KarnatakaPosted at: Jan 22 2021 10:45AM Shareಶಿವಮೊಗ್ಗ ದುರಂತ: ತಾವು ಹಿಂದೆಂದೂ ಕಂಡುಕೇಳರಿಯದ ಘಟನೆ- ಈಶ್ವರಪ್ಪಶಿವಮೊಗ್ಗ, ಜ.22 (ಯುಎನ್ಐ) ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ನಡೆದ ಸ್ಫೋಟ ಘಟನೆ ತಾವು ಹಿಂದೆಂದೂ ಕಂಡು ಕೇಳರಿಯದ ಘಟನೆಯಾಗಿದೆ. ತಮ್ಮ ಮನೆಯ ಕಿಟಕಿಗಳೂ ಘಟನೆಯ ತೀವ್ರತೆಯಿಂದಾಗಿ ಸ್ವಯಂ ತೆರೆದುಕೊಂಡಿವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.ದುರಂತ ಸಂಭವಿಸಿದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಇಲ್ಲೇ ಹುಟ್ಟಿ ಬೆಳೆದಂತಹ ನಮಗೆ ನಮ್ಮ ಜೀವನದಲ್ಲಿ ಇಂತಹ ಘಟನೆ ನೋಡಿಲ್ಲ ಮತ್ತು ಕೇಳಿಲ್ಲ. ಸ್ಫೋಟಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಬರೀ ಜಿಲೆಟಿನ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ತಜ್ಞರ ತಂಡು ಬಂದ ಪರಿಶೀಲನೆ ನಡೆಸಿ, ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಈ ಹಿಂದೆ ಹಲವಾರು ಭಾರಿ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಈಗ ಪ್ರಶ್ನೆ ಇರುವುದು ಅಕ್ರಮವೋ, ಸಕ್ರಮವೋ ಅನ್ನುವುದಲ್ಲ. ಇಷ್ಟೊಂದು ಅಗಾಧ ಪ್ರಮಾಣದ ಸ್ಫೋಟಕ್ಕೆ ಕಾರಣವೇನು? ಬರಿ ಜಿಲೆಟಿಕ್ ಕಡ್ಡಿಯಿಂದ ಇಷ್ಟೊಂದು ಪ್ರಮಾಣದಲ್ಲಿ ಸ್ಫೋಟ ಸಂಭವಿಸಲು ಸಾಧ್ಯವಿದೆಯೇ? ಅಥವಾ ಬೇರೆ ಏನಾದರೂ ಇತ್ತೇ ಅನ್ನುವ ಕುರಿತು ಪರಿಶೀಲನೆ ನಡೆಯಬೇಕಿದೆ. ತಜ್ಞರ ತಂಡು ಬಂದ ಪರಿಶೀಲನೆ ನಡೆಸಿ, ವರದಿ ನೀಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗವುದು ಎಂದರು.ಶೃಂಗೇರಿ ತನಕವೂ ಶಬ್ಧ ಕೇಳಿಸಿದೆ ಎಂದರ ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಅಂದಾಜಿಸಬಹುದು. ರಾಜ್ಯದ ಹಲವೆಡೆ ಅಕ್ರಮವಾಗಿಯೂ ಸಕ್ರಮವಾಗಿಯೂ ಬೇಕಾದಷ್ಟು ಕಡೆ ಗಣಿಗಾರಿಕೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.ಯುಎನ್ಐ ಎಎಚ್ 1043