ನವದೆಹಲಿ, ಜ 13 (ಯುಎನ್ಐ ) ಕೋವಿಡ್-19 ಲಸಿಕೆಯ ಎರಡು ಡೋಸ್ ಗಳ ನಡುವೆ 28 ದಿನಗಳ ಅಂತರವಿದ್ದು, ಎರಡನೇ ಡೋಸ್ ನೀಡಿದ 14 ದಿನಗಳ ನಂತರವಷ್ಟೇ ಲಸಿಕೆ ಪಡೆದವರಲ್ಲಿ ಪರಿಣಾಮ ಕಂಡುಬರಲಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದು ಎರಡನೇ ಡೋಸ್ ನೀಡಿದ 14 ದಿನಗಳ ನಂತರವಷ್ಟೇ ಅದರ ಪರಿಣಾಮ ಗೊತ್ತಾಗಲಿದೆ ಎಂದರು.
ಹೀಗಾಗಿ ಅಷ್ಟು ದಿನ ಲಸಿಕೆ ಹಾಕಿಸಿಕೊಂಡವರು ಜಾಗರೂಕರಾಗಿರಬೇಕು. ಲಸಿಕೆ ಹಾಕಿದ ತಕ್ಷಣ ನಾವು ಸುರಕ್ಷಿತರು, ಇನ್ನೂ ಯಾವುದೇ ಚಿಂತೆ, ಆತಂಕವೇ ಇಲ್ಲ ಎಂಬ ತೀರ್ಮಾನಕ್ಕೆ ಬರಬಾರದು, ಎರಡೂ ಲಸಿಕೆಗಳ ಮಧ್ಯೆ 28 ದಿನಗಳ ಅಂತರವಿರುತ್ತದೆ ಎಂದರು.
ಬರುವ ಶನಿವಾರದಿಂದ ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದ್ದು ಆರಂಭದಲ್ಲಿ ಸುಮಾರು 3 ಕೋಟಿ ಆರೋಗ್ಯಸೇವಾ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಸದ್ಯ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.
ಯುಎನ್ಐ ಕೆಎಸ್ಆರ್ 1011