Saturday, Oct 24 2020 | Time 20:33 Hrs(IST)
 • ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪುತ್ರನಿಗೆ ಇಡಿ ಸಮನ್ಸ್
 • ಜಿಯೋಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಆಪ್: ಬಹುಮಾನ ಗೆಲ್ಲಲು ಅವಕಾಶ
 • ರಾಜಕಾಲುವೆ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಆರ್ ಅಶೋಕ
 • ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ ಚಂದ್ರಗುಪ್ತ
 • ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಬೆಳ್ಳುಳ್ಳಿಯ ವ್ಯಾಪಾರಿಯ ದರೋಡೆ
 • ಚರ್ಚ್ ಕುಸಿದು 22 ಮಂದಿ ಸಾವು
 • ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
Karnataka Share

ವೈದ್ಯರು ಕೊರೊನಾ ಸಂದರ್ಭ ಬಳಸಿಕೊಂಡು ಮುಷ್ಕರ ಹೂಡುವುದು ಮಾನವೀಯತೆಯಲ್ಲ- ಡಾ.ಕೆ. ಸುಧಾಕರ್

ಬೆಂಗಳೂರು, ಸೆ.18 (ಯುಎನ್ಐ0 ಕೊರೋನದಂಥ ಸಂದರ್ಭವನ್ನು ಬಳಸಿಕೊಂಡು ವೈದ್ಯರು ಮುಷ್ಕರ ಹೂಡುವುದು ಮಾನವೀಯತೆಯಲ್ಲ. ಅವರು ಮುಷ್ಕರ ಹಿಪಡೆಯುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
ಕಾಡುಗೊಂಡನಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೇತನ ಪರಿಷ್ಕರಣೆ ವೈದ್ಯರ ಪ್ರಮುಖ ಬೇಡಿಕೆ. ಈ ಸಂಬಂಧ ಈಗಾಗಲೇ ನಾಲ್ಕೈದು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇವೆ. ಸಭೆಯ ನಿರ್ಣಯಕ್ಕೆ ಬಹುಪಾಲು ಒಪ್ಪಿದ್ದಾರೆ. ಆದರೂ ಮುಷ್ಕರ ನಡೆಸುತ್ತೇವೆ ಎನ್ನುವ ಹಠ ಸರಿಯಲ್ಲ. ಕೊರೋನ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ವದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಡಿಕೆ ಮುಂದಿಟ್ಟು ಮುಷ್ಕರ ಹೂಡುವುದು ಮಾನವೀಯತೆ ಅಲ್ಲ. ಇದು ಅವರ ವೃತ್ತಿಗೆ ಗೌರವ ತರುವುದಿಲ್ಲ. ವೈದ್ಯ ಸಂಘದ ಪದಾಧಿಕಾರಿಗಳು ಪ್ರಜ್ಞಾವಂತರು. ಅವರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕೊರೋನ ನಿಯಂತ್ರಣದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನಾ ಪರೀಕ್ಷಾ ಪ್ರಮಾಣ ದಿನಕ್ಕೆ 75 ಸಾವಿರ ಇದೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚೆನಿಸುತ್ತದೆ. ಇಷ್ಟು ದಿನ ಕೇರಳದಲ್ಲಿ ಟೆಸ್ಟ್ ಪ್ರಮಾಣ ಕಡಿಮೆ ಇದ್ದರಿಂದ ಅಲ್ಲಿ ಸೋಂಕು ಪ್ರಮಾಣವೂ ಕಡಿಮೆ ಇತ್ತು, ಈಗ ಟೆಸ್ಟ್ ಪ್ರಮಾಣ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಕರ್ನಾಟಕದಲ್ಲಿ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಕೋರೋನ ನಿಯಂತ್ರಣದಲ್ಲಿದೆ ಎಂದರು.
ಐಸಿಯು ಬೆಡ್‌ಗಳ ಹೆಚ್ಚಳಕ್ಕೆ ಕ್ರಮ: ನಮ್ಮಲ್ಲಿ ಸಾಮಾನ್ಯ ಬೆಡ್‌ಗಳು ಹೆಚ್ಚಿವೆ. ಆದರೆ ಅಗತ್ಯವಿರುವುದು ವೆಂಟಿಲೇಟರ್ ಹಾಗೂ ಐಸಿಯೂ ಬೆಡ್‌ಗಳು. ಪ್ರಕರಣದ ತೀವ್ರತೆ ನೋಡಿಕೊಂಡು ಅವುಗಳ ಹೆಚ್ಚಳ ಮಾಡಲಿದ್ದೇವೆ ಎಂದರು.
ನೆಲಮಂಗಲ ಬಳಿಯ ಅತಿ ದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ ಮುಚ್ಚಿದ್ದರಿಂದ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ರೋಗ ಲಕ್ಷಣವಿಲ್ಲದೇ ಇರುವವರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಕೋವಿಡ್ ಕೇರ್‌ ಸೆಂಟರ್‌ ಅನ್ನು ಪುನಾರಾಂಭಿಸುತ್ತೇವೆ ಎಂದು ಹೇಳಿದರು.
ಯುಎನ್ಐ ಎಸ್ಎಂಆರ್ ಎಎಚ್ 1333