Friday, Nov 15 2019 | Time 13:31 Hrs(IST)
 • ಎಟಿಪಿ ಫೈನಲ್ಸ್: ಜೊಕೊವಿಚ್ ಮಣಿಸಿ ಸೆಮಿಫೈನಲ್ ತಲುಪಿದ ಫೆಡರರ್
 • ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ: ಎಲ್ಲಾ ವಲಯಗಳಲ್ಲೂ ಬೆಂಗಳೂರು ಮಂಚೂಣಿಯಲ್ಲಿ – ಗೌರವ್ ಗುಪ್ತಾ
 • ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ
 • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
 • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
 • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
 • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
 • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
 • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
business economy Share

ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟೀವಿ ಲೋಕಾರ್ಪಣೆ

ಮುಂಬಯಿ, ಅ.21 (ಯುಎನ್ಐ) ಭಾರತದ ನಂಬರ್ ಒನ್ ಇಲೆಕ್ಟ್ರಾನಿಕ್ಸ್ ರೀಟೇಲರ್ ಆದ ರಿಲಯನ್ಸ್ ಡಿಜಿಟಲ್, ತನ್ನ ರೀಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಲೋಕಾರ್ಪಣೆಗೊಳಿಸಲು ಒನ್‌ಪ್ಲಸ್ ಜೊತೆಗೆ ಕೈಜೋಡಿಸಿದೆ.
ಪ್ರಭಾದೇವಿಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಒನ್‌ಪ್ಲಸ್ ಟೀವಿ 55 ಕ್ಯೂ1 ಹಾಗೂ ಒನ್‌ಪ್ಲಸ್ ಟೀವಿ 55 ಕ್ಯೂ1 ಪ್ರೋಗಳೆರಡನ್ನೂ ಇಂದು ಲೋಕಾರ್ಪಣೆಗೊಳಿಸಲಾಯಿತು. ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, ರಿಲಯನ್ಸ್ ಡಿಜಿಟಲ್‌ನ ಇವಿಪಿ ಮತ್ತು ಸಿಎಂಓ ಕೌಶಲ್ ನೆವ್ರೇಕರ್, ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಯಾನ್ ಬೇಡ್, “ಇತ್ತೀಚಿನ ತಂತ್ರಜ್ಞಾನವನ್ನು ಮೊದಲು ಪರಿಚಯಿಸುವ ನಮ್ಮ ದಾಖಲೆಯ ಮುಂದುವರಿಕೆಯಾಗಿ, ರಿಲಯನ್ಸ್ ಡಿಜಿಟಲ್ ಕುಟುಂಬಕ್ಕೆ ಒನ್‌ಪ್ಲಸ್ ಟಿವಿಯನ್ನು ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ. ಭಾರತೀಯ ಗ್ರಾಹಕರು ಮತ್ತು ಪ್ರಪಂಚದೆಲ್ಲೆಡೆಯ ಹೊಸ ತಂತ್ರಜ್ಞಾನ ಬ್ರಾಂಡ್‌ಗಳ ನಡುವಿನ ಸೇತುವೆಯಾಗಿ ನಾವು ಮುಂದುವರಿಯುತ್ತೇವೆ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್, ನಾವು ಕಳೆದ ವರ್ಷದ ನವೆಂಬರ್‌ನಿಂದ ರಿಲಯನ್ಸ್ ಡಿಜಿಟಲ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಭಾರತದಾದ್ಯಂತ ನಮ್ಮ ಉತ್ಪನ್ನಗಳಿಗೆ ದೊರೆತಿರುವ ಗಮನಾರ್ಹ ಪ್ರತಿಕ್ರಿಯೆಯಿಂದ ನಮಗೆ ಬಹಳ ಸಂತೋಷವಾಗಿದೆ. ರಿಲಯನ್ಸ್ ಡಿಜಿಟಲ್‌ ರಾಷ್ಟ್ರವ್ಯಾಪಿಯಾದ ಯಶಸ್ವಿ ಜಾಲವನ್ನು ಹೊಂದಿದೆ. 350+ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಸಾಧನಗಳು ಮಾರಾಟವಾಗುತ್ತಿವೆ. ಒನ್‌ಪ್ಲಸ್ ಟಿವಿಗಳ ಲೋಕಾರ್ಪಣೆಯು ನಮ್ಮ ಫಲಪ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಒನ್‌ಪ್ಲಸ್ ಟಿವಿಯನ್ನು ಖರೀದಿಸಲು ಬಯಸುವ ದೇಶದೆಲ್ಲೆಡೆಯ ಗ್ರಾಹಕರಿಗೆ ಇದು ಭೌತಿಕ ಅನುಭವ ಪಡೆದುಕೊಳ್ಳಲು ಅಮೂಲ್ಯವಾದ ಆಫ್‌ಲೈನ್ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ತಂತ್ರಜ್ಞಾನ ಉತ್ಸಾಹಿ ತಾರಾ ಸುತಾರಿಯಾ ಮಾತನಾಡಿ, "ರಿಲಯನ್ಸ್ ಡಿಜಿಟಲ್ ನನ್ನ ನೆಚ್ಚಿನ ತಂತ್ರಜ್ಞಾನ ಮಳಿಗೆಯಾಗಿದೆ, ಮತ್ತು ನನ್ನ ಹಾಗೆ ಈ ಹೊಸ ತಲೆಮಾರಿನ ಟಿವಿ ಅನುಭವ ಪಡೆಯುವ ಅವಕಾಶ ಇಡೀ ಭಾರತಕ್ಕೆ ದೊರಕುತ್ತಿರುವುದು ನನಗೆ ಸಂತೋಷ ತಂದಿದೆ" ಎಂದು ಅವರು ಹೇಳಿದರು.
ಇತ್ತೀಚೆಗೆ ಪರಿಚಯಿಸಲಾಗಿರುವ ಒನ್‌ಪ್ಲಸ್ ಟೀವಿ ಒನ್‌ಪ್ಲಸ್ ಟೀವಿ 55 ಕ್ಯೂ 1 ಹಾಗೂ ಒನ್‌ಪ್ಲಸ್ ಟೀವಿ 55 ಕ್ಯೂ 1 ಪ್ರೋ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಎರಡೂ ಮಾದರಿಗಳು 4ಕೆ ಕ್ಯೂಎಲ್‌ಇಡಿ ಅನುಭವ ನೀಡಲಿವೆ. ಎರಡೂ ಸ್ಟಾರ್‌ ಟೀವಿಗಳು ಆಂಡ್ರಾಯ್ಡ್ ಟೀವಿಯ ಇತ್ತೀಚಿನ ಆವೃತ್ತಿ ಬಳಸಿ ಕೆಲಸಮಾಡುತ್ತವೆ.
ಇದಲ್ಲದೆ, ಒನ್‌ಪ್ಲಸ್ ಟೀವಿ ಖರೀದಿಸುವ ಗ್ರಾಹಕರಿಗೆ ಎಚ್‌ಡಿಎಫ್‌ಸಿ ಕಾರ್ಡ್‌ಗಳ ಮೇಲೆ ರೂ. 7000ವರೆಗಿನ ಕ್ಯಾಶ್‌ಬ್ಯಾಕ್, ನೋ ಕಾಸ್ಟ್ ಇಎಂಐ ಆಯ್ಕೆಗಳು, ವಿಸ್ತೃತ ವಾರಂಟಿ ಹಾಗೂ ಮಲ್ಟಿಬ್ಯಾಂಕ್ ಕ್ಯಾಶ್‌ಬ್ಯಾಕ್‌ನಂತಹ ಹಲವು ಕೊಡುಗೆಗಳ ಗುಚ್ಛವನ್ನೂ ರಿಲಯನ್ಸ್ ಡಿಜಿಟಲ್ ನೀಡುತ್ತಿದೆ ಎಂದು ಅವರು ತಿಳಿಸಿದರು.
ಯುಎನ್ಐ ಎಎಚ್ 1755
More News

