Tuesday, Oct 22 2019 | Time 08:44 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Karnataka Share

ಶಾಸಕರ ರಾಜೀನಾಮೆ ತರಾತುರಿಯಲ್ಲಿ ಅಂಗೀಕಾರ ಸಾಧ್ಯವಿಲ್ಲ: ಕಾಲಮಿತಿಯಲ್ಲಿ ಕ್ರಮ - ಸ್ಪೀಕರ್ ರಮೇಶ್ ಕುಮಾರ್

ಶಾಸಕರ ರಾಜೀನಾಮೆ ತರಾತುರಿಯಲ್ಲಿ ಅಂಗೀಕಾರ ಸಾಧ್ಯವಿಲ್ಲ: ಕಾಲಮಿತಿಯಲ್ಲಿ ಕ್ರಮ - ಸ್ಪೀಕರ್ ರಮೇಶ್ ಕುಮಾರ್
ಶಾಸಕರ ರಾಜೀನಾಮೆ ತರಾತುರಿಯಲ್ಲಿ ಅಂಗೀಕಾರ ಸಾಧ್ಯವಿಲ್ಲ: ಕಾಲಮಿತಿಯಲ್ಲಿ ಕ್ರಮ - ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜು 11 [ಯುಎನ್ಐ] ವಿವಿಧ ಕಾರಣಗಳಿಗಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ 16 ಶಾಸಕರ ರಾಜೀನಾಮೆಯನ್ನು ತರಾತುರಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ ನಿಯಮಾನುಸಾರ, ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಸಂವಿಧಾನಬದ್ಧವಾಗಿ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ನಡೆಸುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಘೋಷಿಸಿದ್ದಾರೆ.

ಬಿಜೆಪಿ ನಾಯಕರು ಹಾಗೂ ಅತೃಪ್ತ ಶಾಸಕರು ಆರೋಪಿಸಿರುವಂತೆ ತಾವು ರಾಜೀನಾಮೆ ಅಂಗೀಕರಿಸುವುದನ್ನು ವಿಳಂಬ ಮಾಡಿಲ್ಲ. ಇದಕ್ಕಾಗಿ ಈವರೆಗೆ ತೆಗೆದುಕೊಂಡಿರುವುದು ಮೂರು ಕೆಲಸದ ದಿನಗಳು ಮಾತ್ರ. ಇಷ್ಟಕ್ಕೂ ತಮ್ಮನ್ನು ಈವರೆಗೆ ರಾಜೀನಾಮೆ ನೀಡಿರುವ ಶಾಸಕರು ಮುಖತಃ ಭೇಟಿ ಮಾಡಿ ತ್ಯಾಗಪತ್ರ ಸಲ್ಲಿಸಿಲ್ಲ. ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ನಂತರ ಪ್ರತಿಯೊಬ್ಬರಿಗೂ ಸ್ವೀಕೃತಿ ಪತ್ರ ನೀಡಲಾಗಿದೆ. ಕೆಲವರಿಗೆ ಶುಕ್ರವಾರ ಮತ್ತು ಶನಿವಾರ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಹೀಗಿರುವಾಗ ವಿಳಂಬ ಧೋರಣೆ ಅನುಸರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ವ್ಯಾಪಕ ಬಿಗಿ ಭದ್ರತೆ ನಡುವೆ ರಾಜೀನಾಮೆ ನೀಡಿರುವ ಶಾಸಕರನ್ನು ವೈಯಕ್ತಿವಾಗಿ ಭೇಟಿಮಾಡಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೀರೋ ? ಅಥವಾ ಯಾರದಾದರೂ ಒತ್ತಡಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ್ದೀರೋ? ಎಂದು ಕೇಳಿ, ಶಾಸಕರ ವಿಚಾರಣೆ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಮುಗಿಸಿದ ಬಳಿಕ ಕಿಕ್ಕಿರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಮ್ಮದೇ ಸ್ಪೀಕರ್ ಅವರನ್ನು ಭೇಟಿ ಮಾಡಲು ನಮ್ಮ ಚುನಾಯಿತ ಸದಸ್ಯರು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಿತ್ತೇ? ಇಂತಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಹ ಸೂಚನೆ ನೀಡಬೇಕಿತ್ತೇ? ಇಷ್ಟಕ್ಕೂ ಯಾವುದೇ ಶಾಸಕರು ತಮ್ಮ ಬಳಿ ಬರಲೇ ಇಲ್ಲ. ಇಲ್ಲಿಂದ ಎಲ್ಲೋ ಮುಂಬೈಗೆ ಹೋಗಿ. ಅಲ್ಲಿಂದ ದೆಹಲಿಗೆ ಹೋಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರ ಬಳಿ ಹಣ ಇದೆ. ವಿಶೇಷ ವಿಮಾನಗಳಿವೆ. ಒಳ್ಳೆಯ ವಕೀಲರಿದ್ದಾರೆ. ಜನ ಸಾಮಾನ್ಯರು ಇದನ್ನೆಲ್ಲಾ ಮಾಡಲು ಸಾಧ್ಯವೇ? ಎಂದು ತಮ್ಮೊಳಗೆ ಅಡಗಿದ್ದ ಸಿಟ್ಟು ರಮೇಶ್ ಕುಮಾರ್ ಹೊರ ಹಾಕಿದರು.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಸಾಯೋ ವಯಸ್ಸಲ್ಲಿ,.. ಈತ( ರಮೇಶ್ ಕುಮಾರ್) ಏನೋ ಸಿಗುತ್ತದೆ ಎನೋ ಎನ್ನುವ ಆಸೆಗೆ ಬಲಿ ಬಿದ್ದು ರಾಜೀನಾಮೆ ಅಂಗೀಕಾರ ವಿಳಂಬ ಮಾಡುತ್ತಿದ್ದಾನೆ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ತಮಗೆ ಈಗ 70 ವರ್ಷ. 100 ವರ್ಷ ಬದುಕುವ ಆಸೆಯಂತೂ ತಮಗಿಲ್ಲ. ರಾಜಕಾರಣಕ್ಕೆ ಬಂದು 40 ವರ್ಷವಾಗಿದೆ. ಇರುವಷ್ಟು ದಿನ ಒಳ್ಳೆಯ ರೀತಿ ಕೆಲಸ ಮಾಡಿ ನಿವೃತ್ತಿಯಾಗಬೇಕು ಎಂಬುದು ನಮ್ಮ ಆಸೆ ಎಂದರು.

