Tuesday, Oct 22 2019 | Time 08:45 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Special Share

ರಾಜಸ್ತಾನದ ಮಾಲ್ಪುರದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

ರಾಜಸ್ತಾನದ ಮಾಲ್ಪುರದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ
ರಾಜಸ್ತಾನದ ಮಾಲ್ಪುರದಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ

ಜೈಪುರ, ಅಕ್ಟೋಬರ್ 9 (ಯುಎನ್‌ಐ) ಶ್ರೀರಾಮನ 'ಬರಾತ್' (ವಿವಾಹ ಮೆರವಣಿಗೆ) ಯಲ್ಲಿ ಕಲ್ಲು ತೂರಾಟ ನಡೆದು ಉದ್ವಿಗ್ನತೆ ಉಂಟಾದ ಪರಿಣಾಮ ರಾಜಸ್ಥಾನದ ಟೋಂಕ್ ಜಿಲ್ಲೆಯ ಮಾಲ್ಪುರದಲ್ಲಿ ಬುಧವಾರ ಮುಂಜಾನೆ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಯಿತು.

ಬೆಳಗ್ಗೆ 5 ಗಂಟೆಗೆ ಜಿಲ್ಲಾಧಿಕಾರಿ ಕೆ.ಕೆ.ಶರ್ಮಾ ಅವರು ಕರ್ಫ್ಯೂ ಹೇರಿದ್ದಾರೆ. ಮಾತ್ರವಲ್ಲ ಅಕ್ಟೋಬರ್ 10ರವರೆಗೆ ಇಂಟರ್‌ ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

ನಿನ್ನೆ, ಭಗವಾನ್ ರಾಮನ ವಿವಾಹ ಮೆರವಣಿಗೆಯಲ್ಲಿ ಜನರ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ಮಾತ್ರವಲ್ಲ ರಾಕ್ಷಸ ರಾಜ ರಾವಣನ ಪ್ರತಿಮೆಯನ್ನು ಸುಡಲು ಈ ತಂಡ ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಶಾಸಕ ಕನಹಿಯಲಾಲ್ ಅವರು ನಿನ್ನೆ ರಾತ್ರಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಪ್ರಯತ್ನಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಜಿಲ್ಲಾಡಳಿತ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ರಾವಣನ ಪ್ರತಿಕೃತಿಯನ್ನು ದಹಿಸಿತು.

ಆತಂಕ ಮತ್ತು ಗೊಂದಲ ಸೃಷ್ಟಿಸಲು ಕೆಲವರು ಹಳೆಯ ಗಲಭೆಗಳ ಫೋಟೋಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಂಡಿದ್ದಾರೆ. ಆದ್ದರಿಂದ ಇಂಟರ್‌ನೆಟ್ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಎನ್ಐ ಎಎಚ್ 1027