Monday, Jan 20 2020 | Time 20:23 Hrs(IST)
 • ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಯಡಿಯೂರಪ್ಪ
 • ಡೆತ್ ನೋಟ್ ಆರೋಪ ಆಧರಿಸಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗದು: ಹೈಕೋರ್ಟ್
 • ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ
 • 175 ಕಿ ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !
 • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
 • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
 • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
 • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
 • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
 • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
 • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
 • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
 • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
 • ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ 'ಹಲ್ವಾ ' ಸಮಾರಂಭ
 • ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್
National Share

ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು

ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು
ಶಾಸಕರ ರಾಜೀನಾಮೆ ಪ್ರಕರಣ; ಬುಧವಾರ ಸುಪ್ರೀಂಕೋರ್ಟ್ ನಿಂದ ತೀರ್ಪು

ನವದೆಹಲಿ, ಜುಲೈ 16 (ಯುಎನ್ಐ) ವಿಧಾನಸಭಾ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಗೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕದ 15 ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.

ಈ ಮೂಲಕ 13 ತಿಂಗಳ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸುವ ಹಾಗೂ ಶಾಸಕಾಂಗ ಮತ್ತು ನ್ಯಾಯಾಂಗ ನಡುವಿನ ಮಹತ್ವದ ಬೆಳವಣಿಗೆಯೆಂದೇ ಪರಿಗಣಿಸಲ್ಪಟ್ಟಿರುವ ಈ ಪ್ರಕರಣದ ತೀರ್ಪಿನ ಬಗ್ಗೆ ದೇಶಾದ್ಯಂತ ವ್ಯಾಪಕ ಕುತೂಹಲ ವ್ಯಕ್ತವಾಗಿದೆ.

ಸುಮಾರು 2.30 ಗಂಟೆಗಳ ಕಾಲ ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ, 'ಬುಧವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಾಗುವುದು' ಎಂದು ತಿಳಿಸಿತು.

ನ್ಯಾಯಪೀಠ ಸೋಮವಾರ ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೊಹಟಗಿ, ಸ್ಪೀಕರ್ ಪರವಾಗಿ ಡಾ.ಅಭಿಷೇಕ್ ಮನುಸಿಂಘ್ವಿ, ರಾಜ್ಯದ ಮುಖ್ಯಮಂತ್ರಿಯ ಪರವಾಗಿ ಡಾ.ರಾಜೀವ್ ಧವನ್ ಅವರ ಸುದೀರ್ಘ ವಾದ ಆಲಿಸಿತ್ತು.

ಶಾಸಕರ ಪರ ವಕೀಲರು, ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದರೆ, ಸ್ಪೀಕರ್ ತಮ್ಮ ರಾಜೀನಾಮೆ ಅಂಗೀಕರಿಸದೆ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮಂಗಳವಾರ ಬೆಳಗ್ಗೆ, ಮುಕುಲ್ ರೋಹಟಗಿ ಅವರು, ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಭೀತಿಯಿಂದ ಶಾಸಕರ ರಾಜೀನಾಮೆ ಅಂಗೀಕರಿಸುತ್ತಿಲ್ಲ. ಜುಲೈ 10ರಂದೇ ಎಲ್ಲಾ 10 ಅರ್ಜಿದಾರರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ಆ ದಿನ ಕೇವಲ ಇಬ್ಬರ ವಿರುದ್ಧ ಮಾತ್ರ ಅನರ್ಹತೆಯ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ವಾದಿಸಿದರು.

ಸಂವಿಧಾನದ 190ನೇ ಪರಿಚ್ಛೇದ ಹಾಗೂ 10ನೇ ಕಲಂ ಪ್ರಕಾರ ಸ್ಪೀಕರ್ ಪಾತ್ರ ಭಿನ್ನವಾಗಿದೆ. ಆದ್ದರಿಂದ ಅನರ್ಹತೆ ಪ್ರಕ್ರಿಯೆಯ ವಿಳಂಬ ರಾಜೀನಾಮೆ ಅಂಗೀಕಾರಕ್ಕೆ ಕಾರಣವಾಗಲಾರದು. ಜೊತೆಗೆ, ಮತ್ತೆ ಐವರು ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅದನ್ನು ಕೂಡ ಸ್ಪೀಕರ್ ಅಂಗೀಕರಿಸಿಲ್ಲ. ಇಂತಹ ಅಸಮರ್ಥ ಪ್ರಕ್ರಿಯೆಗಳು ಸೂಕ್ತವಲ್ಲ ಎಂದರು.