ಕ್ರಮಬದ್ಧವಾಗಿದ್ದರೆ ಅದನ್ನು ಅಂಗೀಕರಿಸಲು ಯಾಕೆ ವಿಳಂಬ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆಯಲ್ಲ ಎಂಬ ಪ್ರಶ್ನೆಗೆ, " ಸುಪ್ರೀಂ ಕೋರ್ಟ್ ಆದೇಶದಿಂದ ರಾಜೀನಾಮೆ ಸಲ್ಲಿಸಿರುವ ವಿಧಾನ ಕ್ರಮಬದ್ಧವಾಗುವುದಿಲ್ಲ. ಹೇಳಿ ಕೇಳಿ ನಾನು ಭಯಸ್ಥ. ಸುಪ್ರೀಂ ಕೋರ್ಟ್ ಹೇಳಿದ ನಂತರ ಅವರಿಗೆ ಭಯ ಬಿದ್ದು, ಸಂಜೆ ಆರು ಗಂಟೆಯವರೆಗೆ ಕಾದು ವಿಚಾರಣೆ ನಡೆಸಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.

ಅತೃಪ್ತ ಶಾಸಕರನ್ನು ವಿಚಾರಣೆ ಮಾಡಿದ ನಂತರವೇ ತೀರ್ಮಾನ ಪ್ರಕಟಿಸಲಾಗುವುದು. ಜುಲೈ 6 ರಂದು ತಾವು ಮಧ್ಯಾಹ್ನ 12.45ರ ವರೆಗೆ ಕಚೇರಿಯಲ್ಲಿದ್ದು, ಬಳಿಕ ಶಾಕಸರು ರಾಜೀನಾಮೆ ಸಲ್ಲಿಸಿದ್ದಾರೆ. ಮರುದಿನ ರಜೆ, ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನಂತರ ಬಂದು ಪರಿಶೀಲಿಸಿದಾಗ 13 ಶಾಸಕರ ಪೈಕಿ ಐವರ ರಾಜೀನಾಮೆ ಕ್ರಮಬದ್ಧವಾಗಿದೆ. ಇಂದು ಹತ್ತು ಮಂದಿ ಶಾಸಕರು ತಮ್ಮ ರಾಜೀನಾಮೆಯನ್ನು ಕ್ರಮಬದ್ಧವಾಗಿ ಸಲ್ಲಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ವಿಚಾರಣೆಗೆ ಬರುವಂತೆ ಕೆಲವರಿಗೆ ಸೂಚನೆ ನೀಡಿದ್ದೇನೆ. ಈಗ ಮತ್ತೆ ರಾಜೀನಾಮೆ ಸಲ್ಲಿಸಿರುವವರ ಪ್ರಕರಣದಲ್ಲಿ ನಿಯಮದಂತೆ ವಿಚಾರಣೆ ನಡಸುತ್ತೇನೆ. ರಾಜೀನಾಮೆ ಪ್ರಕರಣವನ್ನು ದೀರ್ಘ ಅವಧಿಗೆ ಎಳೆಯುವ ಉದ್ದೇಶ ತಮಗಿಲ್ಲ. ವಿಚಾರಣೆ ಒಂದೇ ದಿನದಲ್ಲಿ ಆಗಬಹುದು. ಅಥವಾ ಒಂದು ತಿಂಗಳೂ ಹಿಡಿಯಬಹುದು ಎಂದರು.