Thursday, Oct 22 2020 | Time 15:37 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National Share

ಶಾಸಕರಾಗಿ 50 ವರ್ಷ ಪೂರೈಸಿದ ಊಮನ್‍ ಚಾಂಡಿ ಅವರಿಗೆ ಸೋನಿಯಾ ಸೇರಿ ಗಣ್ಯರಿಂದ ಅಭಿನಂದನೆ ಮಹಾಪೂರ

ತಿರುವನಂತಪುರಂ, ಸೆ 17 (ಯುಎನ್‌ಐ) ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ವಿಧಾನಸಭೆಯಿಂದ ಚುನಾಯಿತ ಪ್ರತಿನಿಧಿಯಾಗಿ 50 ವರ್ಷಗಳನ್ನು ಪೂರೈಸಿದ ಮಾಜಿ ಮುಖ್ಯಮಂತ್ರಿ ಊಮನ್‍ ಚಾಂಡಿ ಅವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.
‘ಇದು ಅಸಾಧಾರಣ ಸಾಧನೆಯಾಗಿದ್ದು, ಕ್ಷೇತ್ರದ ಜನರು ಚಾಂಡಿ ಅವರ ಮೇಲಿನ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಗೌರವದ ಪ್ರತಿಬಿಂಬವಾಗಿದೆ. ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಪ್ರಾಮಾಣಿವಾಗಿ ಅರ್ಧ ಶತಮಾನ ಶ್ರಮಿಸಿದ ಚಾಂಡಿ ಅವರಿಗೆ ಅಭಿನಂದನೆಗಳು.’ ಎಂದು ಸೋನಿಯಾಗಾಂ‍ಧಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಊಮನ್‍ ಚಾಂಡಿ, ಕ್ರಿಯಾಶೀಲ ವಿದ್ಯಾರ್ಥಿ ನಾಯಕರಾಗಿದ್ದರು. ದೂರದೃಷ್ಟಿಯ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಸೂಕ್ತ ನಾಯಕರಾಗಿ ಮತ್ತು ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮ ಅಪಾರ ಅನುಭವ ಮತ್ತು ಸೇವೆಯನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಸಂದೇಶದಲ್ಲಿ, ಊಮನ್‍ ಚಾಂಡಿ ಕೇರಳದ ನಿಜವಾದ ನಾಯಕರಾಗಿದ್ದಾರೆ. ಏಕೆಂದರೆ ಅವರು ಜನರ ಕಷ್ಟ –ಸುಖಗಳಿಗೆ ಯಾವಾಗಲೂ ಸ್ಪಂದಿಸುತ್ತಾರೆ. ಶಾಸಕರಾಗಿ 50 ವರ್ಷಗಳಲ್ಲಿ ಅವರ ಸಾಧನೆಗಳಿಗೆ ಅಭಿನಂದಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ಕಾಂಗ್ರೆಸ್‍ನ ಅತ್ಯಂತ ಜನಪ್ರಿಯ ನಾಯಕರಾದ 75 ವರ್ಷದ ಊಮನ್‍ ಚಾಂಡಿ 1970 ರಿಂದಲೂ ಕೊಟ್ಟಾಯಂ ಜಿಲ್ಲೆಯ ತಮ್ಮ ತವರು ಪುತ್ತುಪಲ್ಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಕೇರಳದಲ್ಲಿ ಈ ದಾಖಲೆಯನ್ನು ಮುರಿದಿದ್ದ ಕೆ ಎಂ ಮಣಿ 1967 ರಿಂದ ಪಾಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ವರ್ಷ ಮಣಿ ನಿಧನರಾದ ನಂತರ ಚಾಂಡಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಯುಎನ್ಐ ಎಸ್ಎಲ್ಎಸ್ 2152
More News
ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

ಅಮಿತ್ ಶಾ ಜನ್ಮದಿನ: ಪ್ರಧಾನಿ ಶುಭಹಾರೈಕೆ

22 Oct 2020 | 12:47 PM

ನವದೆಹಲಿ, ಅ, 22 (ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ 56 ನೇ ವಸಂತಕ್ಕೆ ಕಾಲಿಟ್ಟಿದ್ದು , ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

 Sharesee more..
ಸಚಿವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಮಲ್ ನಾಥ್‍ ಗೆ ಚುನಾವಣಾ ಆಯೋಗ ನೋಟಿಸ್

ಸಚಿವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಮಲ್ ನಾಥ್‍ ಗೆ ಚುನಾವಣಾ ಆಯೋಗ ನೋಟಿಸ್

21 Oct 2020 | 9:19 PM

ನವದೆಹಲಿ, ಅ21 (ಯುಎನ್‍ಐ)- ಮಧ್ಯಪ್ರದೇಶ ವಿಧಾನಸಭೆ ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಸಚಿವೆ ಇಮಾರತಿ ದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಕಮಲ್ ‍ನಾಥ್ ಅವರಿಗೆ ಚುನಾವಣಾ ಆಯೋಗ ನೋಟಿಸ್‍ ಜಾರಿಗೊಳಿಸಿದೆ.

 Sharesee more..