Monday, Mar 1 2021 | Time 02:42 Hrs(IST)
National Share

ರೈತ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ, ಜ 15 (ಯುಎನ್‌ಐ) ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದ ಪಕ್ಷದ ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸಕ್ಕೆ ತೆರಳಿ
ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೂರು ಸಲ್ಲಿಸಿದರು.
ತಂಡದಲ್ಲಿ ರಾಹುಲ್‌ ಗಾಂಧಿ, ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರರ ಹಲವು ಪಕ್ಷದ ಮುಖಂಡರು ಇದ್ದರು.
ಈ ಕುರಿತು ಟ್ವೀಟ್‌ ಮಾಡಿರುವ ಅವರು, ರೈತರ ಮೇಲಿನ ದೌರ್ಜನ್ಯ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿರುದ್ಧ ಇಡೀ ಭಾರತ ಧ್ವನಿ ಎತ್ತುತ್ತಿದೆ. "ತಮ್ಮ ಹಕ್ಕುಗಳಿಗಾಗಿ ಸೊಕ್ಕಿನ ಮೋದಿ ಸರ್ಕಾರ"ದ ವಿರುದ್ಧ ಅಭಿಯಾನಕ್ಕೆ ದೇಶವಾಸಿಗಳು ಕೈಜೋಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೆಹಲಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಚೌಧರಿ, ಈ ಮೂರು 'ಕಪ್ಪು ಕಾನೂನುಗಳು' (ಕೃಷಿ ಕಾನೂನುಗಳು) ರೈತರ ವಿರುದ್ಧವಾಗಿವೆ ಎಂದು ಹೇಳಿದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದ ಮೇರೆಗೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಇಂದು ದೇಶಾದ್ಯಂತ ರಾಜ್ಯಪಾಲರ ಮನೆಗಳನ್ನು ಘೆರಾವ್ ಮಾಡಲಿದ್ದಾರೆ ಎಂದರು.
ಪ್ರತಿಭಟನಾಕಾರರು ಮುಂದೆ ಸಾಗುವುದನ್ನು ತಡೆಯಲು ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು.ಪಕ್ಷದ ಸದಸ್ಯರು ಬ್ಯಾರಿಕೇಡ್‌ಗಳನ್ನು ತಳ್ಳುತ್ತಿರುವುದು ಕಂಡುಬಂತು.
ಯುಎನ್ಐ ಎಸ್ಎಚ್ 1806
More News
ದೇಶದಲ್ಲಿ  24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

28 Feb 2021 | 7:12 PM

ನವದೆಹಲಿ, ಫೆಬ್ರವರಿ 28 (ಯುಎನ್ಐ) ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..
ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

28 Feb 2021 | 7:03 PM

ನವದೆಹಲಿ, ಫೆ 28 [ಯುಎನ್ಐ] ಜಲ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ನೀರು ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..
ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

28 Feb 2021 | 6:46 PM

ಶ್ರೀಹರಿಕೋಟ, ಫೆ 28 (ಯುಎನ್ಐ)- ದೇಶೀಯ ನಿರ್ಮಿತ ಪಿಎಸ್ಎಲ್ ವಿ-ಸಿ 51 ರಾಕೆಟ್ ಇಂದು ಬ್ರೆಜಿಲ್ ನ 637 ಕೆ.ಜಿ. ತೂಕದ ಅಮೆಜೋನಿಯಾ-1 ಉಪಗ್ರಹವನ್ನು ಎರಡು ತಾಸಿನಲ್ಲಿ ಯಶಸ್ವಿಯಾಗಿ ಉಡಾಯಿಸಿದೆ.

 Sharesee more..

ಜಲಸಂರಕ್ಷಣೆ, ಸ್ವಾವಲಂಬಿ ಭಾರತಕ್ಕೆ ಮೋದಿ ಕರೆ

28 Feb 2021 | 4:24 PM

 Sharesee more..