Tuesday, Aug 11 2020 | Time 17:34 Hrs(IST)
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
 • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
 • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
 • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
 • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
 • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
 • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
 • ಕನ್ನಡ ಭಾಷಾ ಕೌಶಲ್ಯ ಆನ್‌ ಲೈನ್ ಪರೀಕ್ಷೆ ತಂತ್ರಾಂಶಕ್ಕೆ ರಾಜ್ಯೋತ್ಸವ ವೇಳೆ ಚಾಲನೆ: ಟಿ ಎಸ್ ನಾಗಾಭರಣ
 • ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಯಶಸ್ವಿ; ಮುಖ್ಯಮಂತ್ರಿ ಕೃತಜ್ಞತೆ
 • ಕೋವಿಡ್ ಸೋಂಕಿತ ಅಧಿಕಾರಿ, ಸಿಬ್ಬಂದಿಗೆ ಧೈರ್ಯ ತುಂಬಿದ ಡಾ ಪಿ ಎಸ್ ಹರ್ಷ ಮಾತುಕತೆ
 • ಕೋವಿಡ್‌ ನಡುವಲ್ಲೂ ತ್ವರಿತ ಪ್ರಗತಿಯಲ್ಲಿ ಸಾಗಿದೆ ಕೇಂದ್ರದ ಮಹತ್ವಾಕಾಂಕ್ಷೆಯ 'ಜಲ ಜೀವನ' ಯೋಜನೆ
 • ಪ್ರಣಬ್ ಮುಖರ್ಜಿ ಆರೋಗ್ಯ ಪರಿಸ್ಥಿತಿ ಗಂಭೀರ
 • ಬ್ರಹ್ಮಗಿರಿಯಲ್ಲಿ ಕಾರ್ಯಾಚರಣೆ ಮುಂದುವರಿಕೆ: ನಾರಾಯಣ ಆಚಾರ್‌ ಮೃತದೇಹ ಪತ್ತೆ
 • ನಾಯಕತ್ವದ ವಿರುದ್ದ ಬಂಡಾಯ, ಮಣಿಪುರದಲ್ಲಿ 6 ಕಾಂಗ್ರೆಸ್ ಶಾಸಕರ ರಾಜೀನಾಮೆ
business economy Share

ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ: ಕೋಡ್ಶೇರ್ ವಿಮಾನ ಸೇವೆಗೆ ಚಾಲನೆ

