧವಾಗಿಯೇ ಇರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ತಮ್ಮ ದೇಶದ ಸೇನಾ ಯೋಧರಿಗೆ ಇತ್ತೀಚಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.

ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ಸಚಿವ ಅಮಿತ್ ಶಾ ಮಾಧ್ಯಮಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಭಾರತ ದೇಶ ತನ್ನ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

‘ಪ್ರತಿಯೊಂದು ದೇಶವೂ ಸದಾ (ಯುದ್ಧಕ್ಕೆ) ಸಿದ್ಧವಾಗಿರಲಿದೆ. ಆದಕ್ಕಾಗಿ ಸೇನೆ ಸನ್ನದ್ದವಾಗಿರಲಿದೆ. ಸಮಸ್ಯೆ ಯಾವಾಗ ಎದುರಾದರೂ ತಕ್ಷಣವೇ ಅದನ್ನು ಎದುರಿಸಲು ಸಾಧ್ಯವಾಗುವಂತೆ ಸರ್ಕಾರ ಸೇನೆಯನ್ನು ನಿಭಾಯಿಸುತ್ತದೆ. ನಾನು ಯಾರ ಹೇಳಿಕೆಗೆ ಪ್ರತಿಯಾಗಿ ಈ ಮಾತು ಆಡುತ್ತಿಲ್ಲ. ಆದರೆ, ಭಾರತೀಯ ಸಶಸ್ತ್ರ ಪಡೆಗಳು ಸದಾ ಸಿದ್ಧವಾಗಿರುತ್ತವೆ ಎಂದು ಸ್ಪಷ್ಟಪಡಿಸಿದರು.

ಉಭಯ ದೇಶಗಳು ಪರಸ್ಪರ ಮಾತುಕತೆ ನಡೆಸುತ್ತಿವೆ. ರಾಜತಾಂತ್ರಿಕ ಮಾತುಕತೆಗಳಿಗೆ ಇನ್ನೂ ಮುಕ್ತ ಅವಕಾಶವಿದೆ ಎಂದು ಅವರು ಹೇಳಿದರು. 'ಗೃಹ ಸಚಿವನಾಗಿ ನಾನು ಈ ಮಾತುಗಳನ್ನು ಆಡಬಾರದು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತುಗಳನ್ನು ನಾನು ಹೇಳುತ್ತಿದ್ದೇನೆ .. ನಾವು ಸಿದ್ಧರಿದ್ದೇವೆ. ಗಡಿಯಿಂದ ಒಂದು ಇಂಚು ಭೂಮಿ ಕಬಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು.

ಯುಎನ್ಐ ಕೆವಿಆರ್ 2037

More News
ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ

ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ

22 Oct 2020 | 6:42 PM

ಪಾಟ್ನಾ , ಅ 22 (ಯುಎನ್ಐ ) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಹಲವು ಬಾರಿ ಅಧಿಕಾರ ನೀಡಿದ್ದರೂ ಅವರು ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ.

 Sharesee more..

ಬಿಹಾರದ ಉಪಮುಖ್ಯಮಂತ್ರಿಗೆ ಕೊರೋನಾ ಸೋಂಕು

22 Oct 2020 | 4:08 PM

 Sharesee more..