Sunday, Dec 6 2020 | Time 00:29 Hrs(IST)
business economy Share

ವಿಜಯಾಬ್ಯಾಂಕ್‍ ತಂತ್ರಜ್ಞಾನ ಸಂಯೋಜನೆ ಪೂರ್ಣಗೊಳಿಸಿದ ಬ್ಯಾಂಕ್ ಆಫ್ ಬರೋಡ, ಅಸೆಂಚರ್

ಮುಂಬೈ, ಅ 19 (ಯುಎನ್ಐ)- ಬ್ಯಾಂಕ್‍ ಆಫ್‍ ಬರೋಡದೊಂದಿಗೆ ಹಿಂದಿನ ವಿಜಯಾಬ್ಯಾಂಕ್‍ ಶಾಖೆಗಳ ತಂತ್ರಜ್ಞಾನ ಸಂಯೋಜನೆಯನ್ನು ಅಸೆಂಚರ್ ಮತ್ತು ಬ್ಯಾಂಕ್‍ ಆಫ್‍ ಬರೋಡ ಪೂರ್ಣಗೊಳಿಸಿವೆ. ಬ್ಯಾಂಕ್‍ ಆಫ್‍ ಬರೋಡಾದೊಂದಿಗೆ ವಿಜಯಾ ಬ್ಯಾಂಕ್‍ ವಿಲೀನಗೊಂಡ ನಂತರ ತಂತ್ರಜ್ಞಾನ ವಿಷಯದಲ್ಲಿ ಇದು ಪ್ರಮುಖ ಭಾಗವಾಗಿತ್ತು.
ಬ್ಯಾಂಕ್ ಆಫ್‍ ಬರೋಡದೊಂದಿಗೆ ವಿಲೀನಗೊಂಡ ಮತ್ತೊಂದು ಮತ್ತೊಂದು ಬ್ಯಾಂಕ್‍ ಆದ ದೇನಾ ಬ್ಯಾಂಕ್‍ ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳಿಗೂ ಅಸೆಂಚರ್ ನೆರವಾಗುತ್ತಿದೆ.
2019 ರಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳ್ಳುವುದರೊಂದಿಗೆ ದೇಶದ ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ರೂಪುಗೊಂಡಿತ್ತು. ವಿಲೀನ ನಂತರ, ಸಂಯೋಜಿತ ತಂತ್ರಜ್ಞಾನ ವ್ಯವಸ್ಥೆಯಿಂದ ದೇಶಾದ್ಯಂತ 9,000 ಶಾಖೆಗಳು ಮತ್ತು 12,000 ಕ್ಕೂ ಹೆಚ್ಚು ಎಟಿಎಂಗಳ ವ್ಯವಹಾರ ಕಾರ್ಯಾಚರಣೆ ಜಾಲವನ್ನು ಸುಗಮವಾಗಲಿದೆ. ಯುಎನ್ಐ ಎಸ್ಎಲ್ಎಸ್ 1236
More News
ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

ಸೆನ್ಸೆಕ್ಸ್: ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079 55ರಲ್ಲಿ ದಿನದ ವಹಿವಾಟು ಅಂತ್ಯ

04 Dec 2020 | 5:28 PM

ಮುಂಬೈ, ಡಿ 4 (ಯುಎನ್ಐ) ರಿಸರ್ವ್ ಬ್ಯಾಂಕ್ ತನ್ನ ನೀತಿಗಳಲ್ಲಿ ಯತಾಸ್ಥಿತಿ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ 446.90 ಅಂಕ ಏರಿಕೆ ಕಂಎಉ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 45,079.55ರಲ್ಲಿ ವಹಿವಾಟು ಮುಗಿಸಿದೆ.

 Sharesee more..