Tuesday, Oct 22 2019 | Time 08:46 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Sports Share

ರೋಹಿತ್ ತಮ್ಮ ನೈಜ ಆಟ ಆಡಲಿ: ವಿರಾಟ್

ರೋಹಿತ್ ತಮ್ಮ ನೈಜ ಆಟ ಆಡಲಿ: ವಿರಾಟ್
ರೋಹಿತ್ ತಮ್ಮ ನೈಜ ಆಟ ಆಡಲಿ: ವಿರಾಟ್

ಪುಣೆ, ಅ.9 (ಯುಎನ್ಐ)- ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ತಮ್ಮ ಜವಾಬ್ದಾರಿಯತ್ತ ಚಿತ್ತ ಕೇಂದ್ರಿ ಕರಿಸಲಿ. ಅಲ್ಲದೆ ಅವರು ಟೆಸ್ಟ್ ನಲ್ಲಿ ಆಡುವ ಆಟದ ಬಗ್ಗೆ ಚರ್ಚೆಗಳು ಅನವಶ್ಯಕ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ವಿರಾಟ್, "ರೋಹಿತ್ ಅವರಿಗೆ ತಮ್ಮ ಆಟವನ್ನು ಆನಂದಿಸಲು ಬಿಡಿ. ನಿಮಿಗೆಲ್ಲಾ ತಿಳಿದಂತೆ ಅವರು ಉತ್ತಮವಾಗಿ ಆಡುತ್ತಾ ಇದ್ದಾರೆ. ಸೀಮಿತ ಓವರ್ ಗಳ ಪಂದ್ಯದಂತೆ ಟೆಸ್ಟ್ ನಲ್ಲೂ ಇವರು ಉತ್ತಮವಾಗಿ ಬ್ಯಾಟ್ ಮಾಡಬಲ್ಲರು" ಎಂದಿದ್ದಾರೆ.

"ನನ್ನ ದೃಷ್ಟಿಯಿಂದ ಅವರು ಚೆನ್ನಾಗಿ ಆಡುತ್ತಾ ಇದ್ದಾರೆ. ಮೊದಲ ಪಂದ್ಯದಲ್ಲಿ ಅವರು ನೈಜ ಆಟವಾಡಿದ್ದನ್ನು ನೋಡಿ ಸಂತೋಷವಾಗಿದೆ. ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಬ್ಯಾಟಿಂಗ್ ನಡೆಸಿದ್ದಾರೆ" ಎಂದು ತಿಳಿಸಿದ್ದಾರೆ.

ಭಾರತ ತಂಡಕ್ಕೆ ತವರಿನಲ್ಲಿ ಹೇಗೆ ಆಡಬೇಕು ಎಂಬುದರ ಬಗ್ಗೆ ಜ್ಞಾನವಿದೆ. ತವರಿನಲ್ಲಿನ ಸವಾಲು ಮೆಟ್ಟಿ ನಿಂತು ಆಡುವುದು ಸುಲಭವಲ್ಲ. ನಾವು ಯಾವುದೇ ವಿಷಯವನ್ನು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ. ಮಾನಸಿಕ ಸ್ಥೈರ್ಯವನ್ನು ಕಾಯ್ದುಕೊಳ್ಳುವತ್ತ ಚಿತ್ತ ನೆಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಯುಎನ್ಐ ವಿಎನ್ಎಲ್ 1903