Thursday, Apr 9 2020 | Time 22:33 Hrs(IST)
 • ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ತಂದೆ
 • ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಭಾರತದ ತಕ್ಕ ಪ್ರತ್ಯುತ್ತರ
 • ತಮಿಳುನಾಡಿನಲ್ಲಿ ಕೊರೊನವೈರಸ್‍ನ ಹೊಸ 96 ಪ್ರಕರಣಗಳು ದೃಢ, ಒಟ್ಟು ಸೋಂಕಿತರ ಸಂಖ್ಯೆ 834ಕ್ಕೆ ಏರಿಕೆ
 • ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 50 ವಿದೇಶಿ ಸದಸ್ಯರ ಪತ್ತೆ; ಸರ್ಕಾರ
 • ಮೃಗಾಲಯದಲ್ಲಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಅಗತ್ಯ ಕ್ರಮ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ
 • ಕೋವಿಡ್; ದೇಶದಲ್ಲಿ ಒಂದೇ ದಿನದಲ್ಲಿ 663 ಹೊಸ ಪ್ರಕರಣ, 20 ಸಾವು; ಒಟ್ಟು 5865 ಸೋಂಕಿತರು
 • ಕೇವಲ 8 ದಿನಗಳಲ್ಲಿ 97 ಕೊರೋನಾ ಸೋಂಕಿನ ಪ್ರಕರಣ ಪತ್ತೆ: ಸುರೇಶ್ ಕುಮಾರ್
 • ಕೊವಿದ್ -19: ರಾಜ್ಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
 • ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದವರಿಗೂ ಪಡಿತರ ವಿತರಣೆ : ಸಂಪುಟದ ಮಹತ್ವದ ನಿರ್ಣಯ
 • ಕೊರೋನಾಗೆ ಯಾವುದೇ ಜಾತಿ,ಧರ್ಮ, ಮತ, ಪಂಥ ಇಲ್ಲ: ನಳೀನ್ ಕುಮಾರ್ ಕಟೀಲ್
 • ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಜೊತೆ ಚರ್ಚಿಸಿ ಮುಂದಿನ ತೀರ್ಮಾನಕೈಗೊಳ್ಳಲು ಸಚಿವ ಸಂಪುಟ ನಿರ್ಧಾರ
 • ಚಿನ್ನದ ಬೇಡಿಕೆ ಶೇ 30ರಷ್ಟು ಇಳಿಕೆ; ಐಸಿಸಿ
 • ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಜನವಾದಿ ಮಹಿಳಾ ಸಂಘಟನೆ
 • ಮುಖ್ಯಮಂತ್ರಿ ಗದ್ದುಗೆಗೆ ಅಪಾಯ ಎಂ ಎಲ್ ಸಿ ಪದವಿ ನೀಡಿ !
 • ಕೈಗಾರಿಕಾ ವಲಯದ ಚೇತರಿಕೆಗೆ ಸರಕಾರದಿಂದ ಅಗತ್ಯ ಕ್ರಮ: ಸಚಿವ ಜಗದೀಶ್‌ ಶೆಟ್ಟರ್
International Share

