Monday, Jul 13 2020 | Time 01:34 Hrs(IST)
Entertainment Share

ರೆಬಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ "ಬ್ಯಾಡ್ ಮ್ಯಾನರ್ಸ್" ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ

ಬೆಂಗಳೂರು, ಮೇ 29 (ಯುಎನ್ಐ) ಇಂದು ಸ್ಯಾಂಡಲ್ ವುಡ್ ರೆಬೆಲ್​​ಸ್ಟಾರ್ ಅಂಬರೀಶ್ ಅವರ 68ನೇ ಜನ್ಮದಿನೋತ್ಸವ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸಮಾಧಿ ಬಳಿ ಬರಲು ನಿರ್ಬಂಧ ಹೇರಲಾಗಿತ್ತು. ಆದ್ದರಿಂದ ಸರ್ಕಾರದ ಆದೇಶದಂತೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಕುಟುಂಬಸ್ಥರಷ್ಟೇ ಭಾಗಿಯಾಗಿ ನಗರದ ಕಂಠೀರವ ಸ್ಟೂಡಿಯೋದಲ್ಲಿರುವ ಅಂಬಿ ಸಮಾಧಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು.
ಅಂಬಿ ಜನ್ಮದಿನದ ನಿಮಿತ್ಯ ಸುಮಲತಾ ಅವರು ಪುತ್ರ ಅಭಿಷೇಕ್​ ಅಂಬರೀಷ್​ ಅಭಿನಯದ 'ಬ್ಯಾಡ್​ ಮ್ಯಾನರ್ಸ್​ " ಚಿತ್ರದ ಫಸ್ಟ್​ ಲುಕ್ ಮೋಷನ್​​ ಪೋಸ್ಟರ್​ ಬಿಡುಗಡೆಗೊಳಿಸಿದರು.
ಕೈಯಲ್ಲಿ ಗನ್​ ಹಿಡಿದು ಮಾಸ್​ ಲುಕ್​​ನಲ್ಲಿ ಯಂಗ್ ರೆಬೆಲ್ ಸ್ಟಾರ್​​ ಕಾಣಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಸುಮಲತಾ, ಕೊರೊನಾ ಲಾಕ್‍ಡೌನ್ ನಿಂದಾಗಿ ಅಭಿಮಾನಿಗಳು ಸಮಾಧಿ ಬಳಿ ಬರಲು ಸಾಧ್ಯವಾಗಿಲ್ಲ. ಆದರೆ, ನಿನ್ನೆಯಿಂದಲೇ ಅವರ ಅಪಾರ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣ, ಕರೆ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಹೀಗಾಗಿ ಅಭಿಮಾನ ಎಂಬುದು ಮರೆಮಾಚಿಲ್ಲ ಎಂದರು.
ಪ್ರತಿವರ್ಷ ಮನೆ ಮುಂದೆ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿ ಜೈಕಾರ ಹಾಕುವುದರ ಮೂಲಕ ಕೇಕ್, ಹೂವಿನ ಹಾರ ತಂದು ಸಂಭ್ರಮಿಸುತ್ತಿದ್ದರು. ಆದರೆ, ಈಗ ಅದೆಲ್ಲಾ ಮನಸ್ಸಿನಲ್ಲಿದೆ. ಅದು ಮರೆಯಲಾಗದ ಕ್ಷಣ, ಆ ನೆನಪು ಎಲ್ಲಿಯೂ ಹೋಗಿಲ್ಲ ಎಂದರು.
