Sunday, Nov 29 2020 | Time 18:55 Hrs(IST)
 • ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ; ಗೋವಿಂದ ಕಾರಜೋಳ
 • ಭಾರತದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲಿಲ್ಲ: ವಿರಾಟ್‌ ಕೊಹ್ಲಿ
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
Entertainment Share

ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ

ಬೆಂಗಳೂರು, ಅ.22 (ಯುಎನ್ಐ) ಸ್ಯಾಂಡಲ್ ವುಡ್ ನ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿಯ ಆಗಮನವಾಗಿದೆ. ನಟಿ ಮೇಘನಾ ಸರ್ಜಾ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜ್ಯೂನಿಯರ್ ಚಿರಂಜೀವಿ ಹುಟ್ಟಿ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಹೆರಿಗೆ ಮುಂಚಿತವಾಗಿಯೇ ಮೇಘನಾರ ಮೈದುನ ನಟ ಧ್ರುವಾ ಸರ್ಜಾ ಅವರು ಮಗುವಿಗೆ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ. ಅಕಾಲಿಕವಾಗಿ ನಟ ಚಿರಂಜೀವಿ ಸರ್ಜಾ ನಿಧನವಾಗಿದ್ದರಿಂದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿ ಕಗ್ಗತ್ತಲೂ ಆವರಿಸಿತ್ತು. ಇದೀಗ ಜ್ಯೂನಿಯರ್ ಚಿರಂಜೀವಿ ಬೆಳಕಾಗಿ ಮೇಘನಾರ ಮಡಿಲು ಸೇರಿದ್ದಾರೆ. ಹೆರಿಗೆಗಾಗಿ ಮೇಘನಾ ರಾಜ್ ಬುಧವಾರ ಕೆ.ಆರ್​ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೇಘನಾ ತಾಯಿ ಪ್ರಮಿಳಾ ಜೋಷಾಯಿ, ತಂದೆ ಸುಂದರ್ ರಾಜ್ ಸೇರಿ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಯಲ್ಲಿ ತಾಯಿ ಮಗುವಿನ ಜೊತೆಗಿದ್ದಾರೆ. ದ್ರುವಾ ಸರ್ಜಾ ಜ್ಯೂನಿಯರ್ ಚಿರಂಜೀವಿಯನ್ನು ಎತ್ತಿ ಮುದ್ದಾಡಿದ್ದಾರೆ. ಇಂದು ಮೇಘನಾ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥವಾಗಿದ್ದ ದಿನ. 2017ರ ಅ. 22ರಂದು ಚಿರು ಮೇಘನಾ ನಿಶ್ಚಿತಾರ್ಥ ನಡೆದಿತ್ತು. ಇಂದೇ ಕುಟುಂಬಕ್ಕೆ ಮಗುವಿನ ಆಗಮನವಾಗಿದ್ದು ಸರ್ಜಾ ಕುಟುಂಬದಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ರಾಜ್ಯದ ಜನತೆ ತಾಯಿ, ಮಗುವನ್ನು ಆಶೀರ್ವದಿಸಿ ಎಂದು ನಟ ಧ್ರುವಾ ಸರ್ಜಾ ಕೋರಿದ್ದಾರೆ.
ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧ್ರುವಾ ಸರ್ಜಾ, ಕರ್ನಾಟಕ ರಾಜ್ಯದ ಜನತೆ ತಾಯಿ, ಮಗುವನ್ನು ಆಶೀರ್ವದಿಸಬೇಕು. ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಮಗು ಕೈಯಲ್ಲಿ ಎತ್ತಿಕೊಂಡಾಗ ಆದ ಖುಷಿ ಹೇಳಲು ಸಾಧ್ಯವಿಲ್ಲ ಎಂದರು.
ಈ ಹಿಂದೆ ಅಣ್ಣ ಚಿರಂಜೀವಿ ತನಗೆ ಮಗನೇ ಹುಟ್ಟೋದು. ಶಾಲೆಯಲ್ಲಿ ಆತನ ಕಂಪ್ಲೆಂಟ್ಸ್ ಜಾಸ್ತಿ ಆಗಿರುತ್ತವೆ ಎಂದು ಹೇಳಿದ್ದ. ಆತ ಹೇಳಿದಂತೆ ಇಂದು ಗಂಡು ಮಗು ಜನಿಸಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಚಿರಂಜೀವಿ ತಾಯಿ ಲಕ್ಷ್ಮೀ ದೇವಿ‌ ಸುದ್ದಿಗಾರರೊಂದಿಗೆ ಮಾತನಾಡಿ, ಚಿರು ಕಳೆದುಕೊಂಡಾಗಿನಿಂದಲೂ ನಾವೆಲ್ಲ ತುಂಬಾ ದುಖಃದಲ್ಲಿದ್ದೇವು. ಇದೀಗ ಚಿರು ಪುತ್ರನ ಆಗಮನದಿಂದ ಎಲ್ಲರಿಗೂ ಬಹಳ ಸಂತೋಷವಾಗಿದೆ. ಇದೇ ಚಿರು ಮೇಘನಾ ನಿಶ್ಚಿತಾರ್ಥವಾಗಿತ್ತು. ಮೊಮ್ಮಗನು ಇಂದೇ ಜನಿಸಿದ್ದರಿಂದ ತುಂಬಾ ಖುಷಿಯಾಗಿದೆ. ಮಗು ನೋಡಿದರೇ ಥೇಟ್ ಚಿರಂಜೀವಿ ನೋಡಿದಂತೆ ಅನಿಸಿತು ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ 11:07ಕ್ಕೆ ನಟಿ ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕಿರಿಯ ಚಿರಂಜೀವಿ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸರ್ಜಾ ಹಾಗೂ ಸುಂದರ್​ ರಾಜ್​ ಕುಟುಂಬಗಳು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ಹೊರತು ಪಡಿಸಿ, ಕುಟುಂಬಸ್ಥರೆಲ್ಲರೂ ಆಸ್ಪತ್ರೆಗೆ ಆಗಮಿಸಿದ್ದರು.
ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಖುಷಿಗೆ ಅಭಿಮಾನಿಗಳು ಆಸ್ಪತ್ರೆಯ ಎದುರು ಪಟಾಕಿ ಹೊಡೆದು,‌ ಸಿಹಿ‌ಹಂಚಿ ಸಂಭ್ರಮಿಸಿದರು.