ಲೆಬನಾನ್: ಆರ್ಥಿಕ ಸುಧಾರಣೆಗಳಿಗೆ ಪ್ರಧಾನಿ ಒಪ್ಪಿಗೆ

ಬೈರುತ್, ಅ 21 (ಯುಎನ್‌ಐ) ಸರ್ಕಾರಿ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ಲೆಬನಾನ್‌ನಲ್ಲಿ ಅಲ್ಲಿನ ಸಮ್ಮಿಶ್ರ ಸರ್ಕಾರ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಸರ್ಕಾರ ವಿರೋಧಿ ಪ್ರತಿಭಟನೆಯ ನಾಲ್ಕನೇ ದಿನವಾದ ಭಾನುವಾರ ಲಕ್ಷಾಂತರ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟಿಸಿದರು. ವಾಟ್ಸಪ್ ಮತ್ತು ಇತರ ಸಂದೇಶ(ಮೆಸೇಜ್‌) ಸೇವೆಗಳಿಗೆ ತೆರಿಗೆ ವಿಧಿಸುವ ಕ್ರಮ ಪ್ರತಿಭಟನೆಯನ್ನು ಪ್ರಚೋದಿಸಲ್ಪಟ್ಟಿದೆ.
ಸರ್ಕಾರ ಶೀಘ್ರವೇ ತೆರಿಗೆ ವಿಧಿಸುವ ಕ್ರಮವನ್ನು ಕೈಬಿಟ್ಟಿದ್ದರೂ, ಸುಧಾರಣೆಯ ವ್ಯಾಪಕ ಬೇಡಿಕೆಗಳಾಗಿ ಪ್ರತಿಭಟನೆಗಳು ಮಾರ್ಪಟ್ಟಿವೆ.
ಲೆಬನಾನ್‌ನ ಆರ್ಥಿಕತೆಯು ಕಡಿಮೆ ಬೆಳವಣಿಗೆ ಮತ್ತು ಹೆಚ್ಚಿನ ಸಾಲದೊಂದಿಗೆ ಹೆಣಗಾಡುತ್ತಿದೆ. ಮೂಲಸೌಕರ್ಯ ಹದಗೆಡುತ್ತಿರುವುದರಿಂದ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಸರ್ಕಾರ ಕಠಿಣ ಕ್ರಮಗಳು ಆಕ್ರೋಶವನ್ನು ಹುಟ್ಟಿಹಾಕಿವೆ ಎಂದು ಬಿಬಿಸಿ ನ್ಯೂಸ್ ವರದಿ ತಿಳಿಸಿದೆ.
ಲೆಬನಾನ್‌ನ ಪ್ರಧಾನಿ ಸಾದ್ ಹರಿರಿ ಶುಕ್ರವಾರ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಆರ್ಥಿಕ ಸುಧಾರಣೆಗಳನ್ನು ಬೆಂಬಲಿಸಲು 72 ಗಂಟೆಗಳ ಕಾಲಾವಕಾಶ ನೀಡಿದರು. ಈ ಕುರಿತು ಭಾನುವಾರ ಒಪ್ಪಂದಕ್ಕೆ ಬರಲಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಈ ಒಪ್ಪಂದವು ಪ್ರಮುಖ ಉಪಯುಕ್ತತೆಗಳನ್ನು ಖಾಸಗೀಕರಣಗೊಳಿಸುವ ಯೋಜನೆಗಳನ್ನು ಒಳಗೊಂಡಿರುತ್ತದೆ. ರಾಜಕಾರಣಿಗಳ ವೇತನವನ್ನು ಕಡಿಮೆ ಮಾಡಲಿದೆ. ಲೆಬನಾನ್‌ನ ಬಜೆಟ್ ಕೊರತೆಯನ್ನು ಪರಿಹರಿಸುವ ಕ್ರಮಗಳನ್ನು ಒಳಗೊಂಡಿದೆ.
ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಸುಧಾರಣಾ ಪ್ಯಾಕೇಜ್ ಅನುಮೋದನೆ ಪಡೆಯುವ ನಿರೀಕ್ಷೆಯಿದೆ.
ದೇಶದ ಪ್ರಮುಖ ಧಾರ್ಮಿಕ ಗುಂಪುಗಳ ನಡುವೆ ಅಧಿಕಾರವನ್ನು ಸಮತೋಲನಗೊಳಿಸಲು ರೂಪಿಸಲಾಗಿರುವ ರಾಜಕೀಯ ವ್ಯವಸ್ಥೆಯನ್ನು ಲೆಬನಾನ್ ಬಹಳ ಹಿಂದಿನಿಂದಲೂ ಹೊಂದಿದೆ.
ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 1204
More News
ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

09 Apr 2020 | 3:28 PM

ಜಿನಿವಾ, ಏ ೯(ಯುಎನ್‌ಐ) ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮೂಹಿಕ ಪ್ರಯತ್ನ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೇಸಸ್ ಕರೆ ನೀಡಿದ್ದಾರೆ.

 Sharesee more..

ಮಾಲ್ಟಾದಲ್ಲಿ ಕೋವಿಡ್ 19 ಕ್ಕೆ ಮೊದಲ ಬಲಿ

09 Apr 2020 | 10:05 AM

 Sharesee more..