Wednesday, Mar 3 2021 | Time 20:21 Hrs(IST)
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
 • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
 • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
 • ಆ ದೇಶದಲ್ಲಿ ಒಂದೇ ದಿನ 1,641 ಮಂದಿ ಸಾವು
Special Share

ರಕ್ಷಣಾ ಉತ್ಪನ್ನಗಳ ಸಾಮರ್ಥ್ಯ ಹೆಚ್ಚಿಸಿಸಲು ಪ್ರಯತ್ನ; ಪ್ರಧಾನಿ ಮೋದಿ

ರಕ್ಷಣಾ ಉತ್ಪನ್ನಗಳ ಸಾಮರ್ಥ್ಯ ಹೆಚ್ಚಿಸಿಸಲು ಪ್ರಯತ್ನ; ಪ್ರಧಾನಿ ಮೋದಿ
ರಕ್ಷಣಾ ಉತ್ಪನ್ನಗಳ ಸಾಮರ್ಥ್ಯ ಹೆಚ್ಚಿಸಿಸಲು ಪ್ರಯತ್ನ; ಪ್ರಧಾನಿ ಮೋದಿ

ನವದೆಹಲಿ, ಫೆ 22(ಯುಎನ್ಐ) ರಕ್ಷಣಾ ವಲಯದ ಅಗತ್ಯಗಳಿಗಾಗಿ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಭಾರತಕ್ಕೆ ಪೂರ್ವ ಕಾಲದಿಂದಲೂ ಭಾರಿ ಅನುಭವ ಹೊಂದಿರುವ ಸುದೀರ್ಘ ಇತಿಹಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶ ಸ್ವಾತಂತ್ರ್ಯಪಡೆದ ನಂತರ ಅದನ್ನು ಬಲಪಡಿಸಲು ಯಾರೂ ಪ್ರಯತ್ನ ನಡೆಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ರಕ್ಷಣಾ ಉತ್ಪನ್ನಗಳ ತಯಾರಿ ಸಾಮರ್ಥ್ಯವನ್ನು ಹೆಚ್ಚಿಸಲು ದೇಶ ಬದ್ಧವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯದ ಪ್ರಸ್ತಾವನೆಗಳ ಅನುಷ್ಠಾನ ಕುರಿತು ಸೋಮವಾರ ವೆಬ್‌ನಾರ್‌ನಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲು ನಮ್ಮಲ್ಲಿ ನೂರಾರು ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮಗಳು ಇದ್ದವು. ಜಾಗತಿಕ ಸಮರದ ಸಮಯದಲ್ಲಿ, ಭಾರತದಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗುತ್ತಿತ್ತು. ಆದರೆ, ದೇಶ ಸ್ವಾತಂತ್ರ್ಯಹೊಂದಿದ ನಂತರ ಈ ವ್ಯವಸ್ಥೆ ನಿರೀಕ್ಷಿಸಿದಷ್ಟು ಬಲಗೊಳ್ಳಲಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಪ್ರತಿಭೆ ಹಾಗೂ ಸಾಮರ್ಥ್ಯಗಳ ಹೊರತಾಗಿಯೂ, ಶಸ್ತ್ರಾಸ್ತ್ರಗಳ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಯಾರೂ ಗಮನಹರಿಸಲಿಲ್ಲ, ಆದರೆ, ಆಮದು ಮಾಡಿಕೊಳ್ಳಲು ಹೆಚ್ಚು ಆದ್ಯತೆ ನೀಡಲಾಯಿತು. ಇ ದು ನಾವು ಹೆಮ್ಮೆಪಡುವ ವಿಷಯವಲ್ಲ. ಈಗ ಭಾರತ ಆ ಪರಿಸ್ಥಿತಿಯನ್ನು ಬದಲಾಯಿಸುವ ಕೆಲಸ ಮಾಡುತ್ತಿದೆ. ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ, ”ಎಂದು ಮೋದಿ ಹೇಳಿದರು.

ಈ ಸಂದರ್ಭದಲ್ಲಿ, ಡಿ-ಲೈಸೆನ್ಸಿಂಗ್, ಡಿ-ರೆಗ್ಯುಲೇಷನ್ ಮತ್ತು ರಫ್ತು ಪ್ರೋತ್ಸಾಹ ಸೇರಿದಂತೆ ರಕ್ಷಣಾ ಕ್ಷೇತ್ರದ ಉತ್ಪಾದನಾ ವ್ಯವಸ್ಥೆಗೆ ಉತ್ತೇಜನ ನೀಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೋದಿ ಪ್ರಸ್ತಾಪಿಸಿದರು.

ಯುಎನ್ಐ ಕೆವಿಆರ್ 1428

More News
ಸೌರವ್ ಗಂಗೂಲಿ, ಬಂಗಾಳದ ದಾದಾ ಬಿಜೆಪಿ ಸೇರಲಿದ್ದಾರೆಯೇ… ?

ಸೌರವ್ ಗಂಗೂಲಿ, ಬಂಗಾಳದ ದಾದಾ ಬಿಜೆಪಿ ಸೇರಲಿದ್ದಾರೆಯೇ… ?

03 Mar 2021 | 5:27 PM

ಕೋಲ್ಕತಾ, ಮಾ 3 (ಯುಎನ್ಐ) ಪಶ್ಚಿಮ ಬಂಗಾಳದಲ್ಲಿ ತಮ್ಮದೇ ಆದ ಛಾಪುಹೊಂದಿರುವ ಬಂಗಾಳದ ಹುಲಿ, ಮಾಜಿ ನಾಯಕ ಸೌರವ್ ಗಂಗೂಲಿ 'ದಾದಾ' ಬಿಜೆಪಿ ಸೇರಲಿದ್ದಾರೆಯೇ?

 Sharesee more..
ನೋಟು ಅಮಾನ್ಯೀಕರಣದಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಳ; ಡಾ ಮನಮೋಹನ್ ಸಿಂಗ್

ನೋಟು ಅಮಾನ್ಯೀಕರಣದಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಳ; ಡಾ ಮನಮೋಹನ್ ಸಿಂಗ್

02 Mar 2021 | 9:09 PM

ನವದೆಹಲಿ, ಮಾ 2(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ದೇಶದಲ್ಲಿ ನಿರುದ್ಯೋಗವನ್ನು ಹೆಚ್ಚಿಸುತ್ತಿವೆ, ಇದರಿಂದ ಅಸಂಘಟಿತ ವಲಯ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

 Sharesee more..