Sunday, Apr 18 2021 | Time 08:56 Hrs(IST)
Special Share

ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್
ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

ಹಮೀರ್‌ಪುರ, ಫೆಬ್ರವರಿ 28 (ಯುಎನ್‌ಐ) ಸ್ವಾಮಿ ವಿವೇಕಾನಂದ ಕನಸಿನಂತೆ ಭಾರತ ಮತ್ತೊಮ್ಮೆ ವಿಶ್ವ ಗುರುಗಳಾಗುವತ್ತ ಸಾಗುತ್ತಿದೆ, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಎಚ್‌ಪಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಹೇಳಿದ್ದಾರೆ.

ಸುಜನ್‌ಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ಪರಿಶ್ರಮ ಮತ್ತು ಒಳ್ಳೆಯ ಕಾರ್ಯಗಳಿಂದಾಗಿ., ಭಾರತವು ಎಲ್ಲ ವಿಷಯಗಳಲ್ಲೂ ವಿಶ್ವಶಕ್ತಿಯಾಗುವ ದಿನ ದೂರವಿಲ್ಲ ಎಂದು ಧುಮಾಲ್ ಹೇಳಿದರು.

ಕಾಂಗ್ರೆಸ್ ವಿರುದ್ದ ತೀವ್ರ ದಾಳಿ ನಡೆಸಿದ ಅವರು ಕಾಂಗ್ರೆಸ್ ಸದ್ಯ ಮುಳುಗುವ ಹಡಗು ಮತ್ತು ಇದು 2022 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ರಾಜಕೀಯ ಭೂಪಟದಿಂದ ಅಳಿಸಿಹೋಗಲಿದೆ ಎಂದರು ಕಾಂಗ್ರೆಸ್ ಪಕ್ಷ ಕೇವಲ 40 ಸಂಸದರ ಪಕ್ಷಕ್ಕೆ ಇಳಿದಿದೆ ಎಂದು ಅವರು ಹೇಳಿದರು.

ಭಾರತೀಯ ಜನಸಂಘದ ಸಿದ್ಧಾಂತವು ಇಂದು ಹೆಚ್ಚು ಸೂಕ್ತವಾಗಿದೆ ಮತ್ತು ಅದಕ್ಕಾಗಿ ಅದರ ನಾಯಕರು ಮುಖ್ಯವಾಗಿ ದೀನ್ ದಯಾಲ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಆರಂಭಿಕ ಅವಧಿಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು ಎಂದು ಅವರು ಹೇಳಿದರು.

ಯುಎನ್ಐ ಕೆಎಸ್ಆರ್ 0858

More News
ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

17 Apr 2021 | 9:04 PM

ನವದೆಹಲಿ, ಏ 17( ಯುಎನ್ಐ) ದೇಶದಲ್ಲಿ ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ.

 Sharesee more..
ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

17 Apr 2021 | 8:07 PM

ಹರಿದ್ವಾರ, ಏ 17( ಯುಎನ್ ಐ) ಕುಂಭ ಮೇಳ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂಭ ಮೇಳ ಶನಿವಾರ ಕೊನೆಗೊಂಡಿದೆ ಎಂದು ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಘೋಷಿಸಿದ್ದಾರೆ.

 Sharesee more..

ಕೋವಿಡ್‌ ಎಫೆಕ್ಟ್:‌ ಕರೆನ್ಸಿ ಮುದ್ರಣ ಸ್ಥಗಿತ

16 Apr 2021 | 5:54 PM

 Sharesee more..

ಪವನ್‌ ಕಲ್ಯಾಣ್‌ಗೆ ಕೋವಿಡ್‌ ದೃಢ

16 Apr 2021 | 5:38 PM

 Sharesee more..