Wednesday, Feb 26 2020 | Time 11:36 Hrs(IST)
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
Karnataka Share

ರಾಜಕೀಯ ದುರುದ್ದೇಶಕ್ಕಾಗಿ ಐಟಿ ಬಳಕೆ: ದಿನೇಶ್‌ ಗುಂಡೂರಾವ್‌

ರಾಜಕೀಯ ದುರುದ್ದೇಶಕ್ಕಾಗಿ ಐಟಿ ಬಳಕೆ: ದಿನೇಶ್‌ ಗುಂಡೂರಾವ್‌
ರಾಜಕೀಯ ದುರುದ್ದೇಶಕ್ಕಾಗಿ ಐಟಿ ಬಳಕೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು, ಸೆ 11 (ಯುಎನ್‌ಐ) ಭ್ರಷ್ಟಚಾರದ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವ ಐಟಿಯನ್ನು ರಾಜಕೀಯ ದುರುದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕ್ರಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ ಶಿವಕುಮಾರ್‌ ಅವರನ್ನು ಇಡಿ ಅಧಿಕಾರಿಗಳ ಬಂಧಿಸಿರುವುದನ್ನು ಖಂಡಿಸಿ ಇಂದು ಒಕ್ಕಲಿಗರ ಸಂಘ, ಕಾಂಗ್ರೆಸ್ , ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳಿಂದ ರಾಜಧಾನಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪಕ್ಷಪಾತ ಒಪ್ಪಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರ ಮೇಲಷ್ಟೇ ಐಟಿ ದಾಳಿ ಏಕೆ ಆಗುತ್ತಿದೆ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ಮೇಲೆ ಏಕೆ ಇಲ್ಲ. ಮೋದಿ ಮತ್ತೆ ಪ್ರಧಾನಿ ಆಗಿದ್ದಕ್ಕಾಗಿ ಬೇಸರವಿಲ್ಲ. ಆದರೆ ಪ್ರಧಾನಿಯಾಗಿ ಅವರು ದೇಶದ ಉದ್ಧಾರಕ್ಕೆ ನಿಲ್ಲಬೇಕಿತ್ತು. ಆದರೆ, ಅವರು ಮಾಡುತ್ತಿರುವುದು ಅಮಾನವೀಯ ರಾಜಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಡಿ.ಕೆ. ಶಿವಕುಮಾರ್ ಅವರು ಎಲ್ಲಾ ತನಿಖೆಗೂ ಸಹಕರಿಸಿದ್ದಾರೆ ಹಾಗೂ ವಿಚಾರಣೆಗೂ ಹಾಜರಾಗಿದ್ದಾರೆ. ಡಿಕೆಶಿ ಎಲ್ಲ ಸಮಸ್ಯೆಗಳನ್ನು ಎದುರಿಸುವ ವ್ಯಕ್ತಿಯಾಗಿದ್ದಾರೆ. ಓಡಿಹೋಗುವ ಸ್ವಭಾವದ ವ್ಯಕ್ತಿ‌ ಅಲ್ಲ. ಉದ್ದೇಶಪೂರಕವಾಗಿ ಡಿಕೆಶಿ ಅವರ ಬಂಧ‌ನವಾಗಿದೆ. ಗುಜರಾತ್‌ನ ಶಾಸಕರು ಬಿಜೆಪಿಯ ಒತ್ತಡದಿಂದ ರಕ್ಷಿಸಿದ್ದಕ್ಕಾಗಿ ಅವರ ಬಂಧಿಸಲಾಗಿದೆ ಎಂದು ಗುಡುಗಿದರು.

ಅಮಾನವೀಯವಾಗಿ ಡಿ.ಕೆ ಶಿವಕುಮಾರ್‌ ಅವರ ತಾಯಿ ಹಾಗೂ ಮಗಳನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ. ಈ ಪ್ರತಿಭಟನೆ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ ದೇಶದ ಬ್ಯಾಂಕುಗಳಿಂದ 36 ಸಾವಿರ ಕೋಟಿ ಹಣ ಲಪಟಾಯಿಸಲಾಗಿದೆ. ಕೈಗಾರಿಕೆಗಳ ನಾಶ ಹಾಗೂ ನಿರುದ್ಯೋಗದ ಬಗ್ಗೆ ಪ್ರಧಾನ ಮಂತ್ರಿ ಮೋದಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ-ವಿಪಕ್ಷ ಎರಡೂ ಇರಬೇಕು. ಆದರೆ, ಕೇಂದ್ರ ಬಿಜೆಪಿಗೆ ವಿಪಕ್ಷವೇ ಬೇಡ. ವಿರೋಧ ಪಕ್ಷವೇ ಬೇಡ ಎನ್ನುವುದು ಯಾವ ರೀತಿಯ ರಾಜಕಾರಣ? ಬಿಜೆಪಿಗೆ ಸೇರಿದವರಿಗೆ ಕ್ಷಮೆ ಒಳ್ಳೆಯವರೆಂಬ ಸರ್ಟಿಫಿಕೆಟ್, ಬಿಜೆಪಿ ವಿರೋಧಿಸಿದರೆ ಶಿಕ್ಷೆ ಹಾಗೂ ಸುಳ್ಳು ಕೇಸ್ ದಾಖಲು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಈಗ ಬಿಜೆಪಿಯ ವಿರುದ್ಧ ಜನರು ಎಚ್ಚೆತ್ತಿದ್ದಾರೆ. ಒಕ್ಕಲಿಗ ಸಮಾಜವಷ್ಟೇ ಅಲ್ಲ ಎಲ್ಲಾ ಸಮುದಾಯದವರು ಬಿಜೆಪಿ ವಿರುದ್ಧ ನಿಂತಿದ್ದಾರೆ. ಡಿಕೆಶಿ ಬೆಂಬಲಕ್ಕೆ ನಾವು ಎಂದಿಗೂ ಇರುತ್ತೇವೆ. ಕರವೇ ನಾರಾಯಣಗೌಡ , ನಂಜಾವಧೂತ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಯುಎನ್‌ಐ ಆರ್‌ಕೆ ಎಎಚ್‌ 1300

More News
2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ

2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ

26 Feb 2020 | 10:50 AM

ಬೆಂಗಳೂರು, ಫೆ 26 (ಯುಎನ್ಐ) ಇತ್ತೀಚೆಗಷ್ಟೇ ಬಂಧನವಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಆತನ ವಿರುದ್ಧ ತಿಲಕ್ ನಗರದಲ್ಲಿ ದಾಖಲಾಗಿದ್ದ ಪ್ರಕರಣದ ಕುರಿತು ಬುಧವಾರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

 Sharesee more..
ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

26 Feb 2020 | 10:46 AM

ಬೆಂಗಳೂರು,ಫೆ. 26 (ಯುಎನ್‌ಐ) ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಆದರ್ಶಿ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.

 Sharesee more..

ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ

26 Feb 2020 | 10:09 AM

 Sharesee more..