ಬೆಂಗಳೂರು, ಡಿ.10(ಯುಎನ್ಐ) ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಗ್ರಾಹಕರಿಗೆ ‘ಕೋಡ್ಶೇರ್’ (codeshare) ವಿಮಾನ ಸೇವೆಯನ್ನು ಒದಗಿಸಲಿವೆ. ಇದರ ಪರಿಣಾಮ ಹೆಚ್ಚುವರಿ 126 ವಿಮಾನಗಳು ಪ್ರತಿ ವಾರಕ್ಕೆ ದೇಶದ 10 ಪ್ರಮುಖ ನಗರಗಳಗೆ ಹಾರಾಟ ನಡೆಸಲಿವೆ.
ಈಗಾಗಲೇ ಲೂಫ್ತಾನ್ಸಾ ಪ್ರತಿ ವಾರಕ್ಕೆ 56 ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳಿಂದ ಸೇವೆ ಒದಗಿಸುತ್ತಿದೆ. ‘ಕೋಡ್ಶೇರ್’ ಒಪ್ಪಂದದ ಪ್ರಕಾರ ವಿಸ್ಟಾರದ ನೆಟ್ವರ್ಕ್ ನಲ್ಲಿ ಇನ್ನಷ್ಟು ಸ್ಥಳಗಳನ್ನು 2020ರ ಒಳಗಾಗಿ ಸೇರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಲೂಫ್ತಾನ್ಸಾದ ಜಾಗತಿಕ ತಲುಪುವಿಕೆ ಹಾಗು ವಿಸ್ಟಾರದ ಉತ್ತಮ ಡೊಮೆಸ್ಟಿಕ್ ನೆಟ್ವರ್ಕ್ ನಿಂದ ಯುರೋಪಿಯನ್ ಏರ್‌ಲೈನ್‌ ಗ್ರಾಹಕರಿಗೆ ಭಾರತದ ಬಹಳಷ್ಟು ನಗರಗಳಿಗೆ ಸುಲಭವಾಗಿ ಪ್ರಯಾಣಿಸುವ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲದೆ ಭಾರತದ ಪ್ರಮುಖ ನಗರಗಳಾದ ಕೊಲ್ಕತ್ತಾ, ಗೋವಾ, ಪೂಣೆಯಿಂದ ಗ್ರಾಹಕರು ವಿದೇಶಕ್ಕೆ ಹೋಗಲು ಲೂಫ್ತಾನ್ಸಾದ ಫೈಟ್ ಗಳ ಸೇವೆ ಪಡೆದುಕೊಳ್ಳಬಹುದು.
“ಗ್ರಾಹಕರಿಗೆ ಅತ್ಯುತ್ತಮ ವಿದೇಶಿ ಪ್ರಯಾಣದ ಅನುಭವವನ್ನು ನೀಡುವ ದಿಸೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಹಕರು ನಮ್ಮ ಆದ್ಯತೆಯ ಪೈಲೆಜ್ ಪ್ರೋಗ್ರಾಮ್ ಅನ್ನು ‘ಕೋಡ್ಶೇರ್’ ರೂಟ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ಒಪ್ಪಂದದ ಪರಿಣಾಮ ಭಾರತದಲ್ಲಿ ಲೂಫ್ತಾನ್ಸಾ ಪ್ರಸಿದ್ದ ಯುರೋಪಿಯನ್ ಏರ್ಲೈನ್ ಎನ್ನುವುದನ್ನು ಗಟ್ಟಿಗೊಳಿಸುತ್ತದೆ” ಎಂದು ಸೌತ್ ಏಷ್ಯಾದ ಲೂಫ್ತಾನ್ಸಾ ಗ್ರೂಪ್ ಏರ್ಲೈನ್ಸ್ ನ ಸೀನಿಯರ್ ಡೈರೆಕ್ಟರ್ ಸೇಲ್ಸ್ ಜಾರ್ಜ್ ಇಟ್ಟಿಯಿಲ್ ಹೇಳಿದರು.
“ಪ್ರಯಾಣಿಕರಿಗೆ ವಿಸ್ಟಾರಾ - ಭಾರತದ ಪಂಚತಾರಾ ವಿಮಾನಯಾನವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ. ಲೂಫ್ತಾನ್ಸಾದೊಂದಿಗಿನ ನಮ್ಮ ಕೋಡ್ಶೇರ್’ಈ ದಿಕ್ಕಿನ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತದ ಹೊರಗೆ ನಮ್ಮ ಗ್ರಾಹಕರ ಸಂಖ್ಯೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ನಾವು ಸಾಮಾನ್ಯವಾಗಿ ಅನೇಕ ವಿಷಯಗಳನ್ನು ಹಂಚಿಕೊಳ್ಳುವ ವಿಮಾನಯಾನ ಸಂಸ್ಥೆಯಾದ ಲೂಫ್ತಾನ್ಸಾದೊಂದಿಗಿನ ನಮ್ಮ ಸಹಭಾಗಿತ್ವವನ್ನು ಬಲಪಡಿಸಲು ನಾವು ಸಂತೋಷಪಡುತ್ತೇವೆ” ಎಂದು ವಿಸ್ಟಾರಾದ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿನೋದ್ ಕಣ್ಣನ್ ತಿಳಿಸಿದ್ದಾರೆ.
ಯುಎನ್ಐ ಎಎಚ್ 1030
More News
ಸೆನ್ಸೆಕ್ಸ್ 141 51 ಅಂಕ ಏರಿಕೆ

ಸೆನ್ಸೆಕ್ಸ್ 141 51 ಅಂಕ ಏರಿಕೆ

10 Aug 2020 | 6:22 PM

ಮುಂಬೈ ಆ 10(ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 141.51 ಅಂಕ ಏರಿಕೆ ಕಂಡು 38,182.08ಕ್ಕೆ ತಲುಪಿದೆ.

 Sharesee more..
ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

09 Aug 2020 | 6:19 PM

ನವದೆಹಲಿ, ಆ 9 (ಯುಎನ್‌ಐ) ರೈಲ್ವೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ)ನೊಂದಿಗೆ ಸಂಯೋಜಿಲು ಎರಡೂ ಇಲಾಖೆಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ತಿಳಿಸಿದ್ದಾರೆ.

 Sharesee more..