Wednesday, Jun 3 2020 | Time 07:41 Hrs(IST)
Entertainment Share

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಕುರಿತು ಶನಿವಾರ ವಿಶಿಷ್ಟ ಸಂವಾದ

ಬೆಂಗಳೂರು, ಸೆ 20 (ಯುಎನ್ಐ) ಭಾರತೀಯ ಪ್ರಾಚೀನ ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆಯ ಪುನರುತ್ಥಾನದ ಮಹದುದ್ದೇಶದಿಂದ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಸಂವಾದ ಕಾರ್ಯಕ್ರಮ ಈ ತಿಂಗಳ 22ರಂದು (ಭಾನುವಾರ) ಗಿರಿನಗರ ರಾಮಾಶ್ರಮ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ.
ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಈ ವಿಶಿಷ್ಟ ಸಂವಾದದಲ್ಲಿ ಉದ್ಯಮ, ಶಿಕ್ಷಣ, ಸಮಾಜಸೇವೆ ಹೀಗೆ ಸಮಾಜದ ವಿವಿಧ ಸ್ತರಗಳ 200ಕ್ಕೂ ಹೆಚ್ಚು ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವವಿದ್ಯಾಪೀಠ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಂಕರಾಚಾರ್ಯರು ಮೂರು ಬಾರಿ ಭೇಟಿ ನೀಡಿದ ಗೋಕರ್ಣ ಸಮೀಪದ ಅಶೋಕೆಯಲ್ಲಿ ಗುರುಕುಲ ಮಾದರಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿವಿವಿ ಪೀಠದ ಪರಿಕಲ್ಪನೆ, ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಶಿಕ್ಷಣ ಪದ್ಧತಿಯ ಪುನರುತ್ಥಾನದ ಅನಿವಾರ್ಯತೆ, ರಾಮರಾಜ್ಯದ ಪುನಃಸ್ಥಾಪನೆ ನಿಟ್ಟಿನಲ್ಲಿ ದೇಶರಕ್ಷಣೆ- ಧರ್ಮರಕ್ಷಣೆಗೆ ಬದ್ಧರಾದ, ಸಂಸ್ಕೃತಿಯ ಆಳ ಅರಿವು ಇರುವ ಧರ್ಮಯೋಧರನ್ನು ಸಿದ್ಧಪಡಿಸುವ ಅಗತ್ಯತೆ ಮತ್ತಿತರ ವಿಷಯಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿರುವ ಸಂವಾದ ಕಾರ್ಯಕ್ರಮ ಮೊಟ್ಟ ಮೊದಲನೆಯದಾಗಿ ರಾಜಧಾನಿಯಲ್ಲಿ ಆಯೋಜನೆಯಾಗಿದೆ.
2020ರ ಏಪ್ರಿಲ್ 26ರಂದು ಅಂದರೆ ಅಕ್ಷಯ ತೃತೀಯದಂದು ಈ ವಿಶಿಷ್ಟ ವಿಶ್ವವಿದ್ಯಾಪೀಠ ಲೋಕಾರ್ಪಣೆಯಾಗಲಿದ್ದು, ಮೊದಲ ಹಂತದಲ್ಲಿ ಸುಮಾರು 20 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಸುಮಾರು 10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ವಿವಿವಿ ಆಡಳಿತ ಸೌಧ ನಿರ್ಮಾಣವಾಗಿದೆ. ನಾಲ್ಕೂ ವೇದಗಳ ಅಧ್ಯಯನ ಕುಟೀರಗಳ ಸ್ಥಳ ಹಾಗೂ ಯೋಜನೆ, ಆಚಾರ್ಯರ ವಸತಿ ಕುಟೀರ, ವಿದ್ಯಾರ್ಥಿ ವಸತಿ, ಓಕಾಂರದ ದಿವ್ಯಾಕಾರದಲ್ಲಿ ಶಂಕರಾಚಾರ್ಯರ ಸ್ಮರಣೆಯ ಥೀಮ್‍ಪಾರ್ಕ್ ನಿರ್ಮಾಣ ಯೋಜನೆಗಳು ಅಂತಿಮವಾಗಿವೆ ಎಂದು ತಿಳಿಸಿದ್ದಾರೆ.
ಪ್ರಾಚೀನ ಭಾರತದಲ್ಲಿ ವಿಶ್ವದ ವಿವಿಧೆಡೆಗಳ 10 ಸಾವಿರಕ್ಕೂ ಹೆಚ್ಚು ಜ್ಞಾನಾರ್ಥಿಗಳಿಗೆ ಆಶ್ರಯ ನೀಡಿದ್ದ ತಕ್ಷಶಿಲಾ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಅದರ ಪುನರವತರಣ ಎನಿಸುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸುವ ಮಹತ್ ಸಂಕಲ್ಪ ಶ್ರೀಮಠದ್ದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಎನ್ಐ ಎಎಚ್ 2230
More News

ತಮ್ಮನಿಗೆ ಲಾಲಿ ಹಾಡಿದ ಐರಾ: ವಿಡೀಯೋ ವೈರಲ್

02 Jun 2020 | 2:59 PM

 Sharesee more..
ಲಾಕ್ ಡೌನ್ ಅವಧಿಯಲ್ಲಿ ವಿ ಮನೋಹರ್ ಅವರ ‘ಚಾಟ್ ಮಸಾಲ’

ಲಾಕ್ ಡೌನ್ ಅವಧಿಯಲ್ಲಿ ವಿ ಮನೋಹರ್ ಅವರ ‘ಚಾಟ್ ಮಸಾಲ’

01 Jun 2020 | 4:51 PM

ಬೆಂಗಳೂರು, ಜೂ 01 (ಯುಎನ್‍ಐ) ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕಲಾವಿದರು, ತಂತ್ರಜ್ಞರು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲಾ ಭಾಷೆಯ ಚಿತ್ರರಂಗದ ಅನೇಕರು ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಬಿಟ್ಟರು.

 Sharesee more..
78 ವರ್ಷಗಳಲ್ಲಿ ಕಲಿಯದನ್ನು, ಲಾಕ್ ಡೌನ್ ಸಮಯದಲ್ಲಿ ಕಲಿತೆ: ಅಮಿತಾಬ್

78 ವರ್ಷಗಳಲ್ಲಿ ಕಲಿಯದನ್ನು, ಲಾಕ್ ಡೌನ್ ಸಮಯದಲ್ಲಿ ಕಲಿತೆ: ಅಮಿತಾಬ್

31 May 2020 | 5:47 PM

ಮುಂಬೈ, ಮೇ 31 (ಯುಎನ್ಐ)- ಲಾಕ್ ಡೌನ್ ಸಮಯದಲ್ಲಿ ಕಲಿತಷ್ಟು 78 ವರ್ಷಗಳಲ್ಲಿ ಕಲಿಯಲು ಸಾಧ್ಯವಾಗಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

 Sharesee more..