ಚೆನ್ನೈ, ಜ 21 (ಯುಎನ್ಐ) ತಮಿಳುನಾಡು ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ಸಿಬ್ಬಂದಿ ಹಲ್ಲೆ ನಡೆಸಿ, ಹತ್ಯೆ ಮಾಡಿರುವುದನ್ನು ಖಂಡಿಸಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ಮೃತರ ಕುಟುಂಬ ಸದಸ್ಯರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ.
ಮೀನುಗಾರರ ಕುಟುಂಬಕ್ಕೆ ಸಂತಾಪ ಸೂಇಸಿರುವ ಅವರು, ಮೃತ ಕುಟುಂಬ ಸದಸ್ಯರಲ್ಲಿ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದರು.
ಜೊತೆಗೆ, ಹಾನಿಗೊಳಗಾಗಿರುವ ದೋಣಿಗಳನ್ನು ಕೂಡ ಪರಿಹಾರದ ರೂಪದಲ್ಲಿ ಒದಗಿಸಲಾಗುವುದು ಎಂದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಳನಿಸ್ವಾಮಿ, ಶ್ರೀಲಂಕಾ ರಾಯಭಾರಿ ಮೂಲಕ ವಿಸ್ತೃತ ತನಿಖೆಗೆ ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ.
ಯುಎನ್ಐ ಎಸ್ಎಚ್ 1806