ಅಂಬಿ ಅವರ ಹುಟ್ಟುಹಬ್ಬದ ದಿನವೇ ಅಭಿಷೇಕ್ 2ನೇ ಚಿತ್ರದ ಫಸ್ಟ್ ಲುಕ್ ಲಾಂಚ್ ಆಗಿದ್ದು ಬಹಳ ಸಂತೋಷವಾಗುತ್ತಿದೆ. ಒಂದು ವರ್ಷದಿಂದ ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಮೊದಲ ಸಿನಿಮಾ 'ಅಮರ್' ಪ್ರೇಮ ಕಥಾ ಹಂದರ ಉಳ್ಳದಾಗಿತ್ತು. ಆದ್ದರಿಂದ ಎರಡನೇ ಚಿತ್ರಕ್ಕಾಗಿ ಬೇರೆ ರೀತಿಯ ಪಾತ್ರವಿರುವ ಕಥೆಯನ್ನು ಹುಡುಕುತ್ತಿದ್ದೆವು. ಎರಡನೇ ಸಿನಿಮಾ ಸೂರಿ ಜೊತೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ ಎಂದು ಪುತ್ರನ ಕುರಿತಾದ ಭರವಸೆಯ ಮಾತಗಳನ್ನಾಡಿದರು.
ಈ ಸಂದರ್ಭದಲ್ಲಿ ಆಹಾರ ಸಚಿವರಾದ ಕೆ. ಗೋಪಾಲಯ್ಯನವರು, ಅಂಬಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಾನು ಸಹ ಅಂಬರೀಶ್ ರವರ ಅಭಿಮಾನಿ. ಅಂಬರೀಶ್ ಅವರು ವಸತಿ ಸಚಿವರಾಗಿದ್ದಾಗ ನನ್ನ ಅವರ ಕಚೇರಿಗೆ ಕರೆದು, ನಮ್ಮ ಕ್ಷೇತ್ರಕ್ಕೆ 443 ಮನೆಗಳನ್ನ ಕೊಡುಗೆಯಾಗಿ ನೀಡಿದ್ದರು. ಯಾರಾದರೂ ಕಷ್ಟದಲ್ಲಿ ಇದ್ದರೇ ಅವರನ್ನು ಕರೆದು ಸಮಾಧಾನ ಮಾಡಿ, ಸಹಾಯವನ್ನು ಮಾಡುತ್ತಿದ್ದ ಮಹಾನ್ ವ್ಯಕ್ತಿ. ಅವರ ಕುಟುಂಬಕ್ಕೆ ಮತ್ತು ನಾಡಿನ ಜನರಿಗೆ ಒಳ್ಳೆಯದು ಆಗಲಿ. ವಿಶೇಷವಾಗಿ ಮಂಡ್ಯಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಬಿಜೆಪಿ ಎರಡು ಬಣಗಳಾಗಿಲ್ಲ ನಮ್ಮ ನಾಯಕರು ಅದನ್ನು ನೋಡಿಕೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ಆಹಾರ ಸಚಿವರು ತಿಳಿಸಿದರು.
ಬ್ಯಾಡ್ ಮ್ಯಾನರ್ಸ್ ಪಕ್ಕಾ ಕಮರ್ಷಿಯಲ್ ಮಾಸ್ ಕಥೆಯನ್ನು ಹೊಂದಿದ್ದು, ಇಂದು ಬೆಳಗ್ಗೆ 9.45ಕ್ಕೆ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್‍ನಲ್ಲಿ 'ಬ್ಯಾಡ್ ಮ್ಯಾನರ್ಸ್’ ಚಿತ್ರದ ಅಧಿಕೃತ ಫಸ್ಟ್ ಲುಕ್ ವಿಡಿಯೋ ಕೂಡ ರಿಲೀಸ್ ಆಗಿದೆ.
ಪಾಪ್‌ ಕಾರ್ನ್‌ ಮಂಕಿ ಟೈಗರ್ ಸಿನಿಮಾ ಬಳಿಕ ದುನಿಯಾ ಸೂರಿ, ಅಭಿಷೇಕ್ ಅಂಬರೀಷ್​​‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಮರ್ ಚಿತ್ರದ ಬಳಿಕ ಬ್ಯಾಡ್‌ ಮ್ಯಾನರ್ಸ್‌ನೊಂದಿಗೆ ಅಭಿ ಮತ್ತೊಮ್ಮೆ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದ್ದಾರೆ.
ಸುಧೀರ್ ಕೆ.ಎಂ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಯುಎನ್ಐ ಪಿಕೆ ಎಎಚ್ ಎಸ್‌ಎಂಆರ್ 1247
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..