Saturday, Oct 24 2020 | Time 19:54 Hrs(IST)
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
 • ಓಲಾ, ಉಬರ್, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ
 • ಸೇನಾ ಕ್ಯಾಂಟೀನ್ ಗಳಲ್ಲಿ ಇನ್ನೂ ವಿದೇಶಿ ಮದ್ಯ ಲಭ್ಯವಿರುವುದಿಲ್ಲ
 • ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮುಖ್ಯಮಂತ್ರಿಯಾಗಲು ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು- ಡಿ ಕೆ ಶಿವಕುಮಾರ್
Karnataka Share

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ: 51 ಕೆಜಿ ಗಾಂಜಾ ವಶ

ಬೆಂಗಳೂರು, ಸೆ‌.18 (ಯುಎನ್ಐ) ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಇಬ್ಬರನ್ನು ಪೊಲೀಸರು ಬಂಧಿಸಿ, 51 ಕೆ.ಜಿ. 200 ಗ್ರಾಂ ತೂಕದ ಮಾದಕ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಮೂಲದ ಮುಹಮ್ಮದ್ ಖೈರುಲ್ ಇಸ್ಲಾಂ ( 20), ಮುಹಮ್ಮದ್ ಫಾರೂಖ್ ಅಹಮದ್ (31) ಬಂಧಿತ ಆರೋಪಿಗಳು.
ಬಂಧಿತರಿಂದ ಸುಮಾರು 15,00,000 ರೂ ಬೆಲೆ ಬಾಳುವ 51 ಕೆ.ಜಿ 200 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸುಮಾರು 5 ಲಕ್ಷ ರೂ ಬೆಲೆ ಬಾಳುವ ಸ್ಕೋಡಾ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.11 ರಂದು ತಿಲಕನಗರ ಪೊಲೀಸ್ ಠಾಣೆಯ , ಈಸ್ಟ್ ಎಂಡ್ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆ ಹೋಗುವ ಸ್ಥಳದಲ್ಲಿರುವ ಬಿ.ಡಿ.ಎ ಖಾಲಿ ನಿವೇಶನದ ಬಳಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮೂಲತಃ ಅಸ್ಸಾಂ ರಾಜ್ಯದವರಾಗಿದ್ದು, ಬೆಂಗಳೂರಿಗೆ ಕೆಲಸವನ್ನು ಹುಡುಕಿಕೊಂಡು ಬಂದು ಸೆಕ್ಯೂರಿಟಿ ಗಾರ್ಡ್ ಮತ್ತು ಫುಡ್ ಸಪ್ಲೈ ಕೆಲಸವನ್ನು ನಿರ್ವಹಿಸುವುದರೊಂದಿಗೆ ಸುಲಭವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದರು. ಒಡಿಸ್ಸಾದಿಂದ ಕಡಿಮೆ ಬೆಲೆಯಲ್ಲಿ ಗಾಂಜಾ ತರಿಸಿಕೊಂಡು ಬಂಧಿತ ಮುಹಮ್ಮದ್ ಖೈರುಲ್ ಕಾರಿನಲ್ಲಿ ಗಾಂಜಾವನ್ನುವಿಟ್ಟುಕೊಂಡು ಆರೋಪಿ ಕೋಲಾರದಿಂದ ಬೆಂಗಳೂರಿಗೆ ವಾರಕ್ಕೆರಡು ಬಾರಿ ಬಂದು ತನ್ನ ಪರಿಚಯಸ್ಥ ಗ್ರಾಹಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಾವು ಬರುವ ಸಮಯ ಮತ್ತು ಸ್ಥಳವನ್ನು ತಿಳಿಸಿ ಸ್ಥಳಕ್ಕೆ ಕರೆಯಿಸಿಕೊಂಡು ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಿಲಕನಗರ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್.ಜಿ.ಎಸ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಯುಎನ್ಐ ಪಿಕೆ ಎಎಚ್ 1340
More News
ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

24 Oct 2020 | 5:33 PM

ಬೆಂಗಳೂರು,ಅ 24(ಯುಎನ್ಐ) ನಮಗೆ ಜಾತಿಯನ್ನು ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ. ತನ್ನನ್ನು ಬೆಳೆಸಿದ ಪಕ್ಷಕ್ಕೆ ಮೋಸ ಮಾಡಿದ್ದು,ಹೆತ್ತ ತಾಯಿಗೆ ದ್ರೋಹ ಬಗೆದಿದ್ದಾರೆ.ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

 Sharesee more..