Monday, Aug 2 2021 | Time 13:54 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Karnataka Share

ಸಿಎಂ ಬದಲಾವಣೆ ವಿಚಾರ; ಅಖಿಲ ಭಾರತ ವೀರ ಶೈವ ಮಹಾಸಭೆ ತೀವ್ರ ವಿರೋಧ.

ಸಿಎಂ ಬದಲಾವಣೆ ವಿಚಾರ; ಅಖಿಲ ಭಾರತ ವೀರ ಶೈವ ಮಹಾಸಭೆ ತೀವ್ರ ವಿರೋಧ.
ಸಿಎಂ ಬದಲಾವಣೆ ವಿಚಾರ; ಅಖಿಲ ಭಾರತ ವೀರ ಶೈವ ಮಹಾಸಭೆ ತೀವ್ರ ವಿರೋಧ.

ಬೆಂಗಳೂರು, ಜು.21(ಯುಎನ್ಐ) ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸದೇ ಸದ್ಯ ಇರುವ ಗೊಂದಲಕ್ಕೆ ಬಿಜೆಪಿ ಹೈ ಕಮಾಂಡ್ ಮಧ್ಯ ಪ್ರವೇಶಿಸಿ ತೆರೆ ಎಳೆಯಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಸಭಾದ ರಾಷ್ಟ್ರೀಯ ಅಧ್ಯಕ್ಷ. ಮಹಾಂತೇಶ್ ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ತಮ್ನದೇ ಶ್ರಮ ಹಾಕಿದ್ದಾರೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತವೆ. ಈ ಮಧ್ಯೆ ನಾಯಕತ್ವದ ಬದಲಾವಣೆಯ ಗೊಂದಲ ಸೃಷ್ಢಿ ಮಾಡಿ, ಜನರನ್ನು ದಿಕ್ಜು ತಪ್ಪಿಸುವ ಕಾರ್ಯ ನಡೆಸುವುದು ಸರಿಯಲ್ಲ. ಕೂಡಲೇ ಹಾಡಬೇಕೆಂದರು.

ಮಹಾಸಭಾದ ಯುವ ಘಟಕದ ಅಧ್ಯಕ್ಷ ಜಿ.ಮನೋಹರ್ ಅಬ್ಬಿಗೆರೆ ಮಾತನಾಡಿ,ಕೊರೋನಾದಂತಹ ಸಂಕಷ್ಟ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರ ನಡುವೆ ಪ್ರತಿ ನಿತ್ಯ ನಾಯಕತ್ವ ಬದಲಾವಣೆ ಎಂಬ ವಿಷಯವನ್ಬು ಸಾರ್ವಜನಿಕರಲ್ಲಿ ಮೂಡಿಸಿ ಗೊಂದಲ ಸೃಷ್ಢಿ ಮಾಡುವುದು ಸರಿಯಲ್ಲ. ಪ್ರಧಾನಿ.ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಇದಕ್ಕೆ ತಡೆನೀಡಬೇಕು ಎಂದು ಹೇಳಿದರು.

ಯುಎನ್ಐ ಯುಎಲ್, 2004