Saturday, Oct 24 2020 | Time 20:35 Hrs(IST)
  • ದಸರಾ-ಮೆರವಣಿಗೆ: ನಿಗದಿತ ಕಲಾತಂಡಗಳ ನಿಯೋಜನೆ
  • ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪುತ್ರನಿಗೆ ಇಡಿ ಸಮನ್ಸ್
  • ಜಿಯೋಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಆಪ್: ಬಹುಮಾನ ಗೆಲ್ಲಲು ಅವಕಾಶ
  • ರಾಜಕಾಲುವೆ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಆರ್ ಅಶೋಕ
  • ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ ಚಂದ್ರಗುಪ್ತ
  • ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಬೆಳ್ಳುಳ್ಳಿಯ ವ್ಯಾಪಾರಿಯ ದರೋಡೆ
  • ಚರ್ಚ್ ಕುಸಿದು 22 ಮಂದಿ ಸಾವು
  • ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ
  • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
  • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
  • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
  • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
  • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
  • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
  • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
Karnataka Share

ರಾಜ್ಯಸಭಾ ನೂತನ ಸದಸ್ಯ ಅಶೋಕ್ ಗಸ್ತಿ ಕೊರೊನಾದಿಂದ ಮೃತ್ಯು: ಪ್ರಧಾನಿ, ಗಣ್ಯರಿಂದ ಸಂತಾಪ

ರಾಜ್ಯಸಭಾ ನೂತನ ಸದಸ್ಯ ಅಶೋಕ್ ಗಸ್ತಿ ಕೊರೊನಾದಿಂದ ಮೃತ್ಯು: ಪ್ರಧಾನಿ, ಗಣ್ಯರಿಂದ ಸಂತಾಪ
ರಾಜ್ಯಸಭಾ ನೂತನ ಸದಸ್ಯ ಅಶೋಕ್ ಗಸ್ತಿ ಕೊರೊನಾದಿಂದ ಮೃತ್ಯು: ಪ್ರಧಾನಿ, ಗಣ್ಯರಿಂದ ಸಂತಾಪ

ಬೆಂಗಳೂರು, ಸೆ.18(ಯುಎನ್ಐ) ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಕೊರೊನಾ ಸೋಂಕಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಸಿಲುಕಿದ್ದ 55 ವರ್ಷದ ಅಶೋಕ್ ಗಸ್ತಿ ಸೆಪ್ಟಂಬರ್ 2 ರಂದು ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಹಳೆ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಬಹು ಅಂಗಾಗ ವೈಫಲ್ಯ ದಿಂದ ಬಳಲುತ್ತಿದ್ದ ಅಶೋಕ್ ಗಸ್ತಿ ಅವರು, ತೀವ್ರವಾಗಿ ಅಸ್ವಸ್ಥರಾಗಿದ್ದು ವೆಂಟಿಲೇಟರ್‌ ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಹು ಅಂಗಾಗ ವೈಫಲ್ಯದಿಂದ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಮಧ್ಯಾಹ್ನದ ವೇಳೆಯಲ್ಲಿ ಅಶೋಕ್ ಗಸ್ತಿ ಮೃತಪಟ್ಟಿದ್ದಾರೆಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು. ಈ ಬಗ್ಗೆ ಆಸ್ಪತ್ರೆ ಮೂಲಗಳು ಹಾಗೂ ಪತ್ನಿ ಗಸ್ತಿ ಮೃತಪಟ್ಟಿರುವುದುನ್ನು ಅಲ್ಲಗಳೆದಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿತ್ತು.

ಮೂಲತಃ ರಾಯಚೂರು ಜಿಲ್ಲೆ ಲಿಂಗಸೂರಿನವರಾದ ಅಶೋಕ್ ಗಸ್ತಿ ಸವಿತಾ ಸಮಾಜಕ್ಕೆ ಸೇರಿದ್ದವರು. ಬಿಜೆಪಿಯ ಕಟ್ಟಾಳುವಾಗಿದ್ದ ಅವರು ಆರ್ ಎಸ್ಎಸ್ನಾ ಶಿಸ್ತಿನ ಸಿಪಾಯಿ ಆಗಿದ್ದು ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್‍ ನಲ್ಲಿ ನಡೆದ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ್ ಗಸ್ತಿ ಮತ್ತು ಈರಣ್ಣ ಕರಡಿ ಅವರನ್ನು ಕಣಕ್ಕಿಳಿಸಿತ್ತು. ಈ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅಶೋಕ್ ಗಸ್ತಿ ಅವರ ಪತ್ನಿ ಮತ್ತು ಮಗಳಿಗೂ ಕೊರೊನಾ ಸೋಂಕು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದ್ಯಾರ್ಥಿ ಸಂಘಟನೆಯಿಂದ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದ ಅಶೋಕ್ ಗಸ್ತಿ, ಆರ್ ಎಸ್ಎಸ್, ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಬಿಜೆಪಿ ಪ್ರಭಾರಿಯಾಗಿಯೂ ಅವರು ಕೆಲಸ ನಿರ್ವಹಿಸಿದ್ದರು. ಹಿಂದೆ ಎರಡು ಬಾರಿ ರಾಯಚೂರು ನಗರ ಕ್ಷೇತ್ರದ ಟಿಕೆಟ್ಗೆಜ ಯತ್ನಿಸಿ ವಿಫಲರಾಗಿದ್ದರು.

ಗಸ್ತಿ ನಿಧನಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಜುಬಾಯಿ ವಾಲ, ಸಚಿವೆ ಶಶಿಕಲಾ ಜೊಲ್ಲೆ, ಬಿ.ಸಿ.ಪಾಟೀಲ್, ಶ್ರೀರಾಮುಲು, ಸಂಸದರಾದ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಬಿ.ವೈ.ರಾಘವೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.



ಯುಎನ್ಐ ಎಸ್ಎಂಆರ್ ಎಎಚ್ 1102