Thursday, Oct 22 2020 | Time 21:02 Hrs(IST)
 • ಶ್ರೀನಗರದಲ್ಲಿ ‘ಕಾಶ್ಮೀರ್ ಟೈಮ್ಸ್’ ಕಚೇರಿಗಳಿಗೆ ಮೊಹರು: ಎಡಿಟರ್ಸ್‍ ಗಿಲ್ಡ್ ಖಂಡನೆ
 • ಭಾರತದ ಈ ಕ್ರಮಗಳು ಚೀನಾ ದೇಶವನ್ನು ನಡುಗುವಂತೆ ಮಾಡಿವೆ: ಜೆ ಪಿ ನಡ್ಡಾ
 • ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ: ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
Karnataka Share

ವರ್ಚುವಲ್ ಮೂಲಕ ದಸರಾ ವೀಕ್ಷಿಸಿ; ಮುಖ್ಯಮಂತ್ರಿ ಯಡಿಯೂರಪ್ಪ

ವರ್ಚುವಲ್ ಮೂಲಕ ದಸರಾ ವೀಕ್ಷಿಸಿ; ಮುಖ್ಯಮಂತ್ರಿ ಯಡಿಯೂರಪ್ಪ
ವರ್ಚುವಲ್ ಮೂಲಕ ದಸರಾ ವೀಕ್ಷಿಸಿ; ಮುಖ್ಯಮಂತ್ರಿ ಯಡಿಯೂರಪ್ಪ

ಮೈಸೂರು, ಅ.17 (ಯುಎನ್ಐ) ನಾಡಹಬ್ಬ ದಸರಾ ಉತ್ಸವ ಸಂಬಂಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಉದ್ಘಾಟಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅದ್ದೂರಿಯಾಗಿ ಆಚರಿಸಬೇಕಿದ್ದ ಮೈಸೂರು ದಸರಾವನ್ನು ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಸಹ ಮುಖ್ಯವಾಗಿದ್ದು, ಜನರು ವರ್ಚುವಲ್ ಮೂಲಕ ದಸರಾ ಕಾರ್ಯಕ್ರಮವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬೇಕು. ಜೊತೆಗೆ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಮೈಸೂರು ದಸರಾವನ್ನು ಸಾಂಸ್ಕೃತಿಕವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತಿದೆ. ಜೊತೆಗೆ ವರ್ಚುವಲ್ ವ್ಯವಸ್ಥೆ ಮಾಡಿದ್ದು, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಾಮುಂಡಿಬೆಟ್ಟ ಹಾಗೂ ಅರಮನೆ ವೇದಿಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊರೋನಾ ಆತ್ಕದ ಹಿನ್ನೆಲೆಯಲ್ಲಿ ಜನತೆಯ ಆರೋಗ್ಯವೂ ಮುಖ್ಯವಾಗಿದ್ದು, ಜನತೆ ಮನೆಯಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಬೇಕಾಗಿ ಕೋರುತ್ತೇನೆ ಎಂದು ತಿಳಿಸಿದರು.

ತಾಯಿ ಚಾಮುಂಡೇಶ್ವರಿಯು ಆರೋಗ್ಯವಂತ ಸಮಾಜದ ಮರುನಿರ್ಮಾಣಕ್ಕೆ ವಿಶೇಷ ಕೃಪೆ ತೋರಲೆಂದು ನಾಡಿನ ಜನತೆಯಲ್ಲಿರುವ ಸುಖ ಶಾಂತಿ ಆರೋಗ್ಯವು ಎಂದಿನಂತೆ ನಾಡಿನಲ್ಲಿ ನೆಲೆಸಲು ಅನುಗ್ರಹ ತೋರಲೆಂದು ಹಾರೈಸುತ್ತಾ ಎಲ್ಲರಿಗೂ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳು ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ; ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಸಂಗೀತ ಲೋಕದ ಸಾಧಕರಾದ ಪಂಡಿತ್ ಶ್ರೀ ವಿನಾಯಕ ತೊರವಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ್ ವಿನಾಯಕ ತೊರವಿ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿವಿಗೆ ಕರ್ನಾಟಕ ಶ್ರಮಿಸುವಷ್ಟು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು, ಅದೂ ಧಾರವಾಡದಲ್ಲಿ ಹುಟ್ಟಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ. , ಪ್ರಶಸ್ತಿ ಪ್ರದಾನದಲ್ಲಿ ನನಗೆ ಬಂದ 5 ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದು ಪ್ರತಿವರ್ಷದ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಇದಕ್ಕಾಗಿ ನಾನು 1 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತಿದ್ದೇನೆ ಎಂದು ಪಂಡಿತ್ ಶ್ರೀ ವಿನಾಯಕ ತೊರವೀರ್ ತಿಳಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರ್ ತಸ್ನೀಂ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಯುಎನ್ಐ ಎಎಚ್ 2012