Saturday, Feb 29 2020 | Time 14:15 Hrs(IST)
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
 • ಪುಲ್ವಾಮಾ ಪ್ರಕರಣ: ಕಾಶ್ಮೀರದಲ್ಲಿ ಎನ್‌ಐಎ ದಾಳಿ ಮುಂದುವರಿಕೆ
 • ಮಹಿಳಾ ಟಿ20 ವಿಶ್ವಕಪ್: ಕೊನೆಯ ಪಂದ್ಯದಲ್ಲೂ ಭಾರತ ವನಿತೆಯರಿಗೆ ಭರ್ಜರಿ ಜಯ
 • ಮೈಸೂರಿನಲ್ಲಿ ಇಬ್ಬರು ಬಾಂಗ್ಲಾ ದೇಶ ಅಕ್ರಮ ವಲಸಿಗರ ಬಂಧನ
 • ಎರಡನೇ ಟೆಸ್ಟ್: ಭಾರತ 242ಕ್ಕೆ ಆಲೌಟ್ ; ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವ
 • ಪ್ರಧಾನಿ ಆಗಮನಕ್ಕೂ ಮುನ್ನ ಪ್ರಯಾಗ್ ರಾಜ್ ನಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ
 • ಉತ್ತರ ಕಾಶ್ಮೀರದಲ್ಲಿ ಭಾರೀ ಹಿಮಪಾತ: ಹಲವು ಪ್ರದೇಶಗಳಿಗೆ ಸಂಪರ್ಕ ಕಡಿತ
 • ಮಾಜಿ ಸಚಿವರ ಸಹೋದರನ ಕೊಚ್ಚಿ ಕೊಲೆ
 • ಇಂದಿರಾ ಕ್ಯಾಂಟೀನ್ ಊಟ, ತಿಂಡಿ ದರ ಹೆಚ್ಚಳಕ್ಕೆ ಬಿಬಿಎಂಪಿ ಪರಿಶೀಲನೆ ?
 • ಉಗ್ರರ ಕಾಳಗದಲ್ಲಿ ರಾಜ್ಯದ ಯೋಧ ಹುತಾತ್ಮ: ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ
 • ಐಸಿಸಿ ಮಹಿಳಾ ಟಿ -20 ಡಬ್ಲ್ಯೂಸಿ: ಶ್ರೀಲಂಕಾ ಟಾಸ್ ಗೆಲುವು, ಭಾರತದ ವಿರುದ್ಧ ಬ್ಯಾಟಿಂಗ್ ಆಯ್ಕೆ
Special Share

ಸಿಎಎ ವಿಷಯದಲ್ಲಿ ರವಿಶಂಕರ್ ಗುರೂಜಿ ಕೇಂದ್ರಕ್ಕೆ ಸಂಚಲನ ಸಲಹೆ

ಸಿಎಎ ವಿಷಯದಲ್ಲಿ ರವಿಶಂಕರ್ ಗುರೂಜಿ ಕೇಂದ್ರಕ್ಕೆ ಸಂಚಲನ ಸಲಹೆ
ಸಿಎಎ ವಿಷಯದಲ್ಲಿ ರವಿಶಂಕರ್ ಗುರೂಜಿ ಕೇಂದ್ರಕ್ಕೆ ಸಂಚಲನ ಸಲಹೆ

ನವದೆಹಲಿ, ಫೆ ೧೩ (ಯುಎನ್‌ಐ) ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ವಿಷಯದಲ್ಲಿ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ಸಂಚಲನಾತ್ಮಕ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರದ ಮುಂದಿರಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಿರುಕುಳಗಳಿಗೆ ಒಳಗಾಗುವ ಮುಸ್ಲಿಮರನ್ನು ಸಹ ಸಿಎಎ ಕಾಯ್ದೆಯಡಿ ಸೇರ್ಪೆಡೆಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಸಮ್ಮಿಟ್ -೨೦೨೦ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಅತ್ಯಗತ್ಯವಾಗಿದೆ. ಪಾಕಿಸ್ತಾನದಲ್ಲಿ ಮುಸ್ಲಿಮರಲ್ಲಿನ ಒಂದು ವರ್ಗ ಕೂಡಾ ಅಲ್ಲಿ ತೀವ್ರ ಕಿರುಕುಳ ಎದುರಿಸುತ್ತಿದೆ. ನಾವು ಅವರ ಬಗ್ಗೆಯೂ ಆಲೋಚಿಸಬೇಕು. ಮುಸ್ಲಿಂ ದೇಶದಲ್ಲಿ ಮುಸ್ಲಿಮರೇ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಲು ಯಾವುದೇ ಸಂಕೋಚ ಪಡುವ ಅಗತ್ಯವಿಲ್ಲ ಎಂದು ರವಿಶಂಕರ್ ಹೇಳಿದ್ದಾರೆ.

.

ಈ ಹಿಂದೆಯೂ ಶ್ರೀ ಶ್ರೀ ಶ್ರೀ ಇದೇ ರೀತಿಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ದೇಶದಲ್ಲಿ ನೆಲೆಸಿರುವ ಶ್ರೀಲಂಕಾದ ನಿರಾಶ್ರಿತ ತಮಿಳರಿಗೆ ಭಾರತೀಯ ಪೌರತ್ವ ನೀಡಬೇಕು ಎಂದು ಸೂಚಿಸಿ. ಸಿಎಎ ಕಾಯ್ದೆ ವ್ಯಾಪ್ತಿಗೆ ಶ್ರೀಲಂಕಾದ ತಮಿಳರನ್ನು ಸೇರಿಸಬೇಕು ಎಂದರು. ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಗಳಾಗಿದ್ದ ಅವಧಿಯಲ್ಲಿ ಈ ಸಂಬಂಧ ಅಭಿಯಾನ ನಡೆಸಿ, ಒಂದು ಕೋಟಿ ಸಹಿಗಳನ್ನು ಸಂಗ್ರಹಿಸಲಾಗಿತ್ತು. ೩೫ ವರ್ಷಗಳಿಂದ ದೇಶದಲ್ಲಿ ನೆಲೆಸಿರುವ ಶ್ರೀಲಂಕಾ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕಲ್ಪಿಸಬೇಕೆಂಬ ಬೇಡಿಕೆಯನ್ನು ರವಿಶಂಕರ್ ಮತ್ತೆ ಸ್ಮರಿಸಿದ್ದಾರೆ.

ಇನ್ನೂ ಅಯೋಧ್ಯೆಯ ವಿಷಯ ಕುರಿತು ಪ್ರತಿಕ್ರಿಯಿಸಿದ ರವಿಶಂಕರ್ ಅಯೋಧ್ಯೆಯ ವಿಷಯ ಮುಗಿದಿದೆ. ವಿವಾದ ಇತ್ಯರ್ಥಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.

ಯುಎನ್‌ಐ ಕೆವಿಆರ್ ೧೪೧೮