ಸೆನ್ಸೆಕ್ಸ್ 229 ಅಂಕ ಇಳಿಕೆ

13 Nov 2019 | 4:54 PM

 Sharesee more..
ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಗೆ ನೀತಾ ಅಂಬಾನಿ ಆಯ್ಕೆ

ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಮಂಡಳಿಗೆ ನೀತಾ ಅಂಬಾನಿ ಆಯ್ಕೆ

13 Nov 2019 | 2:15 PM

ಮುಂಬೈ, ನ.13(ಯುಎನ್‌ಐ) ಶಿಕ್ಷಣ ತಜ್ಞ, ಸಮಾಜಸೇವಕಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನ ಗೌರವ ಟ್ರಸ್ಟಿಯಾಗಿ ಆಯ್ಕೆ ಮಾಡಲಾಗಿದೆ.

 Sharesee more..
ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ

ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ

12 Nov 2019 | 9:40 PM

ಬೆಂಗಳೂರು, ನ.12 (ಯುಎನ್ಐ) ಭಾರತದ ಲಕ್ಷಾಂತರ ಮೊಬೈಲ್ ಫೋನ್ ಬಳಕೆದಾರರು ಆನಂದಿಸುತ್ತಿರುವ ಅತ್ಯಂತ ಜನಪ್ರಿಯ ಟಿವಿ ಮತ್ತು ಪ್ರಸಾರ ಅಪ್ಲಿಕೇಶನ್ ಜಿಯೋ ಟಿವಿಗೆ ಲಂಡನ್‌ನಲ್ಲಿ ನಡೆದ ವಿಶ್ವ ಸಂವಹನ ಪ್ರಶಸ್ತಿ 2019 ರಲ್ಲಿ ‘ಐಪಿಟಿವಿ ಇನ್ನೋವೇಶನ್‌ ಪ್ರಶಸ್ತಿ’ ಲಭ್ಯವಾಗಿದೆ.

 Sharesee more..