SportsPosted at: Dec 1 2020 8:32PM Shareರಾಷ್ಟ್ರೀಯ ತಂಡದಲ್ಲೂ ಐಪಿಎಲ್ನ ಸಾಧನೆ ಮುಂದುವರೆಸುತ್ತೇನೆ: ರಬಡನವದೆಹಲಿ, ಡಿ.1 (ಯುಎನ್ಐ)- ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರು ರಾಷ್ಟ್ರೀಯ ತಂಡದಲ್ಲೂ ಐಪಿಎಲ್ ಪ್ರದರ್ಶನ ಸ್ಥಿರವಾಗಿಟ್ಟಿಕೊಳ್ಳಲು ಪ್ರಯತ್ನಿಸುತ್ತೇನೇ ಎಂದು ಆಶಿಸಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ 20 ಸರಣಿ ನಡೆಯುತ್ತಿದೆ, ಈ ಸರಣಿಯಲ್ಲಿ 2–0ರಲ್ಲಿ ಇಂಗ್ಲೆಂಡ್ ಅಜೇಯ ಮುನ್ನಡೆ ಸಾಧಿಸಿದೆ. ಮೂರು ಪಂದ್ಯಗಳ ಟಿ-20 ಸರಣಿಯ ನಂತರ ಉಭಯ ತಂಡಗಳು ಡಿಸೆಂಬರ್ 4 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. ರಬಾಡಾ ಸ್ಟಾರ್ ಸ್ಪೋರ್ಟ್ಸ್ಗೆ, “ಇದು ಉತ್ಸಾಹಭರಿತ ಸರಣಿ. ರಾಷ್ಟ್ರೀಯ ತಂಡಕ್ಕಾಗಿ ಆಡುವಾಗ, ಐಪಿಎಲ್ ಪ್ರದರ್ಶನ ಮುಂದುವರಿಸಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ವೇಗದ ಬೌಲರ್ಗಳು ಪ್ರತಿ ಪಂದ್ಯದಲ್ಲೂ ಸ್ಥಿರತೆಯನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್ ಮತ್ತು ಇಯೊನ್ ಮಾರ್ಗನ್ ಲಯದಲ್ಲಿದ್ದಾರೆ ಮತ್ತು ನಾವು ಈ ಸವಾಲಿಗೆ ಸಿದ್ಧರಿದ್ದೇವೆ” ಎಂದು ಹೇಳಿದ್ದಾರೆ. “ದೇಶದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮರಳಿದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಇಂಗ್ಲೆಂಡ್ ಪ್ರಬಲ ತಂಡವಾಗಿದ್ದು, ಜೋಫ್ರಾ ಆರ್ಚರ್ ಮತ್ತು ಸ್ಯಾಮ್ ಕರನ್ ಫಾರ್ಮ್ನಲ್ಲಿದ್ದಾರೆ. ನಮ್ಮ ತಂಡ ಉತ್ತಮವಾಗಿದೆ. ಉಭಯ ತಂಡಗಳು ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನ್ ಅಪ್ಗಳನ್ನು ಹೊಂದಿವೆ" ಎಂದು ರಬಾಡ ತಿಳಿಸಿದ್ದಾರೆ. ಯುಎನ್ಐ ವಿಎನ್ಎಲ್ 2030