Monday, Feb 24 2020 | Time 03:39 Hrs(IST)
National Share

ವಿಶ್ವಾದ್ಯಂತದ ಸೌರಶಕ್ತಿಯ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು, ಕೈಗೆಟುಕುವಂತೆ ಮಾಡಿ-ಉಪರಾಷ್ಟ್ರಪತಿ

ವಿಶ್ವಾದ್ಯಂತದ ಸೌರಶಕ್ತಿಯ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು, ಕೈಗೆಟುಕುವಂತೆ ಮಾಡಿ-ಉಪರಾಷ್ಟ್ರಪತಿ
ವಿಶ್ವಾದ್ಯಂತದ ಸೌರಶಕ್ತಿಯ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು, ಕೈಗೆಟುಕುವಂತೆ ಮಾಡಿ-ಉಪರಾಷ್ಟ್ರಪತಿ

ನವದೆಹಲಿ, ಅಕ್ಟೋಬರ್ 21 (ಯುಎನ್‌ಐ) ಸೌರಶಕ್ತಿಯ ಅಪಾರ ಸಾಮರ್ಥ್ಯ ಬಳಸಿಕೊಂಡು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ನವೀಕರಿಸಬಹುದಾದ ಇಂಧನ ಕ್ಷೇತ್ರದ ನೀತಿ ನಿರೂಪಕರು ಮತ್ತು ತಜ್ಞರಿಗೆ ಕರೆ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.





ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳು ಸೌರ ಸಂಪನ್ಮೂಲಗಳು ಮತ್ತು ಸಂಬಂಧಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು. ಇದರಿಂದಾಗಿ ಪಳೆಯುಳಿಕೆ ಸಂಪನ್ಮೂಲಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.



ಭಾರತೀಯ ಸಾರ್ವಜನಿಕ ಸಂಸ್ಥೆ ಆಯೋಜಿಸಿದ್ದ ಸೌರ ಶಕ್ತಿ ಸಾಮರ್ಥ್ಯ ಬಳಕೆ ವೃದ್ಧಿ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ಬಳಕೆಯತ್ತ ಸಾಗುವುದು ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಷ್ಟೇ ಅಲ್ಲದೆ, ಹವಾಮಾನವನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.



ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯು ಮಾನವ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪರಿಸರವನ್ನು ರಕ್ಷಿಸುವ ಮತ್ತು ಅಭಿವೃದ್ಧಿಯಲ್ಲಿ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ತುರ್ತು ಅವಶ್ಯಕತೆಯಿದೆ. ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ನಿವಾರಿಸಲು ಎಲ್ಲ ರಾಷ್ಟ್ರಗಳು ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಸಾಂಪ್ರದಾಯಿಕ ಇಂಧನ ಮೂಲಗಳಿಂದ ಎದುರಾಗುವ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದ ಸಮಸ್ಯೆಗಳನ್ನು ನಿವಾರಿಸಲು ದೇಶಗಳು ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಅವರು ಹೇಳಿದ್ದಾರೆ.



ಇಂಗಾಲದ ಪ್ರಮಾಣವನ್ನು ಅಪಾರವಾಗಿ ಕಡಿಮೆ ಮಾಡಲು ಪ್ರತಿ ಮನೆ, ಸಂಸ್ಥೆ ಸೇರಿದಂತೆ ಎಲ್ಲ ಕಡೆ ಮೇಲ್ಘಾವಣಿಗಳಲ್ಲಿ ತಮ್ಮದೇ ಆದ ಸೌರ ಫಲಕ ಹೊಂದುವುದನ್ನು ಕಾಣುವ ದಿನ ಬೇಗ ಬರಬೇಕು ಎಂದು ವೆಂಕಯ್ಯನಾಯ್ಡು ಆಶಿಸಿದ್ದಾರೆ.



ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1845

More News

ಟ್ರಂಪ್ ಭೇಟಿಗೆ ಸರ್ವಸನ್ನದ್ಧವಾಗಿರುವ ಭಾರತ

23 Feb 2020 | 8:34 PM

 Sharesee more..
ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫುಟ್‌ಬಾಲ್ ಆಟಗಾರ  ಅಶೋಕ್ ಚಟರ್ಜಿ ನಿಧನಕ್ಕೆ ಎಐಎಫ್ಎಫ್ ಸಂತಾಪ

ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫುಟ್‌ಬಾಲ್ ಆಟಗಾರ ಅಶೋಕ್ ಚಟರ್ಜಿ ನಿಧನಕ್ಕೆ ಎಐಎಫ್ಎಫ್ ಸಂತಾಪ

23 Feb 2020 | 7:54 PM

ಕೋಲ್ಕತಾ, ಫೆ 23 (ಯುಎನ್‌ಐ) ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫುಟ್‌ಬಾಲ್ ಆಟಗಾರ ಅಶೋಕ್ ಚಟರ್ಜಿ ನಿಧನಕ್ಕೆ ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟ(ಎಐಎಫ್ಎಫ್) ಸಂತಾಪ ಸೂಚಿಸಿದೆ.

 Sharesee more..
ಮಹತ್ವದ ತೀರ್ಪುಗಳನ್ನು ನೀಡಿದ ಸುಪ್ರೀಂಕೋರ್ಟ್  ಪ್ರಶಂಸೆಗೆ ಅರ್ಹ; ರಾಷ್ಟ್ರಪತಿ ಕೋವಿಂದ್

ಮಹತ್ವದ ತೀರ್ಪುಗಳನ್ನು ನೀಡಿದ ಸುಪ್ರೀಂಕೋರ್ಟ್ ಪ್ರಶಂಸೆಗೆ ಅರ್ಹ; ರಾಷ್ಟ್ರಪತಿ ಕೋವಿಂದ್

23 Feb 2020 | 7:35 PM

ನವದೆಹಲಿ, ಫೆ 23 (ಯುಎನ್ಐ) ಸಾಮಾನ್ಯ ಜನರಿಗೆ ನ್ಯಾಯವನ್ನು ತಲುಪಿಸುವಂತಹ ಸುಧಾರಣೆಗಳನ್ನು ಅಳವಡಿಸಿಕೊಂಡ ಸುಪ್ರೀಂಕೋರ್ಟ್ ಅಭಿನಂದನೆಗೆ ಅರ್ಹ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

 Sharesee more..
ಸ್ಥಳೀಯ ಭಾಷೆಗಳೊಂದಿಗೆ ಉದ್ಯೋಗಗಳನ್ನು ಸಂಯೋಜಿಸುವಂತೆ ಉಪರಾಷ್ಟ್ರಪತಿ ಕರೆ

ಸ್ಥಳೀಯ ಭಾಷೆಗಳೊಂದಿಗೆ ಉದ್ಯೋಗಗಳನ್ನು ಸಂಯೋಜಿಸುವಂತೆ ಉಪರಾಷ್ಟ್ರಪತಿ ಕರೆ

23 Feb 2020 | 6:57 PM

ನವದೆಹಲಿ, ಫೆ 23(ಯುಎನ್ಐ)- ದೇಶದಲ್ಲಿ ಮಾತೃಭಾಷೆಗಳ ಬಳಕೆಯನ್ನು ಉತ್ತೇಜಿಸಲು ಉದ್ಯೋಗಗಳನ್ನು ಕಡ್ಡಾಯವಾಗಿ ಸ್ಥಳೀಯ ಭಾಷೆಗಳೊಂದಿಗೆ ಒಂದು ಮಟ್ಟಕ್ಕೆ ಸಂಯೋಜಿಸುವಂತೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

 Sharesee more..