ಯುಎನ್ಐ ಪಿಕೆ ಎಎಚ್ ವಿಎನ್ 1350
More News
ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

28 Nov 2020 | 10:01 PM

ಬೆಂಗಳೂರು, ನ 28 (ಯುಎನ್‍ಐ) ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ಬೆಲಂಕೊಂಡ ಸಾಯಿ ಶ್ರೀನಿವಾಸ್​ ಇದೀಗ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ.

 Sharesee more..
“ರಾಣಿ ಜೇನು” ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಬಿಡುಗಡೆ

“ರಾಣಿ ಜೇನು” ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಬಿಡುಗಡೆ

28 Nov 2020 | 9:58 PM

ಬೆಂಗಳೂರು, ನ 28 (ಯುಎನ್‍ಐ) ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದ್ದು, ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ “ರಾಣಿ ಜೇನು” ಎಂಬ ರೊಮ್ಯಾಂಟಿಕ್ ವಿಡಿಯೋ ಬಿಡುಗಡೆಗೊಳಿಸಿದೆ.

 Sharesee more..
'ಆ ಒಂದು ಕನಸು' ಶೀರ್ಷಿಕೆ ಅನಾವರಣ

'ಆ ಒಂದು ಕನಸು' ಶೀರ್ಷಿಕೆ ಅನಾವರಣ

28 Nov 2020 | 9:56 PM

ಬೆಂಗಳೂರು, ನ 28 (ಯುಎನ್ಐ) ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ದಿಲೀಪ ಬಿ.ಎಂ ನಿರ್ಮಿಸುತ್ತಿರುವ ನೂತನ ಚಿತ್ರ 'ಆ ಒಂದು ಕನಸು' ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟರಾದ ಎಸ್ ಉಮೇಶ್ , ಹೊನ್ನವಳ್ಳಿ ಕೃಷ್ಣ ಹಾಗೂ ಹಿರಿಯ ಕಂಠದಾನ ಕಲಾವಿದೆ ಆಶಾ ಬಿಡುಗಡೆ ಮಾಡಿದ್ದಾರೆ.

 Sharesee more..
“ಆಕ್ಟ್-1978” ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ

“ಆಕ್ಟ್-1978” ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ

28 Nov 2020 | 9:52 PM

ಬೆಂಗಳೂರು, ನ 28 (ಯುಎನ್‍ಐ) ಲಾಕ್ ಡೌನ್ ಬಳಿಕ ಬಿಡುಗಡೆಯಾದ ದಕ್ಷಿಣದ ಮೊದಲ ನೂತನ ಚಿತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿರುವ “ಆಕ್ಟ್ -1978” ಚಿತ್ರಕ್ಕೆ ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..
ಆಲ್ಬಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ

ಆಲ್ಬಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ "ಜೊತೆ ಜೊತೆಯಲಿ" ಮೇಘಾ ಶೆಟ್ಟಿ

28 Nov 2020 | 9:49 PM

ಬೆಂಗಳೂರು, ನ 28 (ಯುಎನ್‍ಐ) ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದು, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಮೇಘಾ ಶೆಟ್ಟಿ, ಇದೀಗ ಆಲ್ಬಂ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

 Sharesee more..