Wednesday, Oct 28 2020 | Time 17:43 Hrs(IST)
 • 25 ವರ್ಷದ ಹಿಂದೆ ತೀರಿ ಹೋದ ತಾಯಿಯನ್ನು ಹೇಗೆ ಮಾರಾಟ ಮಾಡಲಿ? ಮುನಿರತ್ನ ಕಣ್ಣೀರು
 • ಭ್ರಷ್ಟಾಚಾರ ಆರೋಪ: ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
 • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
 • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
 • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
 • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
 • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
 • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
 • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
 • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
 • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
 • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
 • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
Entertainment Share

ವಿಷ್ಣುವರ್ಧನ್ ಅರ್ಹತೆಗೆ ತಕ್ಕ ಮನ್ನಣೆ ದೊರಕಿಲ್ಲವೆಂಬ ಕೊರಗಿದೆ: ರಮೇಶ್ ಭಟ್

ವಿಷ್ಣುವರ್ಧನ್ ಅರ್ಹತೆಗೆ ತಕ್ಕ ಮನ್ನಣೆ ದೊರಕಿಲ್ಲವೆಂಬ ಕೊರಗಿದೆ: ರಮೇಶ್ ಭಟ್
ವಿಷ್ಣುವರ್ಧನ್ ಅರ್ಹತೆಗೆ ತಕ್ಕ ಮನ್ನಣೆ ದೊರಕಿಲ್ಲವೆಂಬ ಕೊರಗಿದೆ: ರಮೇಶ್ ಭಟ್

ಬೆಂಗಳೂರು, ಸೆ 17 (ಯುಎನ್‍ಐ) ಸಾಹಸ ಸಿಂಹ ವಿಷ್ಣುವರ್ಧನ್ ಹೆಸರು ಚಿರಸ್ಥಾಯಿ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಹೃದಯದಲ್ಲಿ ನೆಲೆಸಿರುವ ಹೃದಯವಂತ. ಆದಾಗ್ಯೂ, ಅವರ ಅರ್ಹತೆಗೆ ತಕ್ಕ ಮನ್ನಣೆ ಸಿಕ್ಕಿಲ್ಲವೆಂಬ ಕೊರಗಿದೆ ಎಂದು ಹಿರಿಯ ನಟ ರಮೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.ವಿಷ್ಣುವರ್ಧನ್ ಅವರ 70ನೇ ಜನ್ಮದಿನಕ್ಕೆ ಮುನ್ನಾದಿನ ಯುಎನ್‍ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ಕೆಲಸದ ಬಗೆಗಿನ ಅವರ ನಿಷ್ಠೆ, ಬದ್ಧತೆ ಅನನ್ಯ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುತ್ತಿದ್ದ ಸಹೃದಯಿ. ಕರುಣಾಮಯಿ, ಹೃದಯವಂತ, ಕರ್ಣ,ಸಾಹಸ ಸಿಂಹ, ಆಪ್ತರಕ್ಷಕ ಮುಂತಾದವು ಕೇವಲ ಚಿತ್ರಗಳ ಹೆಸರಲ್ಲ. ಅನ್ವರ್ಥ ನಾಮ” ಎಂದರು.-:ಸ್ಮಾರಕಕ್ಕೆ ಚಾಲನೆ ದೊರಕಿದ್ದು ಸಂತಸ:-ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತು ಎಂಬಂತೆ, ಕೊನೆಗೂ 11 ವರ್ಷದ ಬಳಿಕ ವಿಷ್ಣು ಸ್ಮಾರಕಕ್ಕೆ ಚಾಲನೆ ದೊರಕಿದ್ದು ಸಂತಸ ವಿಚಾರ. ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆ, ಅವರ ನಡೆ ನುಡಿ ಜನರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತೆಯಾದರೂ, ಅದರ ಹೊಳಪೇರಿಸುವಂತಹ, ಯೋಗ್ಯತೆ, ಅರ್ಹತೆ ಪುರಸ್ಕರಿಸುವಂತೆ ಪದ್ಮಶ್ರೀ, ದಾದಾಪಾಲ್ಕೆ ಮೊದಲಾದ ಪ್ರಶಸ್ತಿಗಳು ದೊರೆಯಬೇಕಿತ್ತು ಎಂಬುದು ಅಭಿಮಾನಿಗಳ ಹಾಗೂ ವೈಯಕ್ತಿಕವಾಗಿ ನನ್ನ ಕೊರಗೂ ಹೌದು. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವಂತೆ ರಮೇಶ್ ಭಟ್ ಸರ್ಕಾರಕ್ಕೆ ಕಳಕಳಿಯ ಮನವಿ ಮಾಡಿದರು.-:ಮಾದರಿ ವ್ಯಕ್ತಿತ್ವ:-ಯುವ ಪೀಳಿಗೆಗೆ, ಯುವ ಕಲಾವಿದರಿಗೆ ವಿಷ್ಣುವರ್ಧನ್ ಮಾದರಿ, ಆದರ್ಶ. ಸಹ ಕಲಾವಿದರಿಗೆ ಕೀಳರಿಮೆಯಾಗದಂತೆ ವರ್ತಿಸುತ್ತಿದ್ದರು. ನಿರ್ದೇಶಕರು ಹೇಳಿದ ಸಮಯಕ್ಕೆ ಪಾತ್ರಕ್ಕೆ ತಕ್ಕ ಮೇಕಪ್ ನೊಂದಿಗೆ ಹಾಜರಾಗುತ್ತಿದ್ದರು.ವಿಧಿವಶರಾಗುವ 10 ವರ್ಷ ಮೊದಲೇ ಆಧ್ಯಾತ್ಮಿಕತೆಯತ್ತ ಅವರ ಮನಸ್ಸು ಹೊರಳಿತ್ತು. ಉಪೇಂದ್ರ ಶೆಣೈ ಅವರ ಕೆಲ ವಿಡಿಯೋ ತುಣುಕುಗಳು, ಬನ್ನಂಜೆ ಗೋವಿಂದಾಚಾರ್ಯರ ಸಾಮೀಪ್ಯದಿಂದ “ಬದುಕು ಇಷ್ಟೇ” ಎಂಬುದನ್ನು ಬಹುಬೇಗ ಅರಿತುಕೊಂಡರು. ಅಷ್ಟೇ ಬೇಗ ನಮ್ಮೆಲ್ಲರನ್ನೂ ಅಗಲಿದರು. ಆದಾಗ್ಯೂ ‘ಸಿಂಹ’ ಗರ್ಜನೆ ಎಂದೆಂದಿಗೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿರುತ್ತದೆ ಎಂದು ರಮೇಶ್ ಭಟ್ ತಿಳಿಸಿದ್ದಾರೆ.ಯುಎನ್ಐ ಎಸ್‍ಎ 1923