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜ್ಯಪಾಲರು ತಮಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ರೀತಿಯಲ್ಲಿ ತೀರ್ಮಾನಿಸಿ ಎಂದು ರಾಜಭನದ ಕಾರ್ಯದರ್ಶಿಯನ್ನು ಬಳಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈಗ ರಾಜ್ಯದಲ್ಲಿ ವಿಶಿಷ್ಟ ಸನ್ನಿವೇಶ ಉಂಟಾಗಿದ್ದು, ಸಾರ್ವಜನಿಕವಾಗಿ ಮಾಹಿತಿ ನೀಡುವುದು ತಮ್ಮ ಕರ್ತವ್ಯವಾಗಿದೆ. ಯಾರನ್ನೋ ಉಳಿಸುವುದು, ಅಳಿಸುವುದು ತಮ್ಮ ಕರ್ತವ್ಯವಲ್ಲ. ಆದರೆ ಪತ್ರಿಕೆಗಳನ್ನು ನೋಡಿದಾಗ ಬೇಸರವಾಯಿತು. ರಾಜೀನಾಮೆ ಅಂಗೀಕಾರ ವಿಳಂಬವಾಗಿದೆ ಎಂದು ವರದಿಯಾಗಿರುವುದು ನೋವು ತರಿಸಿದೆ. ರಾಜಕಾರಣದ ಬಗ್ಗೆ ಹೇಗೆ ಆಕ್ರೋಶ ವ್ಯಕ್ತವಾಗುತ್ತಿದೆಯೋ ಅದೇ ರೀತಿ ಮಾಧ್ಯಮಗಳು ಸಹ ಆಕ್ರೋಶಕ್ಕೆ ತುತ್ತಾಗುವ ಸನ್ನಿವೇಶ ಸೃಷ್ಟಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಸತ್ಯವನ್ನಷ್ಟೇ ಪ್ರಚಾರ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.

ರಾಜೀನಾಮೆ ತಕ್ಷಣ ಸ್ವೀಕಾರವಾಗುತ್ತದೆ. ಆದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ನೀಡಿರುವ ದೂರಿನನ್ವಯ ಕ್ರಮ ಕೈಗೊಳ್ಳಲು ಸಮಯ ಹಿಡಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತಮಗೆ ಅತಿ ಹೆಚ್ಚುನೋವು ತರಿಸಿದೆ. ತಾವು ಯಾರನ್ನೂ ಓಲೈಸುತ್ತಿಲ್ಲ. ಯಾರ ಮುಲಾಜಿಗೂ ಒಳಗಾಗಿಲ್ಲ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಂವಿಧಾನದ 192ರ ಪ್ರಕಾರ ರಾಜೀನಾಮೆ ನೀಡಿದ್ದರೆ ಆ ಬಗ್ಗೆ ವಿಚಾರಣೆ ಮಾಡಿ ಅದು ಸಹಜ ಮತ್ತು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆಯೇ ಇಲ್ಲವೆ ಎಂಬುದನ್ನು ನೋಡಿ ಪರಿಶೀಲಿಸಿ ಅಂಗೀಕಾರ ನೀಡಬೇಕಾಗುತ್ತದೆ. ಆದರೆ ರಾಜೀನಾಮೆ ನೀಡಿರುವರು ಸಹಜವಾಗಿ ಕೊಟ್ಟಿದ್ದಾರೆಯೋ ಇಲ್ಲವೋ ಎನ್ನುವುದನ್ನು ಅವರವರ ವಿವೇಚನೆಗೆ ಬಿಡುತ್ತೇನೆ ಎಂದರು.

