Tuesday, Oct 20 2020 | Time 13:52 Hrs(IST)
  • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
  • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
  • ನಾಳೆ ಕೇಂದ್ರ ಸಂಪುಟ ಸಭೆ
  • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
  • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
  • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
  • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
  • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
  • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
  • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
  • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
  • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
  • ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ
Parliament Share

ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್

ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ:  ಪಿಯೂಷ್ ಗೋಯಲ್
ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್

ನವದೆಹಲಿ, ಸೆ 18(ಯುಎನ್ಐ) ಭಾರತೀಯ ರೈಲ್ವೆಯನ್ನು ಖಾಸಗೀಕರಿಸುವ ಯಾವುದೇ ಪ್ರಸ್ತಾವನೆ ತನ್ನ ಮುಂದೆ ಇಲ್ಲ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರೈಲ್ವೆ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ತಿಳಿಸಿದ್ದಾರೆ.

ರೈಲ್ವೆ ಜಾಲ ವಿಸ್ತರಣೆ, ಸಾಮರ್ಥ ವೃದ್ದಿ ಹಾಗೂ ಇನ್ನಿತರ ಅಧುನೀಕರಣ ಕಾರ್ಯಗಳಿಗಾಗಿ 2030 ವೇಳೆಗೆ 50 ಲಕ್ಷ ಕೋಟಿರೂಪಾಯಿ ಬಂಡವಾಳ ಹೂಡಿಕೆ ರೈಲ್ವೆಗೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಆಧುನಿಕ ತಂತಜ್ಞಾನ ಅಳವಳಿಸಿಕೊಳ್ಳಲು, ಬಂಡವಾಳ ಕೊರತೆಯ ಅಂತರ ತಗ್ಗಿಸಲು, ಪ್ರಯಾಣಿಕರ ಸೇವೆಗಳ ಸುಧಾರಿಸಲು, ಆಯ್ದ ಮಾರ್ಗಗಳಲ್ಲಿ ಪ್ರಯಾಣಕರ ರೈಲು ಓಡಿಸಲು ಆಧುನಿಕ ರೈಲುಗಳನ್ನು ಸೇರ್ಪಡೆಗೊಳಿಸುವಂತಹ ಕೆಲ ಉಪ ಕ್ರಮಗಳಿಗೆ ರೈಲ್ವೆ ಸರ್ಕಾರಿ- ಖಾಸಗಿ ಸಹಭಾಗಿತ್ವ ಮಾದರಿ ಬಳಸಲು ರೈಲ್ವೆ ಯೋಜಿಸಿದೆ ಅವರು ವಿವರಿಸಿದ್ದಾರೆ.



ಕಾರ್ಯಾಚರಣೆ ಹಾಗೂ ಸುರಕ್ಷತಾ ಪ್ರಮಾಣೀಕರಣದ ಕಾರ್ಯಗಳು

ಭಾರತೀಯ ರೈಲ್ವೆಯೊಂದಿಗೆ ಮುಂದುವರಿಯಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಆಧುನಿಕ ರೋಲಿಂಗ್ ಸ್ಟಾಕ್ ಹಾಗೂ ಡಿಪೋಗಳ ನಿರ್ವಹಣೆಯಲ್ಲಿ ಖಾಸಗಿ ಹೂಡಿಕೆದಾರರ ಅಗತ್ಯವಿದೆ ಎಂದು ಗೋಯಲ್ ಮಾಹಿತಿ ನೀಡಿದರು. ಇದರಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಸೇವೆಗಳ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ. ರೈಲ್ವೆ ಕಾರ್ಯಾಚರಣೆ ನಡೆಸುತ್ತಿರುವ ಸಾಮಾನ್ಯ ಪ್ರಯಾಣಿಕ ರೈಲು ಸೇವೆಯನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಿಲ್ಲ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.

ಯುಎನ್ಐ ಕೆವಿಆರ್ 1419

There is no row at position 0.