Tuesday, Oct 20 2020 | Time 14:59 Hrs(IST)
 • ಸತತ 3ನೇ ವರ್ಷ ಹಿರಿಯರೊಂದಿಗೆ ಸಾಗುವುದು ಕಷ್ಟಸಾಧ್ಯ : ಪ್ಲೇಮಿಂಗ್
 • ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಮುತ್ತಯ್ಯ ಮುರಳೀಧರನ್ ಮನವಿಗೆ ಸಮ್ಮತಿಸಿದ ತಮಿಳು ನಟ ವಿಜಯ್ ಸೇತುಪತಿ
 • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
 • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
 • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
International Share

ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ !

ವಾಷಿಂಗ್ಟನ್, ಸೆ 17(ಯುಎನ್ಐ) ಕೊರೊನಾ ವೈರಸ್ ಸಾಂಕ್ರಾಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೇವಲ ಎರಡು ಮಾರ್ಗಗಳಿವೆ.
ಒಂದು ದೈಹಿಕ ಅಂತರ ಕಾಯ್ದುಕೊಳ್ಳುವುದು, ಇನ್ನೊಂದು ಮಾಸ್ಕ್ ಧರಿಸುವುದು. ಪ್ರಸ್ತುತ ಕೊರೊನಾ ಶಮನಕ್ಕೆ ಔಷಧಿ ಕಂಡುಹಿಡಿಯಲು ಜಗತ್ತಿನ ಹಲವು ದೇಶಗಳು ಪ್ರಯತ್ನ ನಡೆಸುತ್ತಿವೆ. ಹಲವು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳು ಸಹ ನಡೆಯುತ್ತಿವೆ. ಆದರೆ, ಲಸಿಕೆಗಳಿಗಿಂತ ಮಾಸ್ಕ್ ನಮಗೆ ಹೆಚ್ಚಿನ ಸುರಕ್ಷತೆಯನ್ನು ಕಲ್ಪಿಸುತ್ತದೆ. ಇದು ಅತ್ಯಂತ ಶಕ್ತಿಶಾಲಿ ಸಾರ್ವಜನಿಕ ಆರೋಗ್ಯ ಸಾಧನವಾಗಿದೆ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.
ಭಾರತದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ನಂತೆ ಅಮೆರಿಕಾದಲ್ಲಿ ಸಿಡಿಸಿ ಕಾರ್ಯನಿರ್ವಹಿಸುತ್ತಿದೆ.
ಸೆನೆಟ್ ಉಪ ಸಮಿತಿ ವಿಚಾರಣೆಯಲ್ಲಿ ಅಮೆರಿಕಾದ ಶಾಸನ ಸಭಾ ಸದಸ್ಯರ ಪ್ರಶ್ನೆಗಳಿಗೆ ರೆಡ್ಫೀಲ್ಡ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಲಸಿಕೆ ಲಭ್ಯವಾದರೂ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಏಕೆಂದರೆ ಮಾಸ್ಕ್ ಗಳು ಲಸಿಕೆಗಳಿಗಿಂತ ನಮ್ಮನ್ನು ಹೆಚ್ಚು ರಕ್ಷಿಸುತ್ತವೆ ಎಂದು ಅವರು ಹೇಳಿದ್ದಾರೆ.
ಮುಂದಿನ ವರ್ಷ ಅಂದರೆ ಜನವರಿಯಲ್ಲಿ ಲಭಿಸಲಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುಎನ್ಐ ಕೆವಿಆರ್ 10.58