Friday, May 29 2020 | Time 10:20 Hrs(IST)
  • ಡ್ರಗ್ಸ್ ಮಾರಾಟ ದಂಧೆ: ನೈಜೀರಿಯಾ ಪ್ರಜೆಯ ಬಂಧನವನ್ನು ಎತ್ತಿಹಿಡಿದ ಹೈಕೋರ್ಟ್‌
  • ವಂದೇ ಭಾರತ್ ಮಿಷನ್: 45 ಸಾವಿರ ಭಾರತೀಯರು ತವರಿಗೆ
  • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
  • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
  • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
  • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
Sports Share

ವಿಜಯ ಹಜಾರೆ ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ; ಚತ್ತೀಸ್ ಗಢ ಹಾಗೂ ತಮಿಳು ನಾಡು ಸೆಮೀಸ್ ಗೆ

ಬೆಂಗಳೂರು, ಅ. 21(ಯುಎನ್ಐ)- ವಿಜಯ ಹಜಾರೆ ಏಕದಿನ ಕ್ರಿಕೆಟ್ ಸರಣಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಅತ್ಯಧಿಕ ಪಂದ್ಯಗಳನ್ನು ಗೆದ್ದ ತಂಡಗಳು ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟಿವೆ. ಚತ್ತೀಸ್ ಗಢ ಹಾಗೂ ತಮಿಳು ನಾಡು ತಂಡಗಳು ಮುನ್ನಡೆ ಸಾಧಿಸಿವೆ.
ವಿಜಯ ಹಜಾರೆ ಸೆಮಿಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಚತ್ತೀಸ್ ಗಢ ತಂಡಗಳು ಅ.23 ರಂದು ಹೋರಾಟ ನಡೆಸಿದರೆ, ಇದೇ ದಿನ ಎರಡನೇ ಸೇಮಿ ಪಂದ್ಯದಲ್ಲಿ ಗುಜರಾತ್-ತಮಿಳು ನಾಡು ತಂಡಗಳು ಸೆಣಸಾಡಲಿವೆ.
ಮಳೆ ಕಾಟದಿಂದಾಗಿ ನಿಗದಿತ 50 ಓವರ್ ಗಳನ್ನು ಕಡಿಮೆ ಮಾಡಿ ಪಂದ್ಯ ಆರಂಭವಾಯಿತು. ತಮಿಳು ನಾಡು, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 39 ಓವರ್ ಗಳಲ್ಲಿ 6 ವಿಕೆಟ್ ಗೆ 174 ರನ್ ಸೇರಿಸಿತು. ಬಾಬಾ ಅಪರಜಿತ್ 56 ರನ್ ಸೇರಿಸಿದರು. ಪಂಜಾಬ್ ತಂಡಕ್ಕೆ ವಿಜೆಡಿ ನಿಯಮದ ಪ್ರಕಾರ 195 ರನ್ ಗುರಿಯನ್ನು ನೀಡಲಾಯಿತು. ಪಂಜಾಬ್ 12.2 ಓವರ್ ಗಳಲ್ಲಿ 2 ವಿಕೆಟ್ ಗೆ 52 ರನ್ ಸೇರಿಸಿದ್ದಾಗ ಮಳೆ ಕಾಟ ನೀಡಿ ಪಂದ್ಯ ಸ್ಥಗಿತಗೊಂಡಿತು.
ನಾಲ್ಕನೇ ಕ್ವಾರ್ಟರ್ ಫೈನಲ್ಸ್ ನಲ್ಲಿ ಚತ್ತೀಸ್ ಗಢ 45.4 ಓವರ್ ಗಳಲ್ಲಿ ಆರು ವಿಕೆಟ್ ಗೆ 190 ರನ್ ಸೇರಿಸಿತು. ನಾಯಕ ಸಿಂಹ ಹರಿಪ್ರಿಯಾ ಸಿಂಗ್ 83 ರನ್ ಸಿಡಿಸಿದರು. ಮುಂಬೈ ತಂಡಕ್ಕೆ 40 ಓವರ್ ಗಳಲ್ಲಿ 192 ರನ್ ಗಳ ಗುರಿಯನ್ನು ನೀಡಲಾಯಿತು. 11.3 ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳದೆ 95 ರನ್ ಸೇರಿಸಿತು. ಆಗ ಮಳೆ ಅಡ್ಡಿ ಪಡಿಸಿತು.
ವಿಜಯ ಹಜಾರೆ ಏಕದಿನ ಸರಣಿಯಲ್ಲಿ ತಮಿಳುನಾಡು 9ರಲ್ಲಿ 9 ಜಯ ಹಾಗೂ ಚತ್ತೀಸ್ ಗಢ 8 ಪಂದ್ಯಗಳಲ್ಲಿ 5 ಜಯ ಸಾಧಿಸಿತ್ತು.
ಯುಎನ್ಐ ವಿಎನ್ಎಲ್ 2019