Monday, Mar 1 2021 | Time 03:18 Hrs(IST)
Sports Share

ಶ್ರೀಲಂಕಾದ ಇಬ್ಬರು ಆಟಗಾರರಿಗೆ ಕೋವಿಡ್-19 ಸೋಂಕು

ನವದೆಹಲಿ, ಜ.21 (ಯುಎನ್ಐ)- ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮುನ್ನ ಶ್ರೀಲಂಕಾದ ಇಬ್ಬರು ಆಟಗಾರರಾದ ಬಿನುರಾ ಫರ್ನಾಂಡೊ ಮತ್ತು ಚಮಿಕಾ ಕರುಣರತ್ನ ಅವರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸೀಮಿತ ಓವರ್‌ಗಳ ಪ್ರವಾಸಕ್ಕಾಗಿ ಇಬ್ಬರೂ ಆಟಗಾರರು ನಿರಂತರವಾಗಿ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದರು.

ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಹೇಳಿಕೆ ಬಿಡುಗಡೆ ಮಾಡಿದ್ದು, "ವಿಂಡೀಸ್ ಪ್ರವಾಸದ ಹಿನ್ನೆಲೆಯಲ್ಲಿ, ಜನವರಿ 18 ರಿಂದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (ಎಸ್‌ಎಸ್‌ಸಿ) ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಆಟಗಾರರು ಜನವರಿ 20 ರಂದು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ನಂತರ ಇಬ್ಬರು ಆಟಗಾರರಾದ ಬಿನುರಾ ಫರ್ನಾಂಡೊ ಮತ್ತು ಚಮಿಕಾ ಕರುಣರತ್ನೆ ಅವರಲ್ಲಿ ವೈರಸ್ ಕಂಡು ಬಂದಿದೆ. ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದ ಆರೋಗ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಅವರನ್ನು ಕೇಳಲಾಗಿದೆ. ಇತರ ಆಟಗಾರರು ಜನವರಿ 26 ರಂದು ಮತ್ತೆ ಕೊರೋನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

ಯುಎನ್ಐ ವಿಎನ್ಎಲ್ 2003
More News

ವಿಜಯ್ ಹಜಾರೆ: ಸಮರ್ಥ್, ದೇವದತ್ ಶತಕದ ವೈಭವ

28 Feb 2021 | 6:30 PM

 Sharesee more..

ಶೂಟಿಂಗ್ ಸ್ಕೀಟ್: ಭಾರತಕ್ಕೆ ಕಂಚು

28 Feb 2021 | 6:08 PM

 Sharesee more..
ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

ನಾಲ್ಕನೇ ಟೆಸ್ಟ್ ಗೆ ಬುಮ್ರಾ ಅಲಭ್ಯ

27 Feb 2021 | 9:14 PM

ನವದೆಹಲಿ, ಫೆ.27 (ಯುಎನ್ಐ)- ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯುವುದಿಲ್ಲ.

 Sharesee more..

ಶ್ರೇಯಸ್ ಶತಕ: ಮುಂಬೈ ಅಗ್ರ ಸ್ಥಾನ ಭದ್ರ

27 Feb 2021 | 8:50 PM

 Sharesee more..