Sunday, Dec 6 2020 | Time 00:33 Hrs(IST)
National Share

ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ

ನವದೆಹಲಿ, ಅ 22 (ಯುಎನ್ಐ) ವಿಭಿನ್ನ ಸಶಸ್ತ್ರ ಪಡೆಗಳ ಸಿಬ್ಬಂದಿಯ ಪಿಂಚಣಿ ಸೌಲಭ್ಯಗಳಲ್ಲಿ ತಾರತಮ್ಯ ನಿವಾರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿವೆ.
ಬಿಜೆಪಿ ನಾಯಕ ಮತ್ತು ವಕೀಲ ಅಜಯ್‌ ಅಗರ್‌ವಾಲ್‌ ಅವರು ಹಮಾರಾ ದೇಶ್‌ ಹಮಾರೆ ಜವಾನ್‌ ಟ್ರಸ್ಟ್‌ ಪರವಾಗಿ ಈ ಅರ್ಜಿ ಸಲ್ಲಿಸಿದ್ದು, 2004ರ ಜ.1 ಅಧಿಸೂಚನೆ ಪ್ರಕಾರ, ಗೃಹ ಸಚಿವಾಲಯದ ಮೂಲಕ ಜಾರಿಗೊಳಿಸಲಾಗಿರುವ ಬೃಹತ್‌ ಪಿಂಚಣಿ ಯೋಜನೆ ಸಶಸ್ತ್ರ ಪಡೆಗಳ ಸಿಬ್ಬಂದಿಯ ಹೊಸ ಮತ್ತು ಹಳೆಯ ಪಿಂಚಣಿಗಳ ಮಿಶ್ರಣವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಗೃಹ ಸಚಿವಾಲಯದಡಿ ಬರುವ ಸೇನೆ, ವಾಯುಪಡೆ, ನೌಕಾಪಡೆಗಳು, ಬಿಎಸ್‌ಎಫ್‌, ಸಿಐಎಸ್‌ಎಫ್‌, ಸಿಆರ್‌ಪಿಎಫ್‌, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ ಮತ್ತು ಅಸ್ಸಾಂ ರೈಫಲ್‌ಗಳಿಗೆ ಪಿಂಚಣಿ ದೊರೆಯಲಿದೆ ಎಂದರು.
"ಆದರೆ, ಕೇಂದ್ರವು ಹಳೆಯ ಯೋಜನೆಯಡಿಯಲ್ಲಿ ಪಿಂಚಣಿಯನ್ನು ನಿರಾಕರಿಸಿದೆ ಮತ್ತು ಆದ್ದರಿಂದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಶಸ್ತ್ರ ಪಡೆಗಳೊಂದಿಗೆ ತಾರತಮ್ಯ ಮಾಡುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಹಲವಾರು ಮನವಿಗಳ ನಂತರವ 2003ರ ಡಿಸೆಂಬರ್ ಅಧಿಸೂಚನೆಯ ನಿಬಂಧನೆಗಳನ್ನು ಗೃಹ ಸಚಿವಾಲಯ ಸಶಸ್ತ್ರ ಪಡೆಗಳಿಗೆ ಕೇಂದ್ರವು ಕಾನೂನುಬಾಹಿರವಾಗಿ ವಿಸ್ತರಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಯುಎನ್ಐ ಎಸ್ಎಚ್ 1756
More News
ಜನವರಿ ವೇಳೆಗೆ ತುರ್ತು ಬಳಕೆಗೆ ಕೊರೋನ ಲಸಿಕೆ ಲಭ್ಯ: ರಣದೀಪ್ ಗುಲೇರಿಯಾ

ಜನವರಿ ವೇಳೆಗೆ ತುರ್ತು ಬಳಕೆಗೆ ಕೊರೋನ ಲಸಿಕೆ ಲಭ್ಯ: ರಣದೀಪ್ ಗುಲೇರಿಯಾ

05 Dec 2020 | 5:34 PM

ನವದೆಹಲಿ, ಡಿ 5 (ಯುಎನ್ಐ) ಮೂರನೇ ಹಂತದ ಪ್ರಯೋಗದಲ್ಲಿರುವ ಎರಡು ಕೊರೊನಾ ಸೋಂಕು ನಿವಾರಕ ಲಸಿಕೆ ಹೊಸ ವರ್ಷದ 2021ರ ಜನವರಿ ವೇಳೆಗೆ ದೇಶದಲ್ಲಿ ತುರ್ತು ಬಳಕೆಗೆ ಲಭ್ಯವಾಗಬಹುದು ಎಂಬ ವಿಶ್ವಾಸವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಗಳ (ಏಮ್ಸ್) ನಿರ್ದೇಶಕ ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ.

 Sharesee more..
ದೇಶದಲ್ಲಿ 96 ಲಕ್ಷ  ಕೊರೋನ ಸೋಂಕು ಪ್ರಕರಣ, 14 ಕೋಟಿ ಪರೀಕ್ಷೆ

ದೇಶದಲ್ಲಿ 96 ಲಕ್ಷ ಕೊರೋನ ಸೋಂಕು ಪ್ರಕರಣ, 14 ಕೋಟಿ ಪರೀಕ್ಷೆ

05 Dec 2020 | 3:03 PM

ನವದೆಹಲಿ, ಡಿ, 5 (ಯುಎನ್ಐ ) ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ರಮೆಣ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 36,652 ಪ್ರಕರಣ ದಾಖಲಾಗಿದೆ.

 Sharesee more..
ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರ ತೊಂದರೆ ನೀಡಿದೆ : ರಾಹುಲ್

ದೇಶದ ಎಲ್ಲ ರೈತರಿಗೂ ಕೇಂದ್ರ ಸರ್ಕಾರ ತೊಂದರೆ ನೀಡಿದೆ : ರಾಹುಲ್

05 Dec 2020 | 2:57 PM

ನವದೆಹಲಿ, ಡಿ 05 (ಯುಎನ್ಐ) ಎಂಎಸ್ ಪಿ ಮತ್ತು ಎಪಿಎಂಸಿ ಇಲ್ಲದೆ ಬಿಹಾರದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ರೈತರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.

 Sharesee more..