ಇವತ್ತು ವ್ಯಾಪಕ ಪೊಲೀಸ್ ಬಂದೋಬಸ್ತ್ ನಲ್ಲಿ ವಿಚಾರಣೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾರಿಗೋಸ್ಕರ, ಯಾರ ಖುಷಿಗೋಸ್ಕರ ಇವೆಲ್ಲಾ ಮಾಡಬೇಕಿತ್ತು. ತಾವು ಬೇರೆ ಯಾವುದೇ ಶಕ್ತಿಗೆ ನಾನು ಬಗ್ಗುವುದಿಲ್ಲ. ಆದರೆ ಇತಿಹಾಸ ನೋಡಿದರೆ ಬಹಳಷ್ಟು ಜನ ಮಂತ್ರಿಯಾಗಲು ರಾಜೀನಾಮೆ ನೀಡುತ್ತಾರೆ.

ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಮೊದಲ ದಿನ ಶ್ರದ್ಧಾಂಜಲಿ ನಂತರ ಅಧಿಕೃತ ಕಲಾಪ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ರಾಜೀನಾಮೆ ಸ್ವೀಕಾರ ಆಗಿದ್ದರೆ ಅವರಿಗೆ ರಾಜಕೀಯ ಪಕ್ಷಗಳು ನೀಡುವ ವಿಪ್ ಅನ್ವಯವಾಗುವುದಿಲ್ಲ. ಸ್ವೀಕಾರವಾಗದೇ ಇದ್ದರೆ ವಿಪ್ ಅನ್ವಯ ಅಗಲಿದೆ ಎಂದರು.

ವಿಧಾನಸೌಧದಲ್ಲಿ ನಿನ್ನೆ ಡಾ. ಸುಧಾಕರ್ ಅವರನ್ನು ದಿಗ್ಭಂಧ ಮಾಡಿದ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ಬೀದಿಯಲ್ಲಿ ಆಗುವ ಘಟನೆಗಳಲ್ಲಿ ತಾವು ಜವಾಬ್ದಾರರಲ್ಲ. ಯಾರು ಯಾರದ್ದು ಏನೇನೋ ವ್ಯಾಪಾರ ಇರುತ್ತದೆ. ಇವೆಲ್ಲಾ ತಮಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ನೀವು ಅವರಿಗೆ ಕೇಳಿ. ಶಾಸಕರಿಗೆ ರಾಜೀನಾಮೆ ನೀಡುವಾಗ ಬೆದರಿಕೆ ಇದೆ ಎಂದು ಮುಂಚಿತವಾಗಿ ತಿಳಿಸದರೆ ಶಾಸಕರಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯ?. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಂದಿ ಶಾಸಕರು ರಾಜೀನಾಮೆ ನೀಡಬಹುದು ಎಂದು ಸುಳಿವು ನೀಡಿದರು.

ಯುಎನ್ಐ ಎಸ್ಎಂಆರ್ ವಿಎನ್ 2025

More News
ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ: ಸಚಿವ ಆರ್ ಅಶೋಕ್ ಭರವಸೆ

ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ: ಸಚಿವ ಆರ್ ಅಶೋಕ್ ಭರವಸೆ

21 Oct 2019 | 8:50 PM

ಮಂಗಳೂರು, ಅ.21 (ಯುಎನ್ಐ) ಪತ್ರಕರ್ತರಿಗೆ ನಿವೇಶನ ನೀಡಲು ಸರಕಾರ ತಕ್ಷಣ ಕ್ರ‌ಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ.

 Sharesee more..