Wednesday, Jun 3 2020 | Time 08:06 Hrs(IST)
National Share

ರಾಹುಲ್‌ಗಾಂಧಿ ನಿರ್ಗಮನ ಪಕ್ಷಕ್ಕೆ ದೊಡ್ಡ ಹೊಡೆತ: ಸಲ್ಮಾನ್ ಖುರ್ಷಿದ್

ರಾಹುಲ್‌ಗಾಂಧಿ ನಿರ್ಗಮನ ಪಕ್ಷಕ್ಕೆ ದೊಡ್ಡ ಹೊಡೆತ: ಸಲ್ಮಾನ್ ಖುರ್ಷಿದ್
ರಾಹುಲ್‌ಗಾಂಧಿ ನಿರ್ಗಮನ ಪಕ್ಷಕ್ಕೆ ದೊಡ್ಡ ಹೊಡೆತ: ಸಲ್ಮಾನ್ ಖುರ್ಷಿದ್

ನವದೆಹಲಿ, ಅ, 9 (ಯುಎನ್ಐ ) ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಮುನ್ನವೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿ ರಾಜೀನಾಮೆ ನೀಡಿ ಹೊರ ಹೋಗಿದ್ದು, ಪಕ್ಷಕ್ಕ ದೊಡ್ಡ ಹೊಡೆತ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿ ರಾಜೀನಾಮೆ ನೀಡುವ ಮೂಲಕ ಸೋಲಿನಿಂದ ಪಲಾಯನವಾದ ಮಾಡಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಅವಕಾಶವೂ ಸಿಗಲಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದರು.

ಬಿಜೆಪಿಯಿಂದ ಹೀನಾಯ ಸೋಲು ಕಂಡ ಬಳಿಕ ಪಕ್ಷದ ಸ್ಥಿತಿಗತಿ ಬಗ್ಗೆ ವಿವರಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಏಕೆ ಸೋಲಾಯಿತು ಎನ್ನುವುದನ್ನು ನಾವು ವಿವರವಾಗಿ ಮತ್ತು ವಸ್ತುನಿಷ್ಠವಾಗಿ, ವಾಸ್ತವವಾಗಿ ವಿಶ್ಲೇಷಣೆ ಮಾಡಲೇ ಇಲ್ಲ, ಇದಕ್ಕೆ ಮುಖ್ಯ ಕಾರಣ ಎಂದರೆ ನಾಯಕ ಹೊರ ಹೋಗಿದ್ದು ಎಂದು ಹೇಳಿದ್ದಾರೆ.

ಸೋಲಿನ ಹೊಣೆಹೊತ್ತು ರಾಹುಲ್‌ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಅಂತಹ ನಿರ್ಧಾರ ತೆಗೆದುಕೊಳ್ಳುವಾಗ ಹುದ್ದೆಯಲ್ಲಿ ಮುಂದುವರಿದು ಸಂಘಟನೆಗೆ ಹೊಸ ಹುಟ್ಟು ನೀಡಬೇಕು ಎಂದು ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಮಾಡಿಕೊಂಡ ಮನವಿಯನ್ನು ಅವರು ಕಡೆಗಣಿಸಿದ ಬಗ್ಗೆಯೂ ಅವರು ಅಸಮಾಧಾನ ಹೊರಹಾಕಿದರು.

ರಾಹುಲ್ ರಾಜೀನಾಮೆಯನ್ನು ಪಲಾಯನವಾದ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಲೇವಡಿಯ ರೀತಿಯಲ್ಲಿ ಹೇಳಿರುವುದು ಇದೇ ಮೊದಲು ಎನ್ನಲಾಗಿದೆ.

ಯುಎನ್ಐ ಕೆಎಸ್ಆರ್ ಎಎಚ್ 1626

More News

ಮೋದಿ - ಟ್ರಂಪ್ ಮಾತುಕತೆ

02 Jun 2020 | 10:12 PM

 Sharesee more..
ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

ಪ್ರಧಾನಿಯವರಿಂದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪರಿಸ್ಥಿತಿಯ ಪರಿಶೀಲನೆ

02 Jun 2020 | 9:00 PM

ನವದೆಹಲಿ, ಜೂನ್ 2 (ಯುಎನ್‍ಐ) ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ಪಶ್ಚಿಮ ಕರಾವಳಿಯ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪರಿಶೀಲಿಸಿದ್ದಾರೆ.

 Sharesee more..