NationalPosted at: Jan 22 2021 10:13AM Shareಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ಸಂವಾದನವದೆಹಲಿ , ಜ 22 (ಯುಎನ್ಐ) ಕೊರೋನ ಲಸಿಕೆ ಪಡೆಯುವ, ಸುರಕ್ಷತೆಯ ಕುರಿತು ವಾದ- ವಿವಾದ, ಅಪನಂಬಿಕೆ ಮಾತು, ಚರ್ಚೆ, ನಡೆಯುತ್ತಿರುವಾಗಲೇ ಲಸಿಕೆ ಪಡೆದ ಫಲಾನುಭವಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಅವರ ಅನುಭವ ಕೇಳಲಿದ್ದಾರೆ. ವಾರಾಣಸಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ಅಭಿಯಾನದ ಫಲಾನುಭವಿಗಳು ಮತ್ತು ಲಸಿಕೆಕಾರರ ಜೊತೆ ಸಂವಾದ ನಡೆಸಲಿದ್ದಾರೆ. ಈ ಸಂವಾದದಲ್ಲಿ ಭಾಗವಹಿಸುವವರು ಲಸಿಕೆಯ ಪಡೆದ ನಂತರದ ಮೊದಲ ಅನುಭವ ಹಂಚಿಕೊಳ್ಳಲಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದ ಸುಲಲಿತವಾಗಿ ನಡೆಯಲು ವಿಜ್ಞಾನಿಗಳು, ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಇತರ ಪಾಲುದಾರರೊಂದಿಗೆ ಪ್ರಧಾನಿ ನಿರಂತರ ಸಂವಾದ ಮತ್ತು ಚರ್ಚೆಯನ್ನು ಈ ಸಂವಾದ ಅನುಸರಿಸಲಿದೆ. ಈ ಸಂವಾದವು ಅವರ ಅನುಭವಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಕೇಳುವ ಅವಕಾಶ ನೀಡಲಿದೆ. ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಮುಂಚೂಣಿ ಯೋಧರು ದೇಶದಾದ್ಯಂತ ಲಸಿಕೆ ಪಡೆಯುತ್ತಿದ್ದಾರೆ. ಲಸಿಕಾ ಅಭಿಯಾನದ ಫಲಾನುಭವಿಗಳು ಮತ್ತು ಲಸಿಕೆದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಯಲಿದೆ. ಯುಎನ್ಐ ಕೆಎಸ್ಆರ್ 1012