Friday, May 29 2020 | Time 16:50 Hrs(IST)
 • ಟೆಸ್ಟ್‌ ಮರಳು ಎದುರು ನೋಡುತ್ತಿರುವ ವೇಗಿ ಭುವನೇಶ್ವರ್‌
 • ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 205ಕ್ಕೆ ಏರಿಕೆ
 • ಯಾದಗಿರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ
 • ಕೋವಿಡ್-19 ಆರ್‌ಟಿಪಿಸಿಆರ್ ಲ್ಯಾಬ್ ಉದ್ಘಾಟಿಸಿದ ಸಚಿವ ಜೆ ಸಿ ಮಾಧುಸ್ವಾಮಿ
 • ಬಿಬಿಎಂಪಿ ಆಸ್ತಿ ತೆರಿಗೆಯಲ್ಲಿ ಶೇ 30 ರಷ್ಟು ರಿಯಾಯಿತಿಗೆ ಆಮ್ ಆದ್ಮಿ ಪಕ್ಷ ಆಗ್ರಹ
 • ಧೋನಿಗಾಗಿ 2011ರ ವಿಶ್ವಕಪ್‌ ಫೈನಲ್‌ನಲ್ಲಿ 2 ಬಾರಿ ಟಾಸ್‌: ಸಂಗಕ್ಕಾರ
 • ಅಧಿಕಾರಿಯ ಮೇಲೆ ಶಾಸಕರ ದೌರ್ಜನ್ಯ ಪ್ರಕರಣ: ಸೂಕ್ತ ತನಿಖೆಗೆ ಸಿದ್ದರಾಮಯ್ಯ ಆಗ್ರಹ
 • ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ: ಭ್ರಷ್ಟಾಚಾರದಲ್ಲಿ ಸರಕಾರ ಭಾಗಿ- ಸಲೀಮ್ ಅಹ್ಮದ್
 • ಐದನೆ ಹಂತದ ಲಾಕ್ ಡೌನ್ ವಿಸ್ತರಣೆ: ಸದ್ಯವೇ ತೀರ್ಮಾನ
 • ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೆರೆ
 • ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಿ; ರಾಹುಲ್ ಗಾಂಧಿ
 • ಜಲ್ಲಿಕಲ್ಲು ವ್ಯಾಪಾರಿ ಭೀಕರ ಕೊಲೆ
 • ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13 39 ಲಕ್ಷ ರೂ ದೋಖಾ
 • ಪರಿಷತ್ತಿನ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಹಕಾರ ಸಚಿವ
 • ಅಂಬಿ ಹುಟ್ಟು ಹಬ್ಬಕ್ಕೆ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
Entertainment Share

ಶ್ರೀರಾಮನವಮಿಗೆ ರಾಬರ್ಟ್ ಚಿತ್ರದ ಹಾಡು ಬಿಡುಗಡೆ ಸಾಧ್ಯತೆ

ಬೆಂಗಳೂರು, ಮಾ 30 (ಯುೆನ್‍ಐ) ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ಗೆ ತೆರೆಗೆ ಬರಬೇಕಿತ್ತು. ಆದರೆ ಮಹಾಮಾರಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ.

ಈ ಸಂದರ್ಭದಲ್ಲಿ ಅಭಿಮಾನಿಗಳ ಬೇಸರ ಕಳೆಯಲು ರಾಬರ್ಟ್ ತಂಡದಿಂದ ಸಂತಸದ ಸುದ್ದಿ ಹೊರಬಿದ್ದಿದ್ದು, ರಾಮನವಮಿಗೆ ರಾಬರ್ಟ್ ತಂಡ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದ್ದು, ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.
ರಾಬರ್ಟ್ ಸಿನಿಮಾದಿಂದ ಈಗಾಗಲೇ ಎರಡು ಹಾಡು ರಿಲೀಸ್ ಆಗಿದೆ. ಚಿತ್ರದ ಟೈಟಲ್ ಸಾಂಗ್, ದೋಸ್ತಾ ಕಣೋ ಮತ್ತು ಜೈ ಶ್ರೀರಾಮ್ ಹಾಡುಗಳು ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಚಿತ್ರದ ಹಾಡು ರಿಲೀಸ್ ಆಗುತ್ತಿದ್ದಂತೆ ಲಕ್ಷಗಟ್ಟಲೆ ವೀಕ್ಷಣೆ ಪಡೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರಲ್ಲೂ ಜೈ ಶ್ರೀ ರಾಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಮಾಡಿತ್ತು.
ರಾಬರ್ಟ್ ಸಿನಿಮಾದ ಹಾಡುಗಳನ್ನು ಅದ್ದೂರಿಯಾಗಿ ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು ಸಿನಿಮಾತಂಡ. ಉತ್ತರ ಕರ್ನಾಟಕದಲ್ಲಿ ರಾಬರ್ಟ್ ಹಾಡುಗಳು ಬಿಡುಗಡೆಯಾಗಬೇಕಿತ್ತು. ಆದರೆ ಕಿಲ್ಲರ್ ಕೊರೊನಾ ವೈರಸ್ ಆಡಿಯೋ ರಿಲೀಸ್ ಕಾರ್ಯಕ್ರಮನ್ನೆ ರದ್ದು ಮಾಡಿದೆ. ಹಾಗಾಗಿ ಸದ್ಯ ಚಿತ್ರದ ಎಲ್ಲಾ ಹಾಡುಗಳು ಯೂಟ್ಯೂಬ್ ನಲ್ಲಿಯೆ ರಿಲೀಸ್ ಆಗುವ ಸಾಧ್ಯತೆ ಇದೆ.