Sunday, Nov 29 2020 | Time 18:17 Hrs(IST)
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
 • ಪ್ರಧಾನಿ ಭೇಟಿ ಹಿನ್ನೆಲೆ: ಸ್ವಾಗತಕ್ಕೆ ವಾರಾಣಸಿ ಸಜ್ಜು
 • ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ
 • ಜನತೆಗೆ ಗುರುನಾನಕ್ ಜಯಂತಿ ಶುಭಾಶಯ ಕೋರಿದ ಪ್ರಧಾನಿ
National Share

ರೋಹ್ತಂಗ್ ನಲ್ಲಿ ಪ್ರಧಾನಿಯಿಂದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್ ಟನಲ್’ ಉದ್ಘಾಟನೆ

ರೋಹ್ತಂಗ್, ಅ 3 (ಯುಎನ್ಐ) ಹಿಮಾಚಲ ಪ್ರದೇಶದ ರೋಹ್ತಂಗ್‍ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವೆನಿಸಿರುವ’ ಅಟಲ್ ಟನಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಇದು ಲೇಹ್ ಮತ್ತು ಮನಾಲಿ ನಡುವಿನ ಪ್ರಯಾಣದ ಸಮಯವನ್ನು 4-5 ಗಂಟೆಗಳವರೆಗೆ ಮತ್ತು ದೂರವನ್ನು 46 ಕಿ.ಮೀ ಕಡಿಮೆಗೊಳಿಸಲಿದೆ.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.

9.02 ಕಿ.ಮೀ ಉದ್ದದ ಸುರಂಗ ಮನಾಲಿಯನ್ನು ವರ್ಷಪೂರ್ತಿ ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಸುರಂಗ ನಿರ್ಮಾಣದ ಮುನ್ನ ಭಾರೀ ಹಿಮಪಾತದಿಂದಾಗಿ ಪ್ರತಿವರ್ಷ ಸುಮಾರು 6 ತಿಂಗಳು ಕಣಿವೆಯೊಂದಿಗೆ ಸಂಪರ್ಕ ಕಡಿದುಕೊಳ್ಳಲಾಗುತ್ತಿತ್ತು.

ಅಟಲ್ ಸುರಂಗದ ದಕ್ಷಿಣ ತುದಿ ಮನಾಲಿಯಿಂದ 25 ಕಿ.ಮೀ ದೂರದಲ್ಲಿ 3060 ಮೀಟರ್ ಎತ್ತರದಲ್ಲಿದೆ. ಸುರಂಗದ ಉತ್ತರ ತುದಿ ಲಾಹೌಲ್ ಕಣಿವೆಯ ಸಿಸ್ಸು ಎಂಬ ಹಳ್ಳಿಯ ಬಳಿ 3071 ಮೀಟರ್ ಎತ್ತರದಲ್ಲಿದೆ.

ಹಿಮಾಲಯದ ಪಿರ್ ಪಂಜಲ್ ಶ್ರೇಣಿಯಲ್ಲಿ ಅತ್ಯಾಧುನಿಕ ತಾಂತ್ರಿಕತೆಯಿಂದ ನಿರ್ಮಿಸಲಾಗಿರುವ ಸುರಂಗ ಸಮುದ್ರಮಟ್ಟದಿಂದ 3,000 ಮೀಟರ್ (10,000 ಅಡಿ) ಎತ್ತರದಲ್ಲಿದೆ.

ಇದು ಕುದುರೆ ಆಕಾರದ, ಒಂದೇ ಸುರಂಗದ ಎರಡು ಪಥದ ಎಂಟು ಕಿ.ಮೀ ಉದ್ದದ ಮಾರ್ಗವಾಗಿದೆ. ಸುರಂಗದ ಅಗಲ 10.5 ಮೀಟರ್ ನಷ್ಟಿದೆ.