ಇನ್ನೊಂದೆಡೆ, ಸ್ಪೀಕರ್ ಪರ ವಕೀಲರು, ಅತೃಪ್ತರ ರಾಜೀನಾಮೆ ಪತ್ರವನ್ನು ಪರಿಶೀಲಿಸಿ, ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಇಲ್ಲವೇ ಒತ್ತಡಕ್ಕೊಳಗಾಗಿದ್ದರೆ ಎಂಬುದನ್ನು ಪರಿಶೀಲಿಸಲು ಕಾಲಾವಧಿ ಬೇಕು ಎಂದು ವಾದಿಸಿದರು.

ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿರುವ ಕಾರಣವೇನು ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ರೋಹಟಗಿ ಅವರು, ಶಾಸಕರ ವಿರುದ್ಧ ಅನರ್ಹತೆಯ ಯಾವುದೇ ಸ್ಪಷ್ಟ ಕಾರಣಗಳಿಲ್ಲ ಎಂದರು.

ಸ್ಪೀಕರ್ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಅನರ್ಹತೆ ಅರ್ಜಿಗೆ ಮುನ್ನ ಸಲ್ಲಿಕೆಯಾಗಿರುವ ರಾಜೀನಾಮೆ ಅರ್ಜಿ ಕ್ರಮಬದ್ಧವಾಗಿರಲಿಲ್ಲ. ರಾಜೀನಾಮೆ ಪತ್ರ ಹಾಗೂ ಅನರ್ಹತೆ ಅರ್ಜಿಗಳ ನಡುವಿನ ದಿನಾಂಕ, ಸಮಯ ಹೊಂದಾಣಿಕೆಯಾಗುತ್ತಿಲ್ಲ ಎಂದರು.

ಶಾಸಕರ ರಾಜೀನಾಮೆ ಸಂಬಂಧ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಜುಲೈ 12ರಂದು ನೀಡಿದ್ದ ಆದೇಶವನ್ನು ತೆರವುಗೊಳಿಸಿ, ಸ್ಪೀಕರ್ ಅವರಿಗೆ ಬುಧವಾರದಂದು ರಾಜೀನಾಮೆ ಹಾಗೂ ಅನರ್ಹತೆ ಅರ್ಜಿಗಳ ಕುರಿತು ನಿರ್ಧರಿಸಲು ಅನುವು ಮಾಡಿಕೊಡಬೇಕು ಎಂದು ಸಿಂಘ್ವಿ ಮನವಿ ಮಾಡಿದರು.ಜುಲೈ 11ರವರೆಗೆ ಯಾವುದೇ ಶಾಸಕರು ರಾಜೀನಾಮೆ ಕುರಿತು ಸ್ಪೀಕರ್ ಮುಂದೆ ಹಾಜರಾಗಿ ವಿವರಣೆ ನೀಡಿರಲಿಲ್ಲ. ಅವರು ಮುಂಬೈ ಹಾಗೂ ಸುಪ್ರೀಂಕೋರ್ಟ್ ಗೆ ಹೋದರೆ ಹೊರತು ಸ್ಪೀಕರ್ ಬಳಿ ಹೋಗಲಿಲ್ಲ. ಆದ್ದರಿಂದ ಎಲ್ಲಾ ರಾಜೀನಾಮೆಗಳು ಅನರ್ಹತೆ ಅರ್ಜಿಯ ನಂತರ ಪರಿಗಣನೆಯಾಗುತ್ತವೆ. ಈಗ ನ್ಯಾಯಾಲಯ ಸ್ಪೀಕರ್ ಗೆ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಬೇಕು ಎಂದರು.

ಯುಎನ್ಐ ಎಸ್ಎಚ್ ವಿಎನ್ 1844

More News
ತಂಜಾವೂರು ವಾಯು ಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

ತಂಜಾವೂರು ವಾಯು ಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

20 Jan 2020 | 7:45 PM

ತಂಜಾವೂರು, ಜ 20(ಯುಎನ್‍ಐ)- ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೋಮವಾರ ಸೇರ್ಪಡೆಗೊಳಿಸಲಾಗಿದೆ.

 Sharesee more..
ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ

ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ

20 Jan 2020 | 7:36 PM

ನವದೆಹಲಿ, ಜ 20 (ಯುಎನ್ಐ) ಬಿಜೆಪಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೆ.ಪಿ.ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ನಡ್ಡಾ ತಮಗೆ ದೊರಕಿರುವ ಯಾವುದೇ ಜವಾಬ್ದಾರಿಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

 Sharesee more..
ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ

ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ

20 Jan 2020 | 7:21 PM

ನವದೆಹಲಿ, ಜ 20(ಯುಎನ್‍ಐ)- ತಮ್ಮ ನಾಯಕತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಶ್ರಮಿಸಲಾಗುವುದು ಎಂದು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.

 Sharesee more..

ಬಿಜೆಪಿ ನೂತನ ಅಧ್ಯಕ್ಷರಾಗಿ ಜೆ ಪಿ ನಡ್ಡಾ ಆಯ್ಕೆ

20 Jan 2020 | 5:46 PM

 Sharesee more..