Friday, Nov 15 2019 | Time 13:30 Hrs(IST)
 • ದೇಶದ ರಫ್ತು ವಲಯದಲ್ಲಿ ಕರ್ನಾಟಕದಿಂದ ಮೂರನೇ ಒಂದರಷ್ಟು ಕೊಡುಗೆ: ಎಲ್ಲಾ ವಲಯಗಳಲ್ಲೂ ಬೆಂಗಳೂರು ಮಂಚೂಣಿಯಲ್ಲಿ – ಗೌರವ್ ಗುಪ್ತಾ
 • ಇಸ್ಲಾಮಿಕ್ ಸ್ಟೇಟ್ ಯೋಧರ ವಿಚಾರಣೆಗೆ ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಅಮೆರಿಕಾ ವಿರೋಧ
 • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
 • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
 • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
 • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
 • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
 • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
 • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
National Share

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಪ್ರವಾಸಿಗರಿಗೆ ಮುಕ್ತ

ಲಡಾಖ್, ಅ 21 (ಯುಎನ್‌ಐ) ಕಳೆದ ಮೂರು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನಿ ಸೇನೆಗಳು ಹೆಚ್ಚು ಪ್ರಾಮುಖ್ಯತೆ ನೀಡಿ ಅಷ್ಟೇ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿರುವ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನೀರ್ಗಲ್ಲು ಪ್ರದೇಶ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದೆ.

ಲಡಾಖ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರವಾಸಿಗರಿಗಾಗಿ ಆಯಕಟ್ಟಿನ ಮಹತ್ವದ ಸಿಯಾಚಿನ್‌ನ ಬೇಸ್ ಕ್ಯಾಂಪ್ ತೆರೆಯುವುದಾಗಿ ಘೋಷಿಸಿದರು."ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಲಡಾಖ್‌ನಲ್ಲಿ ಉತ್ತಮ ಸಂಪರ್ಕವು ಖಂಡಿತವಾಗಿಯೂ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತರುತ್ತದೆ. ಸಿಯಾಚಿನ್ ಪ್ರದೇಶವು ಈಗ ಪ್ರವಾಸಿಗರಿಗೆ ಮತ್ತು ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ. ಸಿಯಾಚಿನ್‍ ಮೂಲ ಶಿಬಿರದಿಂದ ಕುಮಾರ್ ಪೋಸ್ಟ್ ವರೆಗೆ ಇಡೀ ಪ್ರದೇಶವನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ತೆರೆಯಲಾಗಿದೆ ”ಎಂದು ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಕುಮಾರ್ ಪೋಸ್ಟ್ 18,875 ಅಡಿ ಎತ್ತರದಲ್ಲಿದೆ. ಪ್ರವಾಸಿಗರು ಪಾರ್ಟಾಪುರದ ಮೂಲ ಶಿಬಿರದಿಂದ 11,000 ಅಡಿ ಎತ್ತರದಲ್ಲಿ ಕುಮಾರ್ ಪೋಸ್ಟ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ.ಅಂದರೆ, ಬೇಸ್ ಕ್ಯಾಂಪ್‌ನಿಂದ ಕುಮಾರ್ ಪೋಸ್ಟ್‌ಗೆ ಆಯೋಜಿಸಿರುವ ವಾರ್ಷಿಕ ಸಾಹಸ ಯಾತ್ರೆ ಹೊರತಾಗಿಯೂ ಪ್ರವಾಸಿಗರು ಸಹ ಆಯಕಟ್ಟಿನ ಮಹತ್ವದ ಪ್ರದೇಶದಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1806