ದಿನಕ್ಕೆ 3000 ಕಾರುಗಳು ಮತ್ತು 1,500 ಟ್ರಕ್‌ಗಳ ಸಂಚಾರ ಸಾಂದ್ರತೆಯೊಂದಿಗೆ ಗರಿಷ್ಠ ಗಂಟೆಗೆ 80 ಕಿ.ಮೀ ವೇಗದಲ್ಲಿ ಸಾಗುವಂತೆ ಅಟಲ್ ಸುರಂಗದಲ್ಲಿ ವಿನ್ಯಾಸಗೊಳಿಸಲಾಗಿದೆ.
ರೋಹ್ತಂಗ್ ಪಾಸ್ ಕೆಳಗೆ ಕಾರ್ಯತಂತ್ರದ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 2000ರ ಜೂನ್ 3 ರಂದು ತೆಗೆದುಕೊಳ್ಳಲಾಗಿತ್ತು. ಮೇ 26, 2002 ರಂದು ಸುರಂಗದ ದಕ್ಷಿಣ ತುದಿ ಪ್ರವೇಶ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಸೆರಿ ನಲಾಹ್ ಫಾಲ್ಟ್ ವಲಯದ 587 ಮೀಟರ್ ಉದ್ದದ ಸುರಂಗವನ್ನು ಭೌಗೋಳಿಕ, ದುರ್ಗಮ ಭೂಪ್ರದೇಶ ಮತ್ತು ಹವಾಮಾನ ಸವಾಲುಗಳನ್ನು ಮೆಟ್ಟಿ ಅವಿರತ ಶ್ರಮದಿಂದ ನಿರ್ಮಿಸಿದೆ . 2017 ರ ಅಕ್ಟೋಬರ್ 15ರಂದು ಎರಡೂ ತುದಿಗಳ ನಡುವೆ ಸಂಪರ್ಕ ಸಾಧಿಸಲಾಗಿತ್ತು.

ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಅವರು ನೀಡಿದ ಕೊಡುಗೆಯನ್ನು ಗೌರವಿಸಲು ಕೇಂದ್ರ ಸಚಿವ ಸಂಪುಟ 2019 ರ ಡಿ 24 ರಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ರೋಹ್ತಂಗ್ ಸುರಂಗವನ್ನು ‘ಅಟಲ್ ಟನಲ್ ‘ಎಂದು ಹೆಸರಿಸಲು ನಿರ್ಧರಿಸಿತ್ತು.

ಯುಎನ್ಐ ಎಸ್ಎಲ್ಎಸ್ 1256
More News
ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ

29 Nov 2020 | 5:15 PM

ಚೆನ್ನೈ, ನ 29 (ಯುಎನ್‌ಐ) ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಾಳೆ ರಜಿನಿ ಮಕ್ಕಳ್‍ ಮಂದಿರಂ (ಆರ್ ಎಂಎಂ) ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ನಾಲ್ಕೈದು ತಿಂಗಳಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಕುರಿತು ನಿರ್ಧರಿಸಲಿದ್ದಾರೆ.

 Sharesee more..
ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌

29 Nov 2020 | 5:10 PM

ನವದೆಹಲಿ, ನ 29 (ಯುಎನ್ಐ) ಹಣದ ಕೊರತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ವೇತನ ತಡೆಹಿಡಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ, ಎಸ್‌ಸಿ ಮತ್ತು ಎಸ್‌ಟಿ ಯಾವಾಗಲೂ ಹಿಂದುಳಿದಿರಬೇಕು ಎಮದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

 Sharesee more..
ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

ಕೋವಿಡ್‌: ಯಾವುದೇ ನಿರ್ಲಕ್ಷ್ಯ ಮಾರಣಾಂತಿಕವಾಗಬಹುದು-ಮೋದಿ

29 Nov 2020 | 5:00 PM

ನವದೆಹಲಿ, ನ 29 (ಯುಎನ್ಐ) ಕೋರೋನಾ ವೈರಸ್‌ ಸೋಂಕನ್ನು ನಿರ್ಲಕ್ಷ್ಯಿಸುವುದು ಮಾರಣಾಂತಿಕವಾಗಿ ಪರಿಗಣಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

 Sharesee more..
ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್‍ ನಲ್ಲಿ ಬೃಹತ್ ರೋಡ್‍ ಶೋ ನಡೆಸಿದ ಅಮಿತ್ ಶಾ

ಜಿಎಚ್‌ಎಂಸಿ ಚುನಾವಣೆ: ಹೈದರಾಬಾದ್‍ ನಲ್ಲಿ ಬೃಹತ್ ರೋಡ್‍ ಶೋ ನಡೆಸಿದ ಅಮಿತ್ ಶಾ

29 Nov 2020 | 4:52 PM

ಹೈದರಾಬಾದ್, ನ 29 (ಯುಎನ್ಐ) ಮುಂಬರುವ ಗ್ರೇಟರ್ ಹೈದರಾಬಾದ್ ಮಹಾ ನಗರ ಪಾಲಿಕೆ(ಜಿಎಚ್‍ಎಂಸಿ) ಚುನಾವಣೆಯ ಪ್ರಚಾರದ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.

 Sharesee more..