Sunday, Nov 29 2020 | Time 19:30 Hrs(IST)
 • ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ: ಕನಿಷ್ಠ 31 ಮಂದಿ ಸಾವು
 • ಅಂಕ ಹಂಚಿಕೊಂಡ ಒಡಿಶಾ ಮತ್ತು ಜೆಮ್ಷೆಡ್ಪುರ
 • ಬಿಜೆಪಿಗೆ ಹೈದರಾಬಾದ್ ಮೇಯರ್ ಸ್ಥಾನ: ಅಮಿತ್‍ ಶಾ ವಿಶ್ವಾಸ
 • ಬಿಜೆಪಿಯಿಂದ ಕೃಷಿಕರ ಬದುಕು ಹಸನಾಗಿದೆ : ಡಿಸಿಎಂ ಅಶ್ವತ್ಥ ನಾರಾಯಣ್
 • ಆಜಾದ್ ಭವನ ನೂತನ ಕಟ್ಟಡ 1 ಕೋಟಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯ - ಎಚ್ ನಾಗೇಶ್
 • ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ; ಗೋವಿಂದ ಕಾರಜೋಳ
 • ಭಾರತದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲಿಲ್ಲ: ವಿರಾಟ್‌ ಕೊಹ್ಲಿ
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
National Share

ವಿವಿಧ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ರಾಮ್‍ವಿಲಾಸ್ ಪಾಸ್ವಾನ್‍ ದಲಿತ ಮುಖವಾಣಿಯಾಗಿದ್ದರು- ಡಾ ಮನಮೋಹನ್ ಸಿಂಗ್

ವಿವಿಧ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ರಾಮ್‍ವಿಲಾಸ್ ಪಾಸ್ವಾನ್‍ ದಲಿತ ಮುಖವಾಣಿಯಾಗಿದ್ದರು- ಡಾ ಮನಮೋಹನ್ ಸಿಂಗ್
ವಿವಿಧ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ರಾಮ್‍ವಿಲಾಸ್ ಪಾಸ್ವಾನ್‍ ದಲಿತ ಮುಖವಾಣಿಯಾಗಿದ್ದರು- ಡಾ ಮನಮೋಹನ್ ಸಿಂಗ್

ನವದೆಹಲಿ, ಅ 9 (ಯುಎನ್‍ಐ)- ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಸಂತಾಪ ಸೂಚಿಸಿದ್ದು, ಪಾಸ್ವಾನ್ ಅವರು ಅನೇಕ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ಪ್ರಮುಖ ದಲಿತ ಮುಖವಾಣಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

74 ವರ್ಷದ ಪಾಸ್ವಾನ್ ಐದು ದಿನಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುರುವಾರ ಸಂಜೆ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಎಲ್‍ಜೆಪಿ ವರಿಷ್ಠ ಚಿರಾಗ್ ಪಾಸ್ವಾನ್ ಅವರಿಗೆ ಕಳುಹಿಸಿರುವ ಸಂತಾಪ ಪತ್ರದಲ್ಲಲಿ ಡಾ. ಸಿಂಗ್,’ನಿಮ್ಮ ಪ್ರೀತಿಯ ತಂದೆಯ ನಿಧನದ ಬಗ್ಗೆ ಕೇಳಿ ತೀವ್ರ ದುಃಖವಾಗಿದೆ. ರಾಮ್ ವಿಲಾಸ್ ಪಾಸ್ವಾನ್ ಜಿ ಅವರು ಅನೇಕ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ಬಹಳ ಮುಖ್ಯವಾದ ದಲಿತ ಮುಖ ಆಗಿದ್ದರು. 2004 ರಲ್ಲಿ ನಾನು ಮುನ್ನಡೆಸಿದ ಯುಪಿಎ ಸರ್ಕಾರದಲ್ಲಿ ಪಾಸ್ವಾನ್ ಜಿ ಅವರಯ ಸದಸ್ಯರಾಗಿ ನನ್ನೊಂದಿಗಿನ ಒಡನಾಟದ ಬಗ್ಗೆ ತುಂಬಾ ಆತ್ಮೀಯ ನೆನಪುಗಳಿವೆ.’ ಎಂದು ಹೇಳಿದ್ದಾರೆ.

‘ಹಿರಿಯ ಸಮಾಜವಾದಿ ನಾಯಕ, ಪಾಸ್ವಾನ್ ಜಿ ಅವರು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾಗಿ ನನ್ನೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಿದ ಅತ್ಯಂತ ಸಮರ್ಥ ಆಡಳಿತಗಾರರಾಗಿದ್ದರು. ವಿವಿಧ ಸಚಿವಾಲಯಗಳಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು.’ ಎಂದು ಮನಮೋಹನ್ ಸಿಂಗ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ರಾಮ್ ವಿಲಾಸ್ ಪಾಸ್ವಾನ್ ಅವರು ತುಂಬಾ ಜನಪ್ರಿಯತೆಯನ್ನು ಹೊಂದಿರುವ ಸಾಮೂಹ ನಾಯಕರಾಗಿದ್ದರು. ಅವರು ತಮ್ಮ ಕ್ಷೇತ್ರದಿಂದ ದಾಖಲೆಯ ಬಹುಮತದೊಂದಿಗೆ ಸಂಸತ್ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಇದು ನಿದರ್ಶನವಾಗಿದೆ ಎಂದು ಡಾ ಸಿಂಗ್ ಗುಣಗಾನ ಮಾಡಿದ್ದಾರೆ.

uni sls 2105

More News
ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು

ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು

29 Nov 2020 | 6:39 PM

ನವದೆಹಲಿ, ನ.29 (ಯುಎನ್ಐ) ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನೇರ ಪರಿಹಾರಕ್ಕೆ ಒತ್ತಾಯಿಸಿವೆ.

 Sharesee more..
ದೇಶದಲ್ಲಿ 41,810 ಹೊಸ ಕೋವಿಡ್‍-19 ಸೋಂಕು ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93 92 ಲಕ್ಷಕ್ಕೆ ಏರಿಕೆ

ದೇಶದಲ್ಲಿ 41,810 ಹೊಸ ಕೋವಿಡ್‍-19 ಸೋಂಕು ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93 92 ಲಕ್ಷಕ್ಕೆ ಏರಿಕೆ

29 Nov 2020 | 6:28 PM

ನವದೆಹಲಿ, ನ 29 (ಯುಎನ್‌ಐ) ಭಾರತದಲ್ಲಿ ಕೊರೋನಾವೈರಸ್ ನ 41,810 ಹೊಸ ಸೋಂಕು ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 93,92,920 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತನ್ನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

 Sharesee more..
ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ

ನಿವಾರ್ ಚಂಡಮಾರುತ: ಆಂಧ್ರದಲ್ಲಿ ಆರು ಮಂದಿ ಸಾವು, 543 ಕಿ ಮೀ ಉದ್ದದ ರಸ್ತೆ ಹಾನಿ

29 Nov 2020 | 6:20 PM

ತಿರುಪತಿ, ನ 29 (ಯುಎನ್‌ಐ) ಕಳೆದ ವಾರ ತಮಿಳುನಾಡು ಕರಾವಳಿಯನ್ನು ಅಪ್ಪಳಿಸಿದ ನಿವಾರ್ ಚಂಡಮಾರುತ, ಚಿತ್ತೂರು ಜಿಲ್ಲೆಯ 21 ಮಂಡಲಗಳ 245 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ.

 